ಗೃಹಲಕ್ಷ್ಮಿ 3 ಕಂತುಗಳ 6,000 ರೂಪಾಯಿ ಹಣ ಜಮೆ ಬಗ್ಗೆ ಆದೇಶ

ಗೃಹಲಕ್ಷ್ಮಿ 3 ಕಂತುಗಳ 6,000 ರೂಪಾಯಿ ಹಣ ಜಮೆ ಬಗ್ಗೆ ಆದೇಶ

ಗೃಹಲಕ್ಷ್ಮಿ 3 ಕಂತುಗಳ 6,000 ರೂಪಾಯಿ ಹಣ ಜಮೆ ಬಗ್ಗೆ  ಆದೇಶ

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಈ ಪೈಕಿ ಗೃಹಲಕ್ಷ್ಮಿ ಪ್ರಮುಖ ಯೋಜನೆಯಾಗಿದ್ದು, ಇದರ ಅಡಿಯಲ್ಲಿ ಪ್ರತಿ ಮನೆ ಯಜಮಾನಿ ಬ್ಯಾಂಕ್‌ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಹಾಕಲಾಗುತ್ತಿದೆ.

ಆದರೆ, 22, 23, 24ನೇ ಕಂತುಗಳು ಸೇರಿ 6,000 ರೂಪಾಯಿ ಬಾಕಿಯಿದೆ. ಇದು ಯಾವಾಗ ಬರಬಹುದು ಎಂಬ ಅಂದಾಜು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕಾಂಗ್ರೆಸ್‌ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಇದರಡಿಯಲ್ಲಿ ನೀಡಲಾಗುವ ಪ್ರತಿ ತಿಂಗಳು 2,000 ರೂಪಾಯಿಯಿಂದ ರಾಜ್ಯದಲ್ಲಿನ ಅದೆಷ್ಟೋ ಮಹಿಳೆಯರು ತಮ್ಮ ಮನೆ ಖರ್ಚು-ವೆಚ್ಚಗಳನ್ನು ನಿಭಾಯಿಸುತ್ತಿದ್ದಾರೆ. ಆದರೆ, ಕಳೆದ ಮೂರು ಕಂತುಗಳ ಹಣ ಬಾಕಿಯಿದ್ದು, ಇದು ಯಾವಾಗ ಬರುತ್ತದೆ ಎನ್ನುವುದು ಮಹಿಳೆಯ ಪ್ರಶ್ನೆಯಾಗಿದೆ. ಅಲ್ಲದೆ, ಆಕ್ರೋಶವನ್ನು ಸಹ ಹೊರಹಾಕುತ್ತಿದ್ದಾರೆ.

ಕಳೆದ 21ನೇ ಕಂತಿನ ಹಣವನ್ನು ವರಮಹಾಲಕ್ಷ್ಮಿ ಹಬ್ಬದ ವೇಳೆ ಜಮೆ ಮಾಡಲಾಗಿತ್ತು. 22, 23, 24ನೇ ಕಂತಿನ ಹಣ ಕಳೆದ ಬಾರಿ ಹಬ್ಬದಂತೆ ಗಣೇಶ ಚತುರ್ಥಿ ದಿನದಂದು ಜಮೆಯಾಗುವ ಆಲೋಚನೆಯಲ್ಲಿ ಮಹಿಳೆಯರಿದ್ದರು. ಆದರೆ, ಈಗಾಗಲೇ ಗಣೇಶ ಚತುರ್ಥಿ ಆರಂಭವಾದರೂ ಯಾವುದೇ ಹಣ ಜಮೆಯಾಗಿಲ್ಲ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ. ಇನ್ನೂ ಮುಂಬರುವ ತಿಂಗಳು ದಸರಾ ಆರಂಭ ಆಗಲಿದ್ದು, ಆ ವೇಳೆಯೇ ಮೂರು ಕಂತಿನ 6,000 ರೂಪಾಯಿ ಬ್ಯಾಂಕ್‌ ಖಾತೆಗೆ ಹಾಕುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇಲ್ಲದಿದ್ದರೆ, ಎರಡು ಕಂತಿನ 4,000 ಹಣ ಹಾಕಿ ಮುಂದಿನ ಕಂತುಗಳ ಹಣವನ್ನು ಒಟ್ಟಿಗೆ ದೀಪಾವಳಿಗೆ ಹಾಕುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ, ಕೆಲ ಮಹಿಳೆಯರು ಮಾತ್ರ ಈಗಎರಡು ಕಂತುಗಳ ಹಣವನ್ನಾದರೂ ಮೊದಲು ಹಾಕಿ. ಆಮೇಲೆ ಉಳಿದ ಕಂತುಗಳ ಹಣ ಜಮಾ ಮಾಡಿ ಎಂದು ಹೇಳುತ್ತಿದ್ದಾರೆ. ಮತ್ತೊಂದೆಡೆ ಇನ್ನೂ ಕೆಲವರು ಎಲ್ಲಾವನ್ನು ಹಾಕಿ ಎಂದು ಹೇಳುತ್ತಿದ್ದಾರೆ. ಇತ್ತೀಚೆಗಷ್ಟೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳಿದಂತೆ ಶೀಘ್ರದಲ್ಲೇ ಜಮೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಗೃಹಲಕ್ಷ್ಮೀಯರ ಖಾತೆಗೆ 21ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಇನ್ನು 22ನೇ ಕಂತಿನ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಯಾಕಂದ್ರೆ 21ನೇ ಕಂತಿನ ಹಣವನ್ನು ವರಮಹಾಲಕ್ಷ್ಮೀ ಹಬ್ಬದಂದೇ ಹಾಕಲಾಗಿತ್ತು. ಹಾಗೆಯೇ ಮುಂಬರು ಹಬ್ಬದಂದೇ ಉಳಿದ ಎಲ್ಲಾ ಕಂತುಗಳು ಇಲ್ಲ ಅಂದ್ರೆ ಎರಡು ಕಂತುಗಳ ಹಣ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಆದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಗೃಹ ಲಕ್ಷ್ಮೀ ಯೋಜನೆ ಅಡಿಯಲ್ಲಿ ಒಟ್ಟು 1.24 ಕೋಟಿ ಫಲಾನುಭವಿಗಳು ಯಶಸ್ವಿಯಾಗಿ ಹಣ ಪಡೆದುಕೊಂಡಿದ್ದಾರೆ. ಯೋಜನೆ ಆರಂಭ ಆದಾಗಿನಿಂದ ಇಲ್ಲಿಯವರೆಗೆ ಒಟ್ಟು 1.06 ಕೋಟಿ ಫಲಾನುಭವಿಗಳು ಎಲ್ಲಾ ಕಂತುಗಳ ಧನ ಸಹಾಯ ಸ್ಪೀಕರಿಸಿದ್ದಾರೆ ಎನ್ನುವ ಮಾಹಿತಿ ಇದೆ.

2023-24ನೇ ಸಾಲಿನಲ್ಲಿ 17,000 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ವೆಚ್ಚ ಭರಿಸಲಾಗಿದೆ 2024-25ನೇ ಸಾಲಿನಲ್ಲಿ 28,608.40 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಲಾಗಿದ್ದು, ಪೂರ್ತಿ ವೆಚ್ಚ ಭರಿಸಲಾಗಿದೆ. 2025-26ನೇ ಸಾಲಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 28,608 ಕೋಟಿಗಳ ಅನುದಾನ ನಿಗದಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ.