Rat milk-ಕತ್ತೆ ಹಾಲು ಆಯ್ತು, ಈಗ ಇಲಿ ಹಾಲಿಗೂ ಬಂತು ಡಿಮ್ಯಾಂಡ್

<Krushirushi> <ಇಲಿ ಹಾಲು> <Rat milk> <ಕತ್ತೆ ಹಾಲು> <donkey milk> <cow milk>

Rat milk-ಕತ್ತೆ ಹಾಲು ಆಯ್ತು, ಈಗ ಇಲಿ ಹಾಲಿಗೂ ಬಂತು ಡಿಮ್ಯಾಂಡ್

Rat milk-ಕತ್ತೆ ಹಾಲು ಆಯ್ತು, ಈಗ ಇಲಿ ಹಾಲಿಗೂ ಬಂತು ಡಿಮ್ಯಾಂಡ್


ನೀವು ಯಾವ ಹಾಲು ಕುಡಿಯುತ್ತೀರಿ? ಹಸುವಿನ ಹಾಲು, ಎಮ್ಮೆಯ ಹಾಲು? ಕತ್ತೆಯ ಹಾಲು? ಇವುಗಳಲ್ಲಿ ಯಾವುವುದಾದರಲ್ಲಿ ಒಂದಾದರೂ ಹಾಲು ಕುಡಿಯುತ್ತೀರಿ ಅಲ್ವಾ? ಆದರೆ ಯಾವತ್ತಾದರೂ ಇಲಿಯ ಹಾಲಿನ ಬಗ್ಗೆ ಹೇಳಿದ್ದೀರಾ?


ನೀವು ವಿವಿಧ ರೀತಿಯ ಹಾಲು ಕುಡಿಯುತ್ತೀರಿ. ವಿವಿಧ ರೀತಿಯ ಹಾಲಿನ ಬಗ್ಗೆಯೂ ಕೇಳಿರುತ್ತಿರಿ ಅಲ್ವಾ?
ಹಸುವಿನ ಹಾಲು? ಮೇಕೆ ಹಾಲು? ಸೋಯಾ ಹಾಲು? ಇತ್ಯಾದಿ. ಆದರೆ ಯಾವ ಹಾಲು ಅತ್ಯಂತ ದುಬಾರಿ ಹಾಲು ಅನ್ನೋದು ನಿಮಗೆ ಗೊತ್ತಾ? ಕತ್ತೆಯ ಹಾಲು ಎಂದು ಹಸುವಿನ ಹಾಲು? ಮೇಕೆ ಹಾಲು? ಸೋಯಾ ಹಾಲು? ಇತ್ಯಾದಿ. ಆದರೆ ಯಾವ ಹಾಲು ಅತ್ಯಂತ ದುಬಾರಿ ಹಾಲು ಅನ್ನೋದು ನಿಮಗೆ ಗೊತ್ತಾ? ಕತ್ತೆಯ ಹಾಲು ಎಂದು ನೀವಂದ್ರೆ, ಅದು ಸುಳ್ಳು. ಯಾಕಂದ್ರೆ ಇಲಿ ಹಾಲು (Rat milk) ಇದಕ್ಕೆ ಉತ್ತರ.

 
ಶಾಕ್ ಆಯ್ತಾ? ಆದ್ರೆ ಇದು ನಿಜ, ಇಲಿ ಹಾಲು ತುಂಬಾ ದುಬಾರಿ. ಇದು ಏಕೆ ದುಬಾರಿ? 'ಇಲಿ ಹಾಲು' ಪಡೆಯುವುದು ಸುಲಭವಲ್ಲ. 30 ನಿಮಿಷಗಳ ಪ್ರಕ್ರಿಯೆಯಲ್ಲಿ ಇಲಿಯಿಂದ ಕೊಂಚ ಮಾತ್ರ ಹಾಲು ಉತ್ಪಾದಿಸಲು ಸಾಧ್ಯ. 1 ಲೀಟರ್ ಹಾಲು ಪಡೆಯಲು ಬರೋಬ್ಬರಿ ನಾಲ್ಕು ಸಾವಿರ ಇಲಿಗಳು (40thousand rats) ಬೇಕಾಗುತ್ತವೆ. ಈ ಇಲಿಗಳ 1 ಲೀಟರ್ ಹಾಲಿನ ಮೌಲ್ಯ 23 ಸಾವಿರ ಯುರೋಗಳು. ಅಂದರೆ ಬರೋಬ್ಬರಿ 18 ಲಕ್ಷ ರೂಪಾಯಿ.

 
ಇಲಿ ಹಾಲನ್ನು ಸಂಶೋಧನೆಯ ಸಾಧನವಾಗಿ ಬಳಸಲಾಗುತ್ತದೆ. ಮಲೇರಿಯಾ ಬ್ಯಾಕ್ಟೀರಿಯಾವನ್ನು ನಿರ್ಮೂಲನೆ ಮಾಡುವ ಔಷಧಿ, ವಸ್ತುಗಳನ್ನು ತಯಾರಿಸಲು ಇಲಿ ಹಾಲನ್ನು ಬಳಸಲಾಗುತ್ತಂತೆ. ಹಾಗಿದ್ದರೆ ವಿಜ್ಞಾನಿಗಳು ಹಸುವಿನ ಹಾಲಿನ ಬದಲು ಇಲಿಗಳ ಹಾಲನ್ನು ಏಕೆ ಬಳಸುತ್ತಾರೆ?

 
ಸಂಶೋಧಕರ ನೆಚ್ಚಿನ ಪ್ರಾಣಿ ಎಂದರೆ ಇಲಿ ಅನ್ನೋದು ಗೊತ್ತೇ ಇದೆ. ಏಕೆಂದರೆ ಇಲಿಗಳ ಡಿಎನ್‌ಎ (DNA) ಬಗ್ಗೆ ತುಂಬಾ ಕಡಿಮೆ ತಿಳಿದಿದೆ, ಇತರ ಯಾವುದೇ ಪ್ರಾಣಿಗಳ ಡಿಎನ್‌ಎಗಿಂತ ಹೆಚ್ಚು ಎಫೆಕ್ಟಿವ್. ಇದು ಮನುಷ್ಯನ ದೇಹಕ್ಕೆ ರಿಲೇಟ್ ಆಗಿರುತ್ತದೆ. ಆದ್ದರಿಂದ ಪ್ರಯೋಗದ ಫಲಿತಾಂಶಗಳನ್ನು ವಿಶ್ಲೇಷಿಸುವುದು ಸುಲಭವಾಗುತ್ತದೆ. ಎಲ್ಲಾ ಪ್ರಯೋಗಗಳಿಗೆ ಸಾವಿರಾರು ಪ್ರಾಣಿಗಳು ಬೇಕಾಗುತ್ತವೆ. ಏಕೆಂದರೆ ಸಾವಿರಾರು ಹಸುಗಳಿಗಿಂತ ಸಾವಿರಾರು ಇಲಿಗಳನ್ನು ನಿರ್ವಹಿಸುವುದು ಹೆಚ್ಚು ಪ್ರಾಯೋಗಿಕ.

 
ಇಲಿ ಹಾಲು ಅತ್ಯಂತ ದುಬಾರಿ (costly milk) ಹಾಲು. ಇದಕ್ಕೆ ಕಾರಣ ಏನು ಅನ್ನೋದನ್ನು ನೀವು ಈಗಾಗಲೇ ತಿಳಿದಿರುತ್ತೀರಿ. ಸಾವಿರಾರು ಇಲಿಗಳಿಂದ ಮಾತ್ರ ಒಂದು ಲೀಟರ್ ಹಾಲು ತಯಾರಿಸಾಲು ಸಾಧ್ಯ. ಹಾಗಾಗಿ ಈ ಹಾಲು ಹೆಚ್ಚು ದುಬಾರಿಯಾಗಿದೆ.

 
ಹಾಗಿದ್ರೆ ಹೆಚ್ಚು ಹಾಲು ಉತ್ಪಾದಿಸುವ ಪ್ರಾಣಿ ಯಾವುದು? ಒಂದು ಹಸು (cow milk) ಒಂದು ವರ್ಷದಲ್ಲಿ ಸುಮಾರು 10 ಸಾವಿರ ಲೀಟರ್ ಹಾಲನ್ನು ಉತ್ಪಾದಿಸಬಹುದು. ಇದು ತೂಕಕ್ಕಿಂತ 7 ಪಟ್ಟು ಹೆಚ್ಚು. ಮೇಕೆ ಹಾಲು ವರ್ಷಕ್ಕೆ ಅವುಗಳ ತೂಕದ 12 ಪಟ್ಟು ಉತ್ಪಾದಿಸುತ್ತದೆ.

 
ನೀಲಿ ತಿಮಿಂಗಿಲವು (Blue whale) ಇದುವರೆಗಿನ ಎಂದೂ ಮುರಿಯದ ದಾಖಲೆ ನಿರ್ಮಿಸಿದೆ. ಒಂದು ದಿನದಲ್ಲಿ ನೀಲಿ ತಿಮಿಂಗಿಲವು 600 ಲೀಟರ್ ಹಾಲನ್ನು ಉತ್ಪಾದಿಸುತ್ತದೆ ಅಂದರೆ ನೀವು ನಂಬಲೇಬೇಕು. ಈ ಹಾಲು ತುಂಬಾ ಕೊಬ್ಬಿನಿಂದ ಕೂಡಿರುತ್ತದೆ., ಆದ್ದರಿಂದ ಮರಿ ತಿಮಿಂಗಿಲವು ದಿನಕ್ಕೆ 100 ಕೆಜಿ ತೂಕ ಹೆಚ್ಚಿಸಲು ಸಾಧ್ಯ.

 
ಮಲೇರಿಯಾ ರೋಗವನ್ನು ಗುಣಪಡಿಸಲು ಮತ್ತು ಸಂಶೋಧನಾ ಸಾಮಗ್ರಿಗಳ ತಯಾರಿಕೆಗಾಗಿ ಇಲಿ ಹಾಲನ್ನು ಜೆನೆಟಿಕ್ ಎಂಜಿನಿಯರಿಂಗ್ ಮಾಡಲಾಗುತ್ತದೆ. ಹಾಗಾಗಿ ಇಲಿ ಹಾಲು ತುಂಬಾನೆ ದುಬಾರಿಯಾಗಿವೆ ಎಂದು ಸಂಶೋಧನೆಗಳು ತಿಳಿಸಿವೆ.ನೀವಂದ್ರೆ, ಅದು ಸುಳ್ಳು. ಯಾಕಂದ್ರೆ ಇಲಿ ಹಾಲು (Rat milk) ಇದಕ್ಕೆ ಉತ್ತರ.

Insect food-ಧಾರವಾಡ ಕೃಷಿಮೇಳದಲ್ಲಿ ಗಮನಸೆಳೆದ ಹುಳಗಳಿಂದ ಮಾಡಿದ ತಿಂಡಿತಿನಿಸು

ಕೀಟಪ್ರಪಂಚಕ್ಕೆ ಸ್ವಾಗತ


ಧಾರವಾಡ ಕೃಷಿಮೇಳದ ವಿಡಿಯೋ ಝಲಕ್ ನಿಮಗಾಗಿ

https://youtu.be/r7KxsRCKa2w?si=Fh72XQYXs1JZ1EVo 


ಧಾರವಾಡ: ಪೂರ್ವ ಏಷ್ಯಾ, ಅಂದರೆ ಚೀನಾ, ಥಾಯ್ಲೆಂಡ್, ಕೊರಿಯಾ ದೇಶಗಳಲ್ಲಿ ಹಾಗೂ ಆಫ್ರಿಕಾ ಖಂಡದ ಅನೇಕ ಬುಡಕಟ್ಟು ಜನಾಂಗಗಳು ನಾನಾ ರೀತಿಯ ಕೀಟಗಳನ್ನೂ ಭಕ್ಷ್ಯದ ರೀತಿ ಸೇವಿಸುತ್ತಾರೆ. ಕೆಲವರು ಕರಿದು ತಿಂದರೆ ಇನ್ನೂ ಕೆಲವರು ಹುರಿದು ತಿನ್ನುತ್ತಾರೆ. ಕೆಲ ಕೀಟಗಳನ್ನು ಹಸಿ ಹಸಿಯಾಗಿಯೇ ತಿನ್ನುತ್ತಾರೆ. ಇದೀಗ ಧಾರವಾಡದ ಕೃಷಿ ಮೇಳದಲ್ಲೂ ಕೀಟಗಳಿಂದ ತಯಾರಿಸಿದ ಭಕ್ಷ್ಯಗಳು ಎಂಟ್ರಿ ಕೊಟ್ಟಿದ್ದು, ತಜ್ಞರು ಟ್ರೈ ಮಾಡಿ ನೋಡಿ. ಏನೂ ಆಗಲ್ಲ ಎನ್ನುತ್ತಿದ್ದಾರೆ.

ಮೂಡಿಸುತ್ತಿದೆ ಧಾರವಾಡ ಕೃಷಿ ಮೇಳದಲ್ಲಿನ ಒಂದು ಪ್ರದರ್ಶನ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದ್ದು ಮನುಷ್ಯರು ಕೀಟಗಳನ್ನೇ ಫ್ರೈ ಮಾಡಿ ತಿನ್ನಬಹುದಾ? ಚೀನಿಯರಂತೆ ಭಾರತೀಯರು ಜಿರಲೆ ತಿಂದ್ರೆ ಏನೂ ಆಗೋಲ್ವಾ? ಮುಂದೊಂದು ದಿನ ಕೀಟಗಳ ಭಕ್ಷ್ಯವನ್ನೇ ತಿನ್ನಬೇಕಾಗುತ್ತಾ? ಎಂಬಂತ ಪ್ರಶ್ನೆಗಳನ್ನು ನೋಡುಗರಲ್ಲಿ ಹುಟ್ಟು ಹಾಕುತ್ತದೆ.

ಕೃಷಿ ವಿವಿಯ ಕೀಟ ಶಾಸ್ತ್ರ ವಿಭಾಗದಿಂದ ವಿನೂತನ ಪ್ರಯೋಗ ನಡೆಯುತ್ತಿದ್ದು  ಇಲ್ಲಿ ವಿವಿಧ ಕೀಟಗಳ 15 ಭಕ್ಷ್ಯಗಳು ಪ್ರದರ್ಶನಕ್ಕಿವೆ. ಪ್ರದರ್ಶನ ವಿವರಿಸಲು ನಿಂತಿರುವ ಕೀಟ ತಜ್ಞರು “ತಿಂದು ನೋಡಿ ಏನೂ ಆಗೋಲ್ಲಾ” ಎಂದು ಜನರನ್ನು ಹುರಿದುಂಬಿಸುತ್ತಿದ್ದಾರೆ. ಆದರೆ ಕೀಟದ ಅಹಾರ ನೋಡಿ ಜನ ಮಾತ್ರ ಶಾಕ್ ಆಗುತ್ತಿದ್ದಾರೆ.

ಮಿಡತೆ ಹಾಗೂ ಜಿರಳೆ ಫ್ರೈ, ಮಿಡತೆ ಮಸಾಲಾ, ರೇಷ್ಮೆ ಕೋಶದ ಸೂಪ್, ರೇಷ್ಮೆ ಹುಳುಗಳ ಬರ್ಗರ್, ಕೀಟಗಳ ಪನ್ನೀರ ಟಿಕ್ಕಾ ಸೇರಿದಂತೆ ವಿವಿಧ ಪದಾರ್ಥಗಳ ಪ್ರದರ್ಶನ ಇಲ್ಲಿ ನಡೆಯುತ್ತಿದೆ.

ಈ ಹುಳಗಳು ಕೂಡ ಮಾಂಸಾಹಾರದ ರೀತಿಯೇ ಅನೇಕ ಪೌಷ್ಟಿಕಾಂಶಗಳನ್ನು ಹೊಂದಿರುತ್ತದೆ. ಪ್ರೋಟಿನ್ ವಿಟಾಮಿನ್‍ಗಳೇ ತುಂಬಿರುವ ಕೀಟಗಳು ಆರೋಗ್ಯಕ್ಕೆ ಪೂರಕ ಎನ್ನುತ್ತಿದ್ದಾರೆ ಕೀಟ ತಜ್ಞರು. ಇದೇ ಕಾರಣಕ್ಕಾಗಿ ಚೀನಾ, ಥಾಯ್ಲೆಂಡ್, ಕೋರಿಯಾ ದೇಶಗಳ ಜನ ಸೇವಿಸುವ ಪದಾರ್ಥಗಳಲ್ಲಿ ಕೀಟಗಳೂ ಇರುತ್ತವೆ. ಭಾರತೀಯರು ಸೇವಿಸಿದರೂ ಸಮಸ್ಯೆ ಆಗಲಾರದು ಎಂದು ಕೀಟ ತಜ್ಞರು ಹೇಳಿದ್ದಾರೆ.

ಹುಳುಗಳಿಂದ ಮಾಡಿದ ಚಿಟ್ಟೆಸ್ವಾಮಿ ಕ್ರಿಡಾಂಗಣ