ರೈತರಿಗೆ ಗುಡ್ ನ್ಯೂಸ್: 'ಕೃಷಿ ಸಿಂಚಾಯಿ ಯೋಜನೆ'ಯಡಿ ಹನಿ ನೀರಾವರಿ ಸೌಲಭ್ಯ!
ರೈತರಿಗೆ ಗುಡ್ ನ್ಯೂಸ್: 'ಕೃಷಿ ಸಿಂಚಾಯಿ ಯೋಜನೆ'ಯಡಿ ಹನಿ ನೀರಾವರಿ ಸೌಲಭ್ಯ!

2025-26ನೇ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತುಂತುರು ನೀರಾವರಿ ಘಟಕಗಳಿಗಾಗಿ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು:
ಆಧಾರ್ ಕಾರ್ಡ್
ನೀರಾವರಿ ಪ್ರಮಾಣ ಪತ್ರ
ಪಹಣಿ ಪತ್ರ
ಪರಿಶಿಷ್ಟ ಜಾತಿ/ಪಂಗಡ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ)
ರೂ.20/- ಛಾಪಾ ಕಾಗದ (ನೋಟರಿ ಸಹಿತ)
ಬ್ಯಾಂಕ್ ಪಾಸ್ ಬುಕ್
RTGS ಪತ್ರ
ಎಫ್‌ಐಡಿ (FID) ಕಡ್ಡಾಯ:
ಈಗಾಗಲೇ ಎಫ್‌ಐಡಿ ಹೊಂದಿದ್ದಲ್ಲಿ, ಎಲ್ಲ ಪಹಣಿಗಳನ್ನು ಜೋಡಿಸಿಕೊಳ್ಳಬೇಕು.
ಹೊಂದಿರದವರು ಹೊಸದಾಗಿ ಪಡೆದು ಜೋಡಿಸಿಕೊಳ್ಳಬೇಕು.
ಆಸಕ್ತ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆಯಬಹುದು.