Gold rate today-ಬಂಗಾರದ ಬೆಲೆ 55,000 ಕ್ಕೆ ಇಳಿಯುತ್ತಾ? ಇಲ್ಲಾ 1 ಲಕ್ಷಕ್ಕೆ ಏರುತ್ತಾ?
ಚಿನ್ನದ ದರ (Gold Price) ಪ್ರತಿ 10 ಗ್ರಾಮ್‌ಗೆ 55 ಸಾವಿರ ರೂ.ಗೆ ಇಳಿಯುತ್ತದೆಯಂತೆ ಹೌದಾ? ಎಂಬ ಪ್ರಶ್ನೆಯನ್ನು ನೀವು ಕೇಳಿರಬಹುದು. ಆದರೆ ಮತ್ತೊಂದು ಕಡೆ ಮಾರುಕಟ್ಟೆಯಲ್ಲಿ ಈಗ 24 ಕ್ಯಾರಟ್ ಚಿನ್ನದ ದರ 95,670 ರೂ. ಎತ್ತರದ ಮಟ್ಟದಲ್ಲಿದೆ (Gold rates in India).

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ದರ ಏರುಗತಿಯಲ್ಲಿದ್ದು, ಪ್ರತಿ ಔನ್ಸಿಗೆ 3,100 ಡಾಲರ್ ಮೇಲಿದೆ. ಹಾಗಾದರೆ ವಾಸ್ತವವಾಗಿ ಏನಾಗುತ್ತಿದೆ? ಬಂಗಾರದ ದರ 55 ಸಾವಿರ ರೂ.ಗೆ ಇಳಿಯಲಿದೆ ಎಂದು ಹೇಳಿದವರು ಯಾರು? ಈ ಎಲ್ಲ ವಿವರಗಳನ್ನು ತಿಳಿದುಕೊಳ್ಳೋಣ.
ಭಾರತದಲ್ಲಿ ಬಂಗಾರ ಎಂದರೆ ಬಹುತೇಕ ಎಲ್ಲರಿಗೂ ಇಷ್ಟ. ಅದಕ್ಕೆ ಸಂಬಂಧಿಸಿ ಜಗತ್ತಿನ ಯಾವುದೇ ಭಾಗದಲ್ಲಿ ಸಣ್ಣ ಸುದ್ದಿಯಾದರೂ, ಕೋಟ್ಯಂತರ ಭಾರತೀಯರಿಗೆ ಹೇಗೋ ತಲುಪುತ್ತೆ. ಇತ್ತೀಚೆಗೆ ಅದೊಂದು ಸುದ್ದಿ ಹರಡಿದೆ. ಚಿನ್ನದ ದರ 55 ಸಾವಿರ ರೂ.ಗೆ ಇಳಿಯುತ್ತದೆಯಂತೆ ಎಂಬ ಅಂತೆ ಕಂತೆಗಳ ಸುದ್ದಿ ಮನೆಮನೆಗೂ ಮುಟ್ಟಿದೆ. ಆದರೆ ನೆನಪಿಡಿ ಸದ್ಯದ ಪರಿಸ್ಥಿತಿ ನೋಡಿದರೆ ಇಂತಹ ಸಾಧ್ಯತೆ ಕಡಿಮೆ. ಜತೆಗೆ ಅದೊಂದು ವದಂತಿಯಷ್ಟೇ. ಮಾತ್ರವಲ್ಲದೆ ಚಿನ್ನದ ದರ 1 ಲಕ್ಷ ರೂ. ಗಡಿ ದಾಟಲಿದೆ ಎಂಬ ವರದಿಗಳಿವೆ. ಆ ವರದಿಗಳು ವಾಸ್ತವವಕ್ಕೆ ಹತ್ತಿರದಲ್ಲಿದೆ ಎನ್ನಬಹುದು. ಏಕೆಂದರೆ ಈಗಾಗಲೇ ಚಿನ್ನದ ದರ 94-95 ಸಾವಿರ ರೂ.ಯ ಉನ್ನತ ಮಟ್ಟದಲ್ಲಿ ಇದೆ.