India-pak war Updates-ಪಾಕಿಸ್ತಾನ ಪ್ರಧಾನಿ ಪರಾರಿ,ಸೇನಾ ಮುಖ್ಯಸ್ಥ ಕಿಕೌಟ್,ಲಾಹೋರ್ ಸರ್ವನಾಶ,ಭಾರತೀಯ ಸೇನೆಯ ಅರ್ಭಟಕ್ಕೆ ಪತರಗುಟ್ಟಿದ ಪಾಪಿಸ್ಥಾನ

< India-pak war Updates-ಪಾಕಿಸ್ತಾನ ಪ್ರಧಾನಿ ಪರಾರಿ,ಸೇನಾ ಮುಖ್ಯಸ್ಥ ಕಿಕೌಟ್,ಲಾಹೋರ್ ಸರ್ವನಾಶ,ಭಾರತೀಯ ಸೇನೆಯ ಅರ್ಭಟಕ್ಕೆ ಪತರಗುಟ್ಟಿದ ಪಾಪಿಸ್ಥಾನ>

India-pak war Updates-ಪಾಕಿಸ್ತಾನ ಪ್ರಧಾನಿ ಪರಾರಿ,ಸೇನಾ ಮುಖ್ಯಸ್ಥ ಕಿಕೌಟ್,ಲಾಹೋರ್ ಸರ್ವನಾಶ,ಭಾರತೀಯ ಸೇನೆಯ ಅರ್ಭಟಕ್ಕೆ ಪತರಗುಟ್ಟಿದ ಪಾಪಿಸ್ಥಾನ

India-pak war Updates-ಪಾಕಿಸ್ತಾನ ಪ್ರಧಾನಿ ಪರಾರಿ,ಸೇನಾ ಮುಖ್ಯಸ್ಥ ಕಿಕೌಟ್,ಲಾಹೋರ್ ಸರ್ವನಾಶ,ಭಾರತೀಯ ಸೇನೆಯ ಅರ್ಭಟಕ್ಕೆ ಪತರಗುಟ್ಟಿದ ಪಾಪಿಸ್ಥಾನ

ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧೋನ್ಮಾದ ಹೆಚ್ಚಾಗಿದೆ. ದಾಳಿ-ಪ್ರತಿದಾಳಿ ಜೋರಾಗಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ನಡೆಸಿದ ಕ್ಷಿಪಣಿ, ಡ್ರೋನ್​ಗಳನ್ನು ಹೊಡೆದುರಳಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಪಾಕಿಸ್ತಾನದ ಪ್ರಮುಖ ನಗರ ಮೇಲೆ ಕ್ಷಿಪಣಿಗಳ ದಾಳಿ ನಡೆಸಿದೆ.

https://x.com/mrsinha_/status/1920512881101013263?s=46

ಪಹಲ್ಗಾಮ್​​ನಲ್ಲಿ 26 ಅಮಾಯಕರನ್ನು ಕೊಂದಿದ್ದಕ್ಕೆ ಪ್ರತೀಕಾರವಾಗಿ ಉಗ್ರರ ನೆಲೆಗಳನ್ನು 'ಆಪರೇಷನ್ ಸಿಂದೂರ' ಮೂಲಕ ದಿಟ್ಟ ತಿರುಗೇಟು ನೀಡಿದ್ದ ಭಾರತಕ್ಕೆ ಪ್ರತ್ಯುತ್ತರ ನೀಡಲು ಮುಂದಾದ ಪಾಕಿಸ್ತಾನಕ್ಕೆ ಮತ್ತೆ ತಕ್ಕ ಉತ್ತರ ನೀಡಿದೆ. ಪಾಕ್​ನ ಎಫ್​​-16, ಜೆಎಫ್​-17 ಯುದ್ಧ ವಿಮಾನಗಳನ್ನು ಭಾರತೀಯ ಸೇನೆ ಹೊಡೆದು ಉರುಳಿಸಿ ಮತ್ತೊಂದು ಯಶಸ್ಸು ಕಂಡಿದೆ.

ಆಪರೇಷನ್ ಸಿಂದೂರದ ಬಳಿಕ ಜಮ್ಮು-ಕಾಶ್ಮೀರದ ಫೂಂಚ್ ಸೇರಿದಂತೆ ಗಡಿ ಭಾಗದ ಹಲವು ಗ್ರಾಮಗಳಲ್ಲಿ ಗುಂಡಿನ ದಾಳಿ ನಡೆಸಿದ್ದ ಪಾಕಿಸ್ತಾನದ ಸೇನೆ 16 ಜನರನ್ನು ಕೊಂದಿತ್ತು. ಅನೇಕರು ಗಾಯಗೊಂಡಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಪ್ರಮುಖ ನಗರಗಳ ಮೇಲೆ ಭಾರತ ಡ್ರೋನ್ ದಾಳಿ ನಡೆಸಿತ್ತು. ಅದಕ್ಕೆ ಸುಮ್ಮನಾಗದ ಪಾಕ್ ಮಿಸೈಲ್, ಡ್ರೋನ್ ಮತ್ತು ಜೆಟ್​​ಗಳ ಮೂಲಕ ಪ್ರತ್ಯುತ್ತರಕ್ಕೆ ಮುಂದಾಯಿತಾದರೂ ಅವೆಲ್ಲವನ್ನೂ ಭಾರತ ಹೊಡೆದುರುಳಿಸಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದೆ. ಇದೇ ವೇಳೆ ಎಫ್​​-16 ವಿಮಾನದ ಪೈಲೈಟ್​ನನ್ನು ವಶಕ್ಕೆ ಪಡೆದಿದೆ ಭಾರತದ ಸೇನೆ. ಭಾರತ ಕೊಟ್ಟಿರುವ ಏಟ್ಟಿಗೆ ಸುಸ್ತಾಗಿರುವ ಪಾಕ್, ಅಲ್ಲೋಲ ಕಲ್ಲೋಲವಾಗಿದೆ. ಪಾಕ್​ಗೆ ಸುಧಾರಿಸಿಕೊಳ್ಳಲು ಸಮಯವೇ ನೀಡದೆ ಪ್ರಮುಖ ನಗರಗಳ ಮೇಲೆ ದಾಳಿ ಮುಂದುವರೆಸಿದೆ.

https://x.com/mrsinha_/status/1920544212363149604?s=46

ಪಾಕಿಸ್ತಾನ ಪ್ರಧಾನಿ ಪರಾರಿ, ಸೇನಾ ಮುಖ್ಯಸ್ಥ ಕಿಕೌಟ್

ಪಾಕಿಸ್ತಾನ ಮತ್ತೆ ಮತ್ತೆ ಭಾರತದ ಮೇಲೆ ದಾಳಿ ನಡೆಸುತ್ತಿದ್ದಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿರುವ ಭಾರತದ ಮಿಸೈಲ್​ಗಳು ಪಾಕಿಸ್ತಾನದೊಳಗೆ ನುಗ್ಗಿವೆ. ಲಾಹೋರ್, ಇಸ್ಲಮಾಬಾದ್ ಸೇರಿದಂತೆ ಹಲವೆಡೆ ವೈಮಾನಿಕ ದಾಳಿ ನಡೆಸಿದೆ. ಇಸ್ಲಾಮಾಬಾದ್​ನಲ್ಲಿ ಪ್ರಧಾನಿ ನೆಲೆಸಿರುವ 20 ಕಿಲೋ ಮೀಟರ್​ ದೂರದಲ್ಲೇ ಭಾರತದ ವೈಮಾನಿಕ ದಾಳಿಗೆ ಹೆದರಿದ ಪ್ರಧಾನಿ ಷಹಬಾಜ್ ಷರೀಪ್ ಪರಾರಿಯಾಗಿದ್ದಾರೆ. ಅವರು ಬಂಕರ್​​ನಲ್ಲಿ ಅಡಗಿ ಕುಳಿತಿದ್ದಾರೆ ಎಂದು ಹೇಳಲಾಗಿದೆ. ಇದು ಒಂದು ಕಡೆಯಾದರೆ, ಮತ್ತೊಂದು ಕಡೆ ಪಾಕ್ ಸೇನಾ ಮುಖ್ಯಸ್ಥ ಸೈಯದ್ ಅಸಿಮ್ ಮುನೀರ್ ಅಹ್ಮದ್ ಷಾ ತಮ್ಮ ಸ್ಥಾನದಿಂದ ಕಿಕೌಟ್​​ ಮಾಡಲಾಗಿದೆಯಂತೆ, ನೂತನ ಮುಖ್ಯಸ್ಥನ ನೇಮಕಕ್ಕೂ ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗಿದೆ.

ಲಾಹೋರ್, ಕರಾಚಿ ಸರ್ವನಾಶ

ಭಾರತದ ಭಯಾನಕ ದಾಳಿಗೆ ಪತರಗುಟ್ಟಿದ ಪಾಕಿಸ್ತಾನ ಪಾಪರ್ ಆಗುವ ಹಂತಕ್ಕೆ ಬಂದಿದೆ. ಬ್ಯಾಕ್ ಟು ಬ್ಯಾಕ್ ವೈಮಾನಿಕ ದಾಳಿ ನಡೆಸಿದ ಹಿನ್ನೆಲೆ ಲಾಹೋರ್​ ಸಂಪೂರ್ಣ ಸರ್ವನಾಶವಾಗುವ ಹಂತಕ್ಕೆ ಹೋಗಿದೆ ಎಂದು ವರದಿಯಾಗಿದೆ. ಕರಾಚಿಯ 16 ಪ್ರದೇಶಗಳಲ್ಲಿ ನೇರ ದಾಳಿಯಾಗಿದೆ. ಕರಾಚಿಯ ದೊಡ್ಡ ಬಂದರಿನ ಮೇಲೂ ದೊಡ್ಡ ದಾಳಿಯಾಗಿದೆ.

https://x.com/mrsinha_/status/1920534008460419354?s=46

ಇದು ಪಾಕಿಸ್ತಾನಕ್ಕೆ ಹೆಚ್ಚು ಆದಾಯ ತಂದುಕೊಡುವ ರಾಜ್ಯವಾಗಿತ್ತು. ಇದೀಗ ಭಾರತದ ದಾಳಿಯ ಪೆಟ್ಟಿಗೆ ಕರಾಚಿ ಸರ್ವನಾಶವಾಗಿದ್ದು, ಆರ್ಥಿಕತೆಗೂ ದೊಡ್ಡ ಪೆಟ್ಟು ಬೀಳುವಂತೆ ಮಾಡಿದೆ. 1971ರ ನಂತರ ಇದೇ ಮೊದಲ ಬಾರಿಗೆ ಕರಾಚಿ ಮೇಲೆ ದಾಳಿಯಾಗಿದೆ. ಪಾಕ್​ನ 50 ಮಿಸೈನ್, 60 ಡ್ರೋನ್​ಗಳನ್ನು ಹೊಡೆದುರುಳಿಸಲಾಗಿದೆ. ಐಎನ್​​ಎಸ್​, ವಿಕ್ರಾಂತ್, ತೇಜಸ್ ದಾಳಿಗೆ ಎದುರಾಳಿ ದೇಶವು ಪೀಸ್ ಪೀಸ್ ಆಗಿದೆ. ಅಯ್ಯೋ ಯಾಕಾದರೂ ಭಾರತದ ವಿರುದ್ಧ ದಾಳಿ ನಡೆಸಿದೆವೋ ಎಂದು ಗೋಗರೆಯುವ ಹಂತಕ್ಕೆ ಬಂದಿದೆ.

https://x.com/DDNewslive/status/1920430089369432348?ref_src=twsrc%5Etfw%7Ctwcamp%5Etweetembed%7Ctwterm%5E1920430089369432348%7Ctwgr%5E1c91af2c2404c4b930c7a2e87924befb4a3f30a0%7Ctwcon%5Es1_c10&ref_url=http%3A%2F%2Fapi-news.dailyhunt.in%2F