ಬೆಳೆವಿಮೆ ನೊಂದಣೆ ಪ್ರಾರಂಭ,ಎಷ್ಟು ಬೆಳೆವಿಮೆ ಕಟ್ಟಿದರೆ,ಎಷ್ಟು ಬೆಳೆವಿಮೆ ಸಿಗುತ್ತೆ ಹೀಗೆ ಲೆಕ್ಕ ಹಾಕಿ-Crop insurance premium calculator
ಬೆಳೆವಿಮೆ ನೊಂದಣೆ ಪ್ರಾರಂಭ,ಎಷ್ಟು ಬೆಳೆವಿಮೆ ಕಟ್ಟಿದರೆ,ಎಷ್ಟು ಬೆಳೆವಿಮೆ ಸಿಗುತ್ತೆ ಹೀಗೆ ಚೆಕ್ ಮಾಡಿ-Crop insurance premium calculator

ಬೆಳೆವಿಮೆ ನೊಂದಣೆ ಪ್ರಾರಂಭ,ಎಷ್ಟು ಬೆಳೆವಿಮೆ ಕಟ್ಟಿದರೆ,ಎಷ್ಟು ಬೆಳೆವಿಮೆ ಸಿಗುತ್ತೆ ಹೀಗೆ ಚೆಕ್ ಮಾಡಿ-Crop insurance premium calculator
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್
ಬಿಮಾ(ವಿಮಾ) ಯೋಜನೆಯಡಿ 2025-26ನೇ ಸಾಲಿನ ಬೆಳೆ ವಿಮೆಗೆ ನೋಂದಣಿ ಶುರುವಾಗಿದೆ. ಪ್ರಕೃತಿ ವಿಕೋಪ ಹಾಗೂ ಕೀಟರೋಗ ಬಾಧೆಯಿಂದ ಬೆಳೆನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಭದ್ರತೆ ಕಲ್ಪಿಸಲಾಗುತ್ತದೆ
ಬೆಳೆಸಾಲ ಪಡೆದ ಹಾಗೂ ಬೆಳೆಸಾಲ ಪಡೆಯದ ರೈತರು ಬೆಳೆ ವಿಮೆಯಡಿ ಒಳಪಡುವುದು ಐಚ್ಛಿಕವಾಗಿರುತ್ತದೆ. ಬೆಳೆಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛೆ ಪಡದೇ ಇದ್ದಲ್ಲಿ, ಈ ಕುರಿತು ಬ್ಯಾಂಕ್ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು.
ಅಭಿಸೂಚಿಸಲಾದ ಬೆಳೆಗಳಿಗೆ ರೈತರು ತಮ್ಮ ಜಮೀನಿನ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಪ್ರತಿಗಳೊಂದಿಗೆ ಸಮೀಪದ ಬ್ಯಾಂಕ್ ಅಥವಾ ನಾಗರಿಕ ಸೇವಾ ಕೇಂದ್ರಗಳು ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.
ವಿಮಾ ಪರಿಹಾರ:
ಮಳೆ ಅಭಾವದಿಂದ ವಿಮಾ ಘಟಕದಲ್ಲಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ದೀರ್ಘಕಾಲದ ತೇವಾಂಶ ಕೊರತೆ, ತೀವ್ರ ಬರಗಾಲ, ಮುಳುಗಡೆ ಮುಂತಾದವುಗಳಿಂದ ಯಾವುದೇ ಅಧಿಸೂಚಿತ ವಿಮಾ ಘಟಕದಲ್ಲಿ ಬಿತ್ತನೆಯಾದ ನಂತರ ಕಟಾವಿಗೆ 15 ದಿನಗಳಿಗಿಂತ ಮೊದಲು ಬೆಳೆ ಹಾನಿಯಾಗಿದ್ದಲ್ಲಿ ಪರಿಹಾರ ಪಡೆದುಕೊಳ್ಳಬಹುದು. ಜತೆಗೆ, ಬೆಳೆ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲೆ ಒಣಗಲು ಬಿಟ್ಟಂತಹ ಕಟಾವು ಮಾಡಿದ ಎರಡು ವಾರಗಳೊಳಗೆ (14 ದಿನಗಳು) ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ಪರಿಹಾರ ಪಡೆಯಬಹುದಾಗಿದೆ.
Belevime Premium calculator-ಈ ವರ್ಷ ಯಾವ ಬೆಳೆಗೆ ಎಷ್ಟು ಬೆಳೆವಿಮೆ ಕಟ್ಟಿದರೆ ಎಷ್ಟು ಬೆಳೆವಿಮೆ ಬರಲಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://samrakshane.karnataka.gov.in/
ನಂತರ ವರ್ಷದ ಆಯ್ಕೆ "2025-26" ಮತ್ತು ಋುತು "Kharif
" ಎಂದು select ಮಾಡಿ, "ಮುಂದೆ/Go" ಮೇಲೆ click ಮಾಡಿ
Farmer ಕಾಲಂನಲ್ಲಿ "Premium calculator" ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ,ಗ್ರಾಮ,ಬೆಳೆ,ಎಕರೆ,ಗುಂಟೆ selet ಮಾಡಿ Show premium ಮೇಲೆ ಕ್ಲಿಕ್ ಮಾಡಿ
ಈ ಕೆಳಗಿನಂತೆ ಯಾವ ಬೆಳೆಗೆ ಎಷ್ಟು ಬೆಳೆವಿಮೆ(crop insurance) ಸಿಗಲಿದೆ ಎಂಬ ಮಾಹಿತಿ ದೊರೆಯಲಿದೆ.