ರೈತರಿಗೆ ಸಿಹಿ ಸುದ್ದಿ: ಆಧಾರ್, ಪಹಣಿ ಸೇರಿದಂತೆ ಅಗತ್ಯ ದಾಖಲೆ ಸಲ್ಲಿಸಿದವರಿಗೆ ತುಂತುರು ನೀರಾವರಿ ಸೌಲಭ್ಯ ಲಭ್ಯ

ರೈತರಿಗೆ ಸಿಹಿ ಸುದ್ದಿ: ಆಧಾರ್, ಪಹಣಿ ಸೇರಿದಂತೆ ಅಗತ್ಯ ದಾಖಲೆ ಸಲ್ಲಿಸಿದವರಿಗೆ ತುಂತುರು ನೀರಾವರಿ ಸೌಲಭ್ಯ ಲಭ್ಯ

ರೈತರಿಗೆ ಸಿಹಿ ಸುದ್ದಿ: ಆಧಾರ್, ಪಹಣಿ ಸೇರಿದಂತೆ ಅಗತ್ಯ ದಾಖಲೆ ಸಲ್ಲಿಸಿದವರಿಗೆ ತುಂತುರು ನೀರಾವರಿ ಸೌಲಭ್ಯ ಲಭ್ಯ

2025-26ನೇ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ತುಂತುರು ನೀರಾವರಿ ಘಟಕಗಳಿಗೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ರೈತರು ಅರ್ಜಿ ನಮೂನೆಯೊಂದಿಗೆ ಆಧಾರ್ ಕಾರ್ಡ್, ನೀರಾವರಿ ಪ್ರಮಾಣ ಪತ್ರ, ಪಹಣಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇದ್ದಲ್ಲಿ ಪ್ರಮಾಣ ಪತ್ರ, ನೋಟರಿಯೊಂದಿಗೆ ರೂ.20/- ಗಳ ಛಾಪಾ ಕಾಗದ, ಬ್ಯಾಂಕ್ ಪಾಸ್ ಬುಕ್, ಆರ್.ಟಿ.ಜಿ.ಎಸ್.

ಪತ್ರಗಳನ್ನು ಸಲ್ಲಿಸಬೇಕು. ಎಫ್‌ಐಡಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ರೈತರು ಈಗಾಗಲೇ ಎಫ್‌ಐಡಿಯನ್ನು ಹೊಂದಿದ್ದಲ್ಲಿ ಅಥವಾ ಹೊಂದಿರದೆ ಇದ್ದಲ್ಲಿ ತಮ್ಮ ಎಲ್ಲಾ ಪಹಣಿಗಳನ್ನು ಎಫ್‌ಐಡಿಗೆ ಜೋಡಣೆ ಮಾಡಿಕೊಳ್ಳಬೇಕು.

ಆಸಕ್ತ ರೈತರು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.