Free electric bike-ಉಚಿತ ಎಲೆಕ್ಟ್ರಿಕ್ ಬೈಕ್,ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮತ್ತು ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಮೇ.2, 2025 ಆಗಿರುತ್ತದೆ.

Free electric bike-ಉಚಿತ ಎಲೆಕ್ಟ್ರಿಕ್ ಬೈಕ್,ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ

Free electric bike-ಉಚಿತ ಎಲೆಕ್ಟ್ರಿಕ್ ಬೈಕ್,ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮತ್ತು ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಮೇ.2, 2025 ಆಗಿರುತ್ತದೆ.


ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2024-25ನೇ ಸಾಲಿನ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದಿದೆ.

ಬೀದಿ ಬದಿ ವ್ಯಾಪಾರಸ್ಥರಿಗೆ ಇ-ವೆಂಡಿಂಗ್ ವಾಹನವನ್ನು ಖರೀದಿಸಲು ಆರ್ಥಿಕ ಸಹಾಯ ಮಾಡಲಾಗುತ್ತದೆ. ಮಾನ್ಯುಯಲ್ ವೆಂಡಿಂಗ್ ವಾಹನ ಹಾಗೂ ಎಲೆಕ್ಟ್ರಿಕಲ್ ಇ-ವೆಂಡಿಂಗ್ ವಾಹನ ಖರೀದಿಸಲು ಸಹಾಯಧನ ಮಾಡಲಾಗುತ್ತದೆ ಎಂದು ತಿಳಿಸಿದೆ.

ಇ-ವೆಂಡಿಂಗ್ ವಾಹನದ ಗರಿಷ್ಠ ಮೊತ್ತ ರೂ.1,50,000 ಆಗಿರುತ್ತದೆ. ಇದರಲ್ಲಿ ಶೇ.90ರಷ್ಟು ಬಿಬಿಎಂಪಿ ಸಹಾಯಧನವಾಗಿದ್ದರೇ, ಶೇ.10ರಷ್ಟು ಬಂಡವಾಳ ನೀಡಲು ಸಿದ್ಧರಿರುವ ಬೀದಿ ಬದಿಯ ವ್ಯಾಪಾರಿಗಳು ಇ-ವೆಂಡಿಂಗ್ ವಾಹನ ಖರೀದಿಸಲು ಅರ್ಜಿ ಸಲ್ಲಿಸಬಹುದಾಗಿದೆ ಎಂಬುದಾಗಿ ಹೇಳಿದೆ.

ಯಾವೆಲ್ಲಾ ವಾಹನ ಖರೀದಿಗೆ ಸಹಾಯಧನ?

ಮಾನ್ಯುಯಲ್ ವೆಂಡಿಂಗ್ ವಾಹನ
ಎಲೆಕ್ಟ್ರಿಕಲ್ ಇ-ವೆಂಡಿಂಗ್ ವಾಹನ
ತರಕಾರಿ ಇ-ವೆಂಡಿಂಗ್ ವಾಹನ, ಹೂ ಮಾರಾಟ ಇ-ವೆಂಡಿಂಗ್ ವಾಹನ, ಐಸ್ ಕ್ರೀಂ ಇ-ವೆಂಡಿಂಗ್ ವಾಹನ, ಪ್ರೂಟ್ಸ್ ಇ-ವೆಂಡಿಂಗ್ ವಾಹನ, ಪ್ರೂಟ್ ಜ್ಯೂಸ್ ಇ-ವೆಂಡಿಂಗ್ ವಾಹನ, ಪಾನಿಪೂರಿ ಮತ್ತು ಚಾಟ್ಸ್ ಇ-ವೆಂಡಿಂಗ್ ವಾಹನ, ಫಾಸ್ಟ್ ಪುಡ್ ಇ-ವೆಂಡಿಂಗ್ ವಾಹನ, ಬಟ್ಟೆ ಇ-ವೆಂಡಿಂಗ್ ವಾಹನ ಹಾಗೂ ಇತರೆ ಇ-ವೆಂಡಿಂಗ್ ವಾಹನ ಖರೀದಿಸಲು ಆರ್ಥಿಕ ನೆರವಿನ ಸಹಾಯಧನವನ್ನು ಬಿಬಿಎಂಪಿ ನೀಡಲಿದೆ.

ಅರ್ಜಿಯೊಂದಿಗೆ ಈ ದಾಖಲೆ ಸಲ್ಲಿಕೆ ಕಡ್ಡಾಯ

ವಾಸ ದೃಢೀಕರಣ ಪ್ರಮಾಣ ಪತ್ರ
ಆಧಾರ್ ಪ್ರತಿ
ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ
ಪಡಿತರ ಚೀಟಿ
ವಾರ್ಷಿಕ ಆದಾಯ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರ
ತೃತೀಯ ಲಿಂಗ ಎಂಬುದರ ಬಗ್ಗೆ ಸಂಬಂಧ ಪಟ್ಟ ಇಲಾಖೆಯ ಪ್ರಮಾಣ ಪತ್ರ
ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ
ಕಾರ್ಯಕ್ರಮಕ್ಕೆ ತಕ್ಕಂತೆ ಅಗತ್ಯವಾಗಿ ಬೇಕಾಗಿರುವ ದಾಖಲೆಗಳು.


ಈ ಮೇಲ್ಕಂಡ ದಾಖಲೆಗಳೊಂದಿಗೆ ಮಹಾನಗರ ಪಾಲಿಕೆ ಕಚೇರಿಗೆ ತೆರಳಿ, 2024-25ನೇ ಸಾಲಿನ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ಅರ್ಜಿ ನಮೂನೆಯನ್ನು ಪಡೆದು, ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇಲ್ಲವೇ ಈ ಸುದ್ದಿಯ ಕೆಳಗಿರುವಂತ ಅರ್ಜಿಯನ್ನು ಭರ್ತಿ ಮಾಡಿ, ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬಹುದು. ಈ ಸಂಬಂಧದ ಹೆಚ್ಚಿನ ಮಾಹಿತಿಗಾಗಿ https://bbmp.gov.in/home  ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಬಹುದಾಗಿದೆ.