Gruhalakshmi update-ಜೂನ್ 14ರೊಳಗೆ ಈ ಕೆಲಸ ಮಾಡಿದವರಿಗೆ ಮಾತ್ರ ಗೃಹಲಕ್ಷ್ಮಿ,ಅನ್ನಭಾಗ್ಯ ಹಣ,ಇಲ್ಲಿದೆ ಅಪ್ಡೇಟ್ ಮಾಡುವ ಡೈರೆಕ್ಟ್ ಲಿಂಕ್

<Krushirushi> <ಗೃಹಲಕ್ಷ್ಮಿ> <Gruhalakshmi update> <ಹಣ> <ಸಂದಾಯ> <ಆಧಾರ್> <ರೈತ> <ಬೆಳೆ ವಿಮೆ> <ಅನ್ನಭಾಗ್ಯ> <ಆಧಾರ್ ಅಪ್ಡೆಟ್> <Aadhaar update> <ಆಧಾರಲಿಂಕ್> <ಆಧಾರ್ ಬ್ಯಾಂಕ್ ಲಿಂಕ್> <Aadhaarbanklink> <seeding status of aadhaar in bank account> <ನೇರನಗದುವರ್ಗಾವಣೆ> <ಡಿಬಿಟಿ> <DBT> <Direct benefit transfer> <aadhaar bank seeding status> <Gruhalakshmi list> <Gruhalakshmi amount>

Gruhalakshmi update-ಜೂನ್ 14ರೊಳಗೆ ಈ ಕೆಲಸ ಮಾಡಿದವರಿಗೆ ಮಾತ್ರ ಗೃಹಲಕ್ಷ್ಮಿ,ಅನ್ನಭಾಗ್ಯ ಹಣ,ಇಲ್ಲಿದೆ ಅಪ್ಡೇಟ್ ಮಾಡುವ ಡೈರೆಕ್ಟ್ ಲಿಂಕ್

Gruhalakshmi update-ಜೂನ್ 14ರೊಳಗೆ ಈ ಕೆಲಸ ಮಾಡಿದವರಿಗೆ ಮಾತ್ರ ಗೃಹಲಕ್ಷ್ಮಿ,ಅನ್ನಭಾಗ್ಯ ಹಣ


ಈ ಮೊದಲು ಆಧಾರ್​ಗೆ ಸಂಬಂಧಿತ ಮಾಹಿತಿ ಅಪ್​ಲೋಡ್​ ಮಾಡಿಕೊಳ್ಳಲು ಜೂನ್ 14 ಕೊನೆಯ ದಿನಾಂಕ. ಅರ್ಥಾತ್, ಆನ್​ಲೈನ್​ನಲ್ಲಿ ಉಚಿತವಾಗಿ ಆಧಾರ್​ ಅಪ್​ಡೇಟ್​ ಮಾಡಿಕೊಳ್ಳಲು ಕೊನೆಯ ಅವಕಾಶ.ಇಲ್ಲದಿದ್ದರೆ ನಿಮ್ಮ ಆಧಾರ್ ನಿಷ್ಕ್ರಿಯವಾಗಲಿದ್ದು,ಗೃಹಲಕ್ಷ್ಮಿ,ಅನ್ನಭಾಗ್ಯ ಸೇರಿದಂತೆ ಆಧಾರ್ ಸಂಭಂದಿತ ಹಣ ಪಾವತಿ ಮಾಡಲು ಬರುವುದಿಲ್ಲ.

ನೀವು ಆಧಾರ್​ ಸಂಖ್ಯೆ ಪಡೆದು ಹತ್ತು ವರ್ಷಗಳಾಗಿದ್ದಲ್ಲಿ ಹಾಗೂ ಇದುವರೆಗೂ ಯಾವುದೇ ಮಾಹಿತಿ ಅಪ್​ಡೇಟ್ ಮಾಡಿಕೊಂಡಿರದಿದ್ದಲ್ಲಿ ಈ ಅವಕಾಶವನ್ನು ಉಚಿತವಾಗಿ ಬಳಸಿಕೊಳ್ಳಬಹುದು. ಅಂದಹಾಗೆ ಇದು ಡೆಮೊಗ್ರಫಿಕ್​ ಡೇಟಾಗಷ್ಟೇ ಸೀಮಿತವಾಗಿರಲಿದೆ ಎಂದು ಯುಐಡಿಎಐ ತಿಳಿಸಿದೆ.

ಈ ಅಪ್​ಡೇಟ್​ಗೆ ಆಧಾರ್​ ಗ್ರಾಹಕ ಸೇವಾ ಕೇಂದ್ರದಲ್ಲಿ 50 ರೂ. ಶುಲ್ಕ ವಿಧಿಸಲಾಗುತ್ತಿದೆ. ಆದರೆ ಆನ್​ಲೈನ್​ನಲ್ಲಿ ಉಚಿತವಾಗಿ ಮಾಡಿಕೊಳ್ಳಲು ಅವಕಾಶವಿದ್ದು,ಹತ್ತು ವರ್ಷಗಳ ಹಿಂದೆ ಆಧಾರ್​ ಪಡೆದವರು ತಮ್ಮ ಇತ್ತೀಚಿಗಿನ ಗುರುತು, ವಾಸದ ವಿಳಾಸ ಇತ್ಯಾದಿ ಮಾಹಿತಿಗಳನ್ನು ಜೂನ್ 14ರ ಒಳಗೆ ಉಚಿತವಾಗಿ ಅಪ್​​ಡೇಟ್ ಮಾಡಿಕೊಳ್ಳಬಹುದು.

ಅಲ್ಲದೆ ಡೆಮೊಗ್ರಫಿಕ್ ಡೇಟಾ ಅಂದರೆ, ಹೆಸರು, ವಿಳಾಸ, ಜನ್ಮದಿನಾಂಕ, ಲಿಂಗ, ಮೊಬೈಲ್​ಫೋನ್​ ನಂಬರ್, ಇ-ಮೇಲ್ ಐಡಿ ವಿವರಗಳನ್ನು ಅಪ್​ಡೇಟ್ ಮಾಡಿಕೊಳ್ಳಬಹುದು.

Free Aadhaar update-ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವ ಡೈರೆಕ್ಟ್ ಲಿಂಕ್

https://myaadhaar.uidai.gov.in/

ಮೊದಲು ಮುಖಪುಟದಲ್ಲಿರುವ login ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಆಧಾರ್ ನಂಬರ್ ಹಾಕಿ,Captcha type ಮಾಡಿ, send OTP ಮೇಲೆ ಕ್ಲಿಕ್ ಮಾಡಿ

ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Login ಮೇಲೆ ಕ್ಲಿಕ್ ಮಾಡಿ

ನಂತರ Document update ಮೇಲೆ ಕ್ಲಿಕ್ ಮಾಡಿ

ನಂತರ Next ಮೇಲೆ ಕ್ಲಿಕ್ ಮಾಡಿ

ನಂತರ ಮತ್ತೆ Next ಮೇಲೆ ಕ್ಲಿಕ್ ಮಾಡಿ

ನಂತರ ಮತ್ತೆ Next ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ POI ಅಂದರೆ ನಿಮ್ಮ ಗುರುತಿನ ಚೀಟಿಯಾಗಿ ಪ್ಯಾನ್ ಕಾರ್ಡ್ ಅಥವಾ ಯಾವುದಾದರು ಗುರುತಿನ ಚೀಟಿಯನ್ನು ಹಾಗೂ POA ಅಂದರೆ ನಿಮ್ಮ ವಿಳಾಸದ ಪುರಾವೆಯನ್ನು select ಮಾಡಿ ನಿಮ್ಮ passport ಅಥವಾ ಯಾವುದಾದರೂ ವಿಳಾಸದ ಪುರಾವೆಯ ಫೋಟೊವನ್ನು ಅಪ್ಲೋಡ್ ಮಾಡಿ,Next ಮೇಲೆ ಕ್ಲಿಕ್ ಮಾಡಿ

ಸೂಚನೆ:ನೀವು ಅಪ್ಲೋಡ್ ಮಾಡುವ ಫೋಟೊ 2MB ಗಿಂತ ಮೇಲೆ ಇರಬೇಕು.

ನಂತರ Okay ಮೇಲೆ ಕ್ಲಿಕ್ ಮಾಡಿ

ನಂತರ submit ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಆಧಾರ್ ಅಪ್ಡೇಟ್ ಆಗಿ,Success ಎಂದು ತೋರಿಸುತ್ತದೆ.

ನಂತರ Download acknowledgment ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ನಿಮಗೆ Acknowledgment ದೊರೆಯುತ್ತದೆ