Karnataka rains-ಬೇಸಿಗೆಯಲ್ಲಿ ಮಳೆಗಾಲದ ರೀತಿಯ ಮಳೆ ಯಾಕಾಗ್ತಿದೆ? 6 ಜಿಲ್ಲೆಗಳಿಗೆ ರೆಡ್ ಅಲರ್ಟ್

Karnataka rains-ಬೇಸಿಗೆಯಲ್ಲಿ ಮಳೆಗಾಲದ ರೀತಿಯ ಮಳೆ ಯಾಕಾಗ್ತಿದೆ? 6 ಜಿಲ್ಲೆಗಳಿಗೆ ರೆಡ್ ಅಲರ್ಟ್

Karnataka rains-ಬೇಸಿಗೆಯಲ್ಲಿ ಮಳೆಗಾಲದ ರೀತಿಯ ಮಳೆ ಯಾಕಾಗ್ತಿದೆ? 6 ಜಿಲ್ಲೆಗಳಿಗೆ ರೆಡ್ ಅಲರ್ಟ್

Karnataka rains-ಬೇಸಿಗೆಯಲ್ಲಿ ಮಳೆಗಾಲದ ರೀತಿಯ ಮಳೆ ಯಾಕಾಗ್ತಿದೆ? 6 ಜಿಲ್ಲೆಗಳಿಗೆ ರೆಡ್ ಅಲರ್ಟ್


ಬೇಸಿಗೆ ಋತು ಉತ್ತುಂಗದಲ್ಲಿರು ವಾಗಲೇ ರಾಜ್ಯದ ಅನೇಕ ಕಡೆ ಕೆಲ ದಿನ ಗಳಿಂದ ನಿರಂತರ ಮಳೆಯಾಗುತ್ತಿದೆ. ತಾಪ ಮಾನ ತಗ್ಗಿ ಬಿಸಿಲೂರಿನ ಜಿಲ್ಲೆಗಳ ಜನ ನಿಟ್ಟುಸಿರು ಬಿಟ್ಟಿದ್ದರೆ, ಹಲ ವೆಡೆ ರೈತರು ಮುಂಗಾರು ಆರಂಭ ಮುನ್ನವೇ ಕೃಷಿ “ಆರಂಭ’ಕ್ಕೆ ತೊಡಗಿದ್ದಾರೆ.

ಕೆಲವೆಡೆ ವಾಣಿಜ್ಯ ಬೆಳೆಗಳಿಗೆ ಅಕಾಲಿಕ ಮಳೆಯಿಂದ ಹಾನಿಯಾಗಿದೆ. ಬೇಸಿಗೆಯಲ್ಲಿ ಈ ಪರಿ ಮಳೆ ಯಾಕಾಗುತ್ತಿದೆ? ಈ ಪ್ರಶ್ನೆಗೆ ಹವಾಮಾನ ಇಲಾಖೆ ನೀಡುತ್ತಿರುವ ಕಾರಣ, ಸಮುದ್ರ, ಭೂಮಿ ಮೇಲ್ಮೈ ನ ವಾಯುಭಾರ ಕುಸಿತ, ದೊಡ್ಡ ಗಾತ್ರದ ವಾಯುಭಾರ ಕುಸಿತ ಪ್ರದೇಶಗಳ ಸೃಷ್ಟಿ.

ತಮಿಳುನಾಡು ಸಮೀಪ ಪೂರ್ವ ಕರಾವಳಿಯ ಬಂಗಾಳಕೊಲ್ಲಿಯಲ್ಲಿ 1.5 ಕಿಮೀ ಅಗಲ ಹಾಗೂ 5.8 ಕಿ.ಮೀ. ಎತ್ತರದಷ್ಟು ಗಾತ್ರದ ವಾಯುಭಾರ ಕುಸಿತ ಉಂಟಾಗಿದ್ದು, ಕರ್ನಾಟಕದ ಒಳನಾಡಿನ ಮೇಲ್ಮೆ„ಯಲ್ಲೂ ಈ ರೀತಿಯ ವಾತಾವರಣವಿದೆ.

ಇದರಿಂದ ನಿರಂತರವಾಗಿ ಮಳೆಯಾಗುತ್ತಿದೆ. ಈ ಮಧ್ಯೆ, ಪಶ್ಚಿಮ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಮೇ 22ರಂದು ವಾಯುಭಾರ ಕುಸಿತ ಉಂಟಾಗುವ ನಿರೀಕ್ಷೆ ಇದ್ದು, ಇದರ ಪೂರ್ವ ಪರಿಣಾಮವಾಗಿ ಮೇ 19ರಿಂದ ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಬೆಂಗಳೂರಲ್ಲಿ 2-3 ದಿನ ಮಳೆ: ಬೆಂಗಳೂರಿನಲ್ಲಿ ಮೇ 21ರ ವರೆಗೆ ಗುಡುಗು, ಮಿಂಚು ಸಮೇತವಾಗಿ ಸಾಧಾರಣ ಮಳೆಯಾಗುವ ಹೆಚ್ಚಿನ ಸಾಧ್ಯತೆಗಳಿವೆ. ಮೇ 19, 20ರಂದು ಹಳದಿ ಅಲರ್ಟ್‌ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಮೋಡಕವಿದ ವಾತಾವರಣ ಇರಲಿದೆ. ಜೊತೆಗೆ 50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 30 ಹಾಗೂ 20 ಡಿ.ಸೆ ಇರಲಿದೆ.

ಹಾವೇರಿ: ಗರಿಷ್ಠ 13 ಸೆಂಮೀ ಮಳೆ
ಕರಾವಳಿ ಕರ್ನಾಟಕ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಭಾನುವಾರ ಮಳೆಯಾಗಿದೆ. ಹಾವೇರಿ 13, ಯಾದಗಿರಿ 10, ರಾಯಚೂರು 9, ಬೆಂಗಳೂರು 3, ಚಿತ್ರದುರ್ಗ, ಉತ್ತರ ಕನ್ನಡ ಜಿಲ್ಲೆ 5, ದಕ್ಷಿಣ ಕನ್ನಡದ ಪುತ್ತೂರಿನಲ್ಲಿ 2 ಸೆಂ.ಮೀ ಮಳೆಯಾಗಿದೆ. ಉಳಿದ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.

ಚಿತ್ರದುರ್ಗಕ್ಕೆ ರೆಡ್‌ ಅಲರ್ಟ್‌
ಬೆಳಗಾವಿ, ಧಾರವಾಡ, ಹಾವೇರಿ ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಮೇ 19 ರಿಂದ 22ರ ವರೆಗೆ ಆರೆಂಜ್‌ ಅಲರ್ಟ್‌ ಅನ್ನು ಘೋಷಿಸಲಾಗಿದೆ. ಮೇ 19 ಹಾಗೂ 20ರಂದು ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಿಗೆ ಹಳದಿ ಅಲರ್ಟ್‌ ಘೋಷಿಸಲಾಗಿದೆ. ಇನ್ನು ಚಿತ್ರದುರ್ಗ ಜಿಲ್ಲೆಗೆ ಮೇ 19ರಂದು ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳವರೆಗೆ ಭಾರಿ ಹಾಗೂ ಅತೀ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಮಳೆಯ ಜೊತೆಗೆ ಗಾಳಿಯ ವೇಗವು ಪ್ರತಿ ಘಂಟೆಗೆ 50 ಕಿ.ಮೀ ಇರಲಿದೆ. ಜನ ಸಮಾನ್ಯರು ಮಳೆಯ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರೆ ಉತ್ತಮ.
●ಸಿ.ಎಸ್‌.ಪಾಟೀಲ್‌, ನಿರ್ದೇಶಕ, ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗ