Pmkisan 15th instalment eligibility status-ಪಿಎಂ ಕಿಸಾನ್ 15ನೇ ಕಂತಿಗೆ ಡೇಟ್ ಫಿಕ್ಸ್,ಹೀಗೆ ಚೆಕ್ ಮಾಡಿ ನಿಮ್ಮ ಅರ್ಹತೆ

<Krushirushi> <ಪಿಎಂ ಕಿಸಾನ್ 15ನೇ ಕಂತು> <pmkisan 15th instalment release date> <ಪಿಎಂಕಿಸಾನ್ ಅನರ್ಹ ಪಟ್ಟಿ> <pmkisan ineligible List> <pmkisan> <Beneficiarystatus> <Beneficiarylist> <pradan mantri Kisan samman yojana> <Modi duddu> <ಮೋದಿದುಡ್ಡು> <ekyc> <ಇಕೆವೈಸಿ> <Indian agriculture> <farmer> <agriculture>

Pmkisan 15th instalment eligibility status-ಪಿಎಂ ಕಿಸಾನ್ 15ನೇ ಕಂತಿಗೆ ಡೇಟ್ ಫಿಕ್ಸ್,ಹೀಗೆ ಚೆಕ್ ಮಾಡಿ ನಿಮ್ಮ ಅರ್ಹತೆ

Pmkisan 15th instalment eligibility status-ಪಿಎಂ ಕಿಸಾನ್ 15ನೇ ಕಂತಿಗೆ ಡೇಟ್ ಫಿಕ್ಸ್,ಹೀಗೆ ಚೆಕ್ ಮಾಡಿ ನಿಮ್ಮ ಅರ್ಹತೆ

 ರೈತರಿಗೆ ಅನುಕೂಲವಾಗುವಂತೆ ಪಿಎಂ ಕಿಸಾನ್ ಯೋಜನೆಯಡಿ ಮೋದಿ ಸರ್ಕಾರ ಸಹಾಯ ಮಾಡುತ್ತಿದೆ. ಇದರಿಂದ ರೈತರ ಆದಾಯ ಹೆಚ್ಚಾಗಬಹುದು. ಈ ಯೋಜನೆಯಡಿ, ದೇಶದ ರೈತರು ಪ್ರತಿವರ್ಷ 6,000 ರೂ.ಗಳ ಸಹಾಯವನ್ನು ಪಡೆಯುತ್ತಾರೆ. ಅಂದರೆ, ವರ್ಷದಲ್ಲಿ 2-2 ಸಾವಿರ ರೂಪಾಯಿಗಳನ್ನು ಕಂತುಗಳಾಗಿ ನೀಡಲಾಗುತ್ತದೆ.


ಈ ಹಿಂದೆ 14 ಕಂತುಗಳನ್ನು ರೈತರ ಖಾತೆಗೆ ವರ್ಗಾಯಿಸಲಾಗಿತ್ತು.

ಪ್ರಸ್ತುತ, ದೇಶದ ಪ್ರತಿಯೊಬ್ಬ ರೈತರು 15 ನೇ ಕಂತಿಗಾಗಿ ಕಾಯುತ್ತಿದ್ದಾರೆ. ಇತ್ತೀಚೆಗೆ, ಪಿಎಂ ಕಿಸಾನ್ ನ 15 ನೇ ಕಂತಿನ ನವೀಕರಣವನ್ನು ಬಿಡುಗಡೆ ಮಾಡಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, 15 ನೇ ಕಂತನ್ನು ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಸರ್ಕಾರ ಬಿಡುಗಡೆ ಮಾಡಬಹುದು ಎನ್ನಲಾಗಿದೆ.

ನೀವು ಪಿಎಂ ಕಿಸಾನ್ ಯೋಜನೆಯ 15 ನೇ ಕಂತಿಗಾಗಿ ಕಾಯುತ್ತಿದ್ದರೆ ಮತ್ತು ಅದರ ಲಾಭವನ್ನು ಪಡೆಯಲು ಬಯಸಿದರೆ, ಇದಕ್ಕಾಗಿ ನೀವು ಯೋಜನೆಯಲ್ಲಿ ನಿಮ್ಮ ಕೆವೈಸಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಪಿಎಂ ಕಿಸಾನ್ ಯೋಜನೆಯ ಪ್ರಯೋಜನವನ್ನು ಪಡೆಯಲು, ರೈತರು ಭೂ ದಾಖಲೆಗಳನ್ನು ಪರಿಶೀಲಿಸುವುದು ಬಹಳ ಮುಖ್ಯ. ಇದಲ್ಲದೆ, ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವಾಗ ನೀವು ಯಾವುದೇ ತಪ್ಪು ಮಾಹಿತಿಯನ್ನು ನೀಡಿದ್ದರೆ, ನೀವು ಅದನ್ನು ಆದಷ್ಟು ಬೇಗ ಸರಿಪಡಿಸಬೇಕು. ನೀವು ಈ ಮೂರು ಕೆಲಸಗಳನ್ನು ಸರಿಯಾದ ಸಮಯದಲ್ಲಿ ನವೀಕರಿಸದಿದ್ದರೆ, ನೀವು ಪಿಎಂ ಕಿಸಾನ್ ಯೋಜನೆಯ ಪ್ರಯೋಜನವನ್ನು ಪಡೆಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, 15 ನೇ ಕಂತಿನ ಲಾಭವನ್ನು ಪಡೆಯಲು, ಈ ಮೂರು ಕೆಲಸಗಳನ್ನು ಆದಷ್ಟು ಬೇಗ ಮಾಡಬೇಕು.

ಹೀಗೆ ಚೆಕ್ ಮಾಡಿ ನಿಮ್ಮ ಅರ್ಹತೆ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://pmkisan.gov.in/

ಮೊದಲು Beneficiary status ಮೇಲೆ ಕ್ಲಿಕ್ ಮಾಡಿ

ನಂತರ know your register number ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ನಂಬರ್ ಅಥವಾ ಆಧಾರ್ ನಂಬರ್ ಹಾಕಿ,Captcha type ಮಾಡಿ, Get mobile OTP ಮೇಲೆ ಕ್ಲಿಕ್ ಮಾಡಿ,ನಿಮ್ಮ ಮೊಬೈಲ್ ಗೆ ಬರುವ OTP ಹಾಕಿದರೆ ಈ ಕೆಳಗಿನಂತೆ ನಿಮ್ಮ Registration number ತಿಳಿಯಲಿದೆ

ನಂತರ Back ಮೇಲೆ ಕ್ಲಿಕ್ ಮಾಡಿ, ನಿಮ್ಮ Registration number ಹಾಕಿ,Captcha type ಮಾಡಿ,Get data ಮೇಲೆ ಕ್ಲಿಕ್ ಮಾಡಿ

ಪಿಎಂ ಕಿಸಾನ್ ಇಕೆವೈಸಿ ಚೆಕ್ ಮಾಡಲು ಹೀಗೆ ಮಾಡಿ

ನಂತರ update your details ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಆಧಾರ್ ನಂಬರ್ ಹಾಕಿ Search ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ನಿಮಗೆ EKYC is already done ಎಂದು ತೊರಿಸಿದರೆ ನಿಮ್ಮ ಇಕೆವೈಸಿ ಆಗಿದೆ ಎಂದು ಅರ್ಥ

ನಿಮ್ಮ ಇಕೆವೈಸಿ ಆಗಿರದಿದ್ದರೆ,ನಿಮ್ಮ ಮೊಬೈಲ್ ನಂಬರ್ ಹಾಕಿ,Mobile OTP ಮೇಲೆ ಕ್ಲಿಕ್ ಮಾಡಿ, ಮೊಬೈಲ್ ಗೆ ಬರುವ OTP ಹಾಕಿ,ನಂತರ ಮತ್ತೆ Aadhaar registered Mobile OTP ಮೇಲೆ ಕ್ಲಿಕ್ ಮಾಡಿ,ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ Submit ಮೇಲೆ ಕ್ಲಿಕ್ ಮಾಡಿದರೆ, ಈ ಕೆಳಗಿನಂತೆ Ekyc has been done successfully ಎಂದು ತೋರಿಸಿದರೆ,ನಿಮ್ಮ ಇಕೆವೈಸಿ ಆಯಿತು ಎಂದು ಅರ್ಥ.

ಆಧಾರ್ ಬ್ಯಾಂಕ್ ಖಾತೆ ಲಿಂಕ್ ಚೆಕ್ ಮಾಡಲು ಹೀಗೆ ಮಾಡಿ

ನಂತರ ಮತ್ತೆ ಹಿಂದಕ್ಕೆ ಬಂದು,Eligibility status ಮೇಲೆ ಕ್ಲಿಕ್ ಮಾಡಿ

ನಂತರ Land seeding,Aadhaar bank account seeding status ಹಾಗೂ ಇಕೆವೈಸಿ ಆಗಿದ್ದರೆ, ಅವುಗಳ ಮುಂದೆ ಹಸಿರು ಬಣ್ಣದ YES right mark ಇರುತ್ತದೆ.

ಆಧಾರ್ ಬ್ಯಾಂಕ್ ಲಿಂಕ್ ಚೆಕ್ ಮಾಡಲು, click here ಮೇಲೆ ಕ್ಲಿಕ್ ಮಾಡಿ

ಆಧಾರ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದರೆ,ಈ ಕೆಳಗಿನಂತೆ ತೋರಿಸುತ್ತದೆ.

ಇಲ್ಲಿಯವರೆಗಿನ ಕಂತು ಚೆಕ್ ಮಾಡಲು ಹೀಗೆ ಮಾಡಿ

ನಂತರ ಮತ್ತೆ ಹಿಂದಕ್ಕೆ ಹೋಗಿ View account details ಮೇಲೆ ಕ್ಲಿಕ್ ಮಾಡಿ

ಲ್ಯಾಂಡ್ ಸಿಡಿಂಗ್ No ಎಂದು ತೋರಿಸುತ್ತಿದ್ದರೆ,ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ,ನಿಮ್ಮ ಲ್ಯಾಂಡ್ ಸಿಡಿಂಗ್ ಮಾಡಿಸಿ

Ineligibility reason ಮೇಲೆ ಕ್ಲಿಕ್ ಮಾಡಿ

FTO Processed NO ಎಂದು ತೋರಿಸುತ್ತಿದ್ದರೆ ಇಲ್ಲಿದೆ  ಕಾರಣ ಮತ್ತು ಪರಿಹಾರ

ಪಿ.ಎಂ.ಕಿಸಾನ್ ಯೋಜನೆಯಡಿ ಜಿಲ್ಲೆಗಳಿಂದ ಬರುವ ಸಾಮಾನ್ಯ ಅಹವಾಲುಗಳು

ಕ್ರಮ ಸಂಖ್ಯೆ

ಸಮಸ್ಯೆಗಳು

ಕಾರಣಗಳು

ಪರಿಹರಿಸುವ ಸಂಬಂಧಪಟ್ಟ ಕಛೇರಿ ಮತ್ತು ವಿಧಾನ

fruitspmk.gov.in ಪೋರ್ಟಲ್ ನಲ್ಲಿ

1

ಭೂಮಿಯ ಜೊತೆ ದೊರೆತ ಸಂಶಯಾತ್ಮಕ ಪ್ರಕರಣಗಳೆಂದು ತಡೆಹಿಡಿಯಲಾಗಿದೆ

ಅ)ಅರ್ಜಿದಾರನ ಹೆಸರು ಮತ್ತು ಭೂಮಾಲಿಕನ ಹೆಸರು ತಾಳೆಯಾಗದಿರುವುದು                                                                     ಆ) bhoomi ತಂತ್ರಾಂಶದಲ್ಲಿ ಪೋಡುಗಳು ಬದಲಿಯಾಗುವುದು, ಹಿಸ್ಸಾ ಬದಲಾವಣೆಯಾಗುವುದು

ಭೂಮಿ ಮಾನಿಟರಿಂಗ್ ಸೆಲ್ (BMC) ಮತ್ತು ಎನ್.ಐ.ಸಿ  (NIC)                     ಅ)bhoomi ತಂತ್ರಾಂಶದಿಂದ fruitspmk ತಂತ್ರಾಂಶಕ್ಕೆ realtime ಮಾಹಿತಿ ಒದಗಿಸದೇ ಇರುವುದರಿಂದ ಸಮಸ್ಯೆಯಿರುತ್ತದೆ.            ಆ) ಸಮಸ್ಯಾತ್ಮಕ  ಸರ್ವೆ ನಂಬರ್ ಗಳ ವಿವರಗಳನ್ನು BMC ಗೆ ಸಲ್ಲಿಸಿ ಮಾಹಿತಿ ಪಡೆಯಲಾಗುತ್ತಿದೆ.

2

ಅನರ್ಹ ಪ್ರಕರಣಗಳೆಂದು ತಡೆಹಿಡಿದಿರುವ ಪ್ರಕರಣಗಳಲ್ಲಿ ಅರ್ಹ ಪ್ರಕರಣಗಳು

ಒಂದೇ ಕುಟುಂಬಕ್ಕೆ ಸೇರಿದ ಕಾರಣ ಮಹಿಳಾ ಸದಸ್ಯರನ್ನು VA ವರದಿ ಪ್ರಕಾರ AAO ಲಾಗಿನ್ನಲ್ಲಿ ಅನರ್ಹಗೊಳಿಸಲಾಗಿರುತ್ತದೆ

ಜಿಲ್ಲೆಗಳಿಂದ ವರದಿ ನೀಡಿದ್ದಲ್ಲಿ ಕೇಂದ್ರ ಕಛೇರಿ    ADMIN ಲಾಗಿನ್ನಿಂದ ಅಂತಹ ಅರ್ಹ ಪ್ರಕರಣಗಳನ್ನು XML ರಚಿಸಲು ಕಳುಹಿಸಲಾಗುತ್ತದೆ

3

ತಹಶೀಲ್ದಾರ್ ಲಾಗಿನ್ನಗೆ OPERATOR ಗಳಿಂದ ತಪ್ಪಾಗಿ ಸೇರಿರುವ ಅರ್ಹ ಪ್ರಕರಣಗಳು

 ಅರ್ಜಿದಾರನ ಹೆಸರಿನಲ್ಲೇ ಕೃಷಿ ಜಮೀನು ಇದ್ದರೂ OPERATOR ಗಳ ತಪ್ಪಿನಿಂದ ಪೌತಿ ಪ್ರಕರಣಗಳಲ್ಲದಿದ್ದರೂ ತಹಶೀಲ್ದಾರ್ ಲಾಗಿನ್ ಗೆ FORWARD ಮಾಡಲಾಗಿರುತ್ತದೆ

ಜಿಲ್ಲಾಧಿಕಾರಿಗಳಿಂದ ಧೃಢೀಕೃತಗೊಂಡ ವರದಿ ಸಲ್ಲಿಸಿದ ನಂತರ ಕೇಂದ್ರ ಕಛೇರಿಯ   ADMIN ಲಾಗಿನ್ನಿಂದ ಅಂತಹ ಅರ್ಹ ಪ್ರಕರಣಗಳನ್ನು AAO ಲಾಗಿನ್ ಗೆ ಪರಿಶೀಲನೆಗೆ ಕಳುಹಿಸಲಾಗುತ್ತದೆ

4

ಸ್ಥಿತಿ ಪರಿಶೀಲನೆಯಲ್ಲಿ ಆಧಾರ್ ಸಂಖ್ಯೆ ನಮೂದಿಸಿದಾಗ ರೈತರ ವಿವರ ಅಲಭ್ಯತೆ

ಅರ್ಜಿ ನೊಂದಣಿ ಸಮಯದಲ್ಲಿ OPERATOR ಗಳು ರೈತರ ವಿವರಗಳನ್ನು ನಮೂದಿಸಿದ್ದು DECLARATION ಮಾಡಿ AAO ಗೆ FORWARD ಮಾಡಿರುವುದಿಲ್ಲ

OPERATOR ಲಾಗಿನ್ (RSK, ADA office, JDA office)  OPERATOR ಲಾಗಿನ್ನಲ್ಲಿ ಘೋಷಣೆಗೆ ಬಾಕಿಯಿರುವ ರೈತರ ಪಟ್ಟಿಯಲ್ಲಿ ಆಧಾರ್ ಸಂಖ್ಯೆಯನ್ನು ಪಡೆದು ರೈತ ಘೋಷಣೆಯಡಿ ಆಧಾರ್ ಸಂಖ್ಯೆಯನ್ನು ನಮೂದಿಸಿ ರೈತನ ವಿವರಗಳನ್ನು ಪರಿಶೀಲಿಸಿ ಘೋಷಿಸುವುದು

5

01.02.2019 ನಂತರ ಮಾಲೀಕತ್ವ ಹೊಂದಿರುವ ಜಮೀನುಗಳ ರೈತರೆಂದು ತಡೆಹಿಡಿಯಲಾಗಿದೆ

ಕೇಂದ್ರ ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯನ್ವಯ 31.01.2019ಭೂ ಒಡೆತನ ನಿರ್ಧಿರಿಸಲು ಕೊನೆಯ ದಿನಾಂಕವಾಗಿರುತ್ತದೆ

ಇಂತಹ ಪ್ರಕರಣಗಳು ಯೋಜನೆಗೆ ಅನರ್ಹವಾಗಿರುತ್ತದೆ (ಸರಿಪಡಿಸಲಾಗುವುದಿಲ್ಲ)

6

Absentee land lord ಯೆಂದು ಈಗಾಗಲೇ ಗುರುತಿಸಿರುವ ಭೂಮಿಯನ್ನು ಸರಿಪಡಿಸುವ ಕುರಿತು

ಜಿಲ್ಲೆಗಳಲ್ಲಿ  OPERATOR ಗಳು ಕೆಲ ಜಮೀನುಗಳನ್ನು Absentee land lord ಯೆಂದು ನಮೂದು ಮಾಡಿರುತ್ತಾರೆ

AAO ಲಾಗಿನ್  (RSK, ADA office, JDA office)  AAO ಲಾಗಿನ್ನಲ್ಲಿ  ಅನರ್ಹ ಭೂಮಿಯನ್ನು ಹಿಂದುರುಗಿಸಿ ಬಿಲ್ಲೆಯಡಿ ಅಂತಹ ಸರ್ವೆ ನಂಬರ್ ಗಳನ್ನು ವಾಪಾಸ್ ಮಾಡಿ,  ನೊಂದಣಿಗೆ ಅವಕಾಶ ಕಲ್ಪಿಸಬಹುದಾಗಿರುತ್ತದೆ

ಪಿ.ಎಂ.ಕಿಸಾನ್ ಯೋಜನೆಯಡಿ ಜಿಲ್ಲೆಗಳಿಂದ ಬರುವ ಸಾಮಾನ್ಯ ಅಹವಾಲುಗಳು

ಕ್ರಮ ಸಂಖ್ಯೆ

ಸಮಸ್ಯೆಗಳು

ಕಾರಣಗಳು

ಪರಿಹರಿಸುವ ಸಂಬಂಧಪಟ್ಟ ಕಛೇರಿ ಮತ್ತು ವಿಧಾನ

 

pmkisan.gov.in ಪೋರ್ಟಲ್ ನಲ್ಲಿ

7

ಆಧಾರ್ ಸಂಖ್ಯೆಯನ್ನು ನಮೂದಿಸಿದಾಗ 'either details not exist or rejected due to wrong details‘ ಎಂದು ತೋರಿಸುತ್ತದೆ

ರಾಜ್ಯದಿಂದ ಇಂತಹ ರೈತರ ವಿವರಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿರುವುದಿಲ್ಲ ( ಆದ್ದರಿಂದ fruitspmk.gov.in ಪೋರ್ಟಲ್ ನಲ್ಲಿ ಮೊದಲು ಅರ್ಜಿ ಸ್ಥಿತಿ ಪರಿಶೀಲಿಸಬೇಕಾಗಿರುತ್ತದೆ)

AAO ಲಾಗಿನ್ (RSK, ADA office) ಮತ್ತು ಕೇಂದ್ರ ಕಚೇರಿAAO ಲಾಗಿನ್ನಿಂದ XML ರಚನೆಗೆ FORWARD ಮಾಡಬೇಕಾಗಿರುತ್ತದೆ. ಕೇಂದ್ರ ಕಚೇರಿಯಿಂದ XML ರಚಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗಿರುತ್ತದೆ.

8

PFMS rejected

Aadhaar Number is not seeded in NPCI

ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಬೇಕಾಗಿರುತ್ತದೆ. ಜಿಲ್ಲೆಗಳಿಗೆ ರೈತರ ವಿವರಗಳನ್ನು ನೀಡಲಾಗಿದೆ

Bank Name And IFSC Code are not related to each other

ಕೇಂದ್ರ ಸರ್ಕಾರಕ್ಕೆ ಸಹಕಾರಿ ಬ್ಯಾಂಕ್ ಗಳ ವಿವರಗಳನ್ನು ಸಲ್ಲಿಸಲಾಗಿದೆ

Bank Name is not as per PFMS Bank Master.

Beneficiary is rejected as Account Type is other than SB / SBA / JD

ಜಿಲ್ಲೆಗಳಿಗೆ ಮಾಹಿತಿಯನ್ನುಸರಿಪಡಿಸಿ ಸಲ್ಲಿಸಲು email ಕಳುಹಿಸಲಾಗಿರುತ್ತದೆ (23.11.2019 ರಂದು) ಇಲ್ಲಿಯವರೆಗೂ ಜಿಲ್ಲೆಗಳಿಂದ ಮಾಹಿತಿ ಬಂದಿರುವುದಿಲ್ಲ ( ಉಡುಪಿ ಜಿಲ್ಲೆ ಹೊರತುಪಡಿಸಿ)

Duplicate Beneficiary Name , Bank Account No and Bank Name not allowed for same scheme

ಕೇಂದ್ರ ಸರ್ಕಾರಕ್ಕೆ ಮರುಪರಿಶೀಲನೆಗೆ ಸಲ್ಲಿಸಲಾಗಿದೆ

IFSC Code  either not present or currently inactive in tbl BankBranch

ಕೇಂದ್ರ ಸರ್ಕಾರಕ್ಕೆ ಮರುಪರಿಶೀಲನೆಗೆ ಸಲ್ಲಿಸಲಾಗಿದೆ

Incorrect Aadhaar Number

ಕೇಂದ್ರ ಸರ್ಕಾರಕ್ಕೆ ಮರುಪರಿಶೀಲನೆಗೆ ಸಲ್ಲಿಸಲಾಗಿದೆ

One or more mandatory tags values are missing.

ಜಿಲ್ಲೆಗಳಿಗೆ ಮಾಹಿತಿಯನ್ನುಸರಿಪಡಿಸಿ ಸಲ್ಲಿಸಲು email ಕಳುಹಿಸಲಾಗಿರುತ್ತದೆ

Rejected by Bank, Account No does not exist in Bank/INVALID/CLOSED

ಜಿಲ್ಲೆಗಳಿಗೆ ಮಾಹಿತಿಯನ್ನುಸರಿಪಡಿಸಿ ಸಲ್ಲಿಸಲು email ಕಳುಹಿಸಲಾಗಿರುತ್ತದೆ

ಪಿ.ಎಂ.ಕಿಸಾನ್ ಯೋಜನೆಯಡಿ ಜಿಲ್ಲೆಗಳಿಂದ ಬರುವ ಸಾಮಾನ್ಯ ಅಹವಾಲುಗಳು

ಕ್ರಮ ಸಂಖ್ಯೆ

ಸಮಸ್ಯೆಗಳು

ಕಾರಣಗಳು

ಪರಿಹರಿಸುವ ಸಂಬಂಧಪಟ್ಟ ಕಛೇರಿ ಮತ್ತು ವಿಧಾನ

 

pmkisan.gov.in ಪೋರ್ಟಲ್ ನಲ್ಲಿ

9

Amount credited to Account Number-NA

Aadhaar number based payment by GoI

ಕೇಂದ್ರ ಕಚೇರಿಯಲ್ಲಿ STATE NODAL OFFICER ಲಾಗಿನ್ನಲ್ಲಿ ಬ್ಯಾಂಕ್ ವಿವರ ಪಡೆಯಬಹುದಾಗಿದೆ.

10

PAYMENT STOPPED BY STATE

 XML ರಚನೆಯಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ನಂತರ ಒಂದೇ ಕುಟುಂಬದ ಸದಸ್ಯರೆಂದು fruitspmk.gov.inಪೋರ್ಟಲ್ ನಲ್ಲಿ ಅನರ್ಹಗೊಳಿಸಿದ ಕಾರಣ FTO ಪರಿಶೀಲನೆ ಸಮಯದಲ್ಲಿ stop payment ಮಾಡಲಾಗುತ್ತದೆ

ಕೇಂದ್ರ ಸರ್ಕಾರ                                               ಜಿಲ್ಲೆಗಳಿಂದ ಇಂತಹ ಪ್ರಕರಣಗಳಲ್ಲಿ ಅರ್ಹ ಪ್ರಕರಣಗಳಿದ್ದರೆ ಕೇಂದ್ರ ಕಚೇರಿ ಮಾಹಿತಿ ಸಲ್ಲಿಸಿದರೆ, ಅದನ್ನು ಸರಿಪಡಿಸಲಾಗುವುದು

11

Transaction failed

ಹಣ ವರ್ಗಾವಣೆ ಪ್ರಕ್ರಿಯೆಯ ಅಂತಿಮ ಹಂತದಲ್ಲಿ ಬ್ಯಾಂಕ್ ಗಳಿಂದ ವಹಿವಾಟು ಅಸಫಲವಾದಾಗ

ಕೇಂದ್ರ ಕಚೇರಿಯಲ್ಲಿ STATE NODAL OFFICER ಲಾಗಿನ್ನಲ್ಲಿ ಬ್ಯಾಂಕ್ ವಿವರ ಸರಿಪಡಿಸಬಹುದಾಗಿದೆ.

12

ಇನ್ನೊಬ್ಬರ ಬ್ಯಾಂಕ್ ಖಾತೆಗೆ ಹಣ ಜಮೆಗೊಂಡಿದ್ದರೆ

OPERATOR ಲಾಗಿನ್ನಲ್ಲಿ ನೊಂದಣಿ ಹಂತದಲ್ಲಿ ತಪ್ಪಾಗಿ ಬ್ಯಾಂಕ್ ಖಾತೆ ನಮೂದಾಗಿರುತ್ತದೆ

ಕೇಂದ್ರ ಸರ್ಕಾರ                                               ಜಿಲ್ಲೆಗಳಿಂದ ಇಂತಹ ಪ್ರಕರಣಗಳ   ಮಾಹಿತಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸಿದರೆ, ಅದನ್ನು ಸರಿಪಡಿಸಲಾಗುವುದು

13

ಆಧಾರ್ ಹೆಸರು ತಿದ್ದುಪಡಿ ಮಾಡುವ ಕುರಿತು

ನೊಂದಣಿ ಹಂತದಲ್ಲಿ name scoring ಗೆ ಗರಿಷ್ಟ ಶೇ.60 ರಷ್ಟಿದ್ದ ಕಾರಣ ಹೆಸರುಗಳಲ್ಲಿ ಲೋಪಗಳುಂಟಾಗಿರುತ್ತದೆ.

ಕೇಂದ್ರ ಸರ್ಕಾರ ದ   pmkisan.gov.in ಪೋರ್ಟಲ್ ನಲ್ಲಿ ಅದನ್ನು ಸರಿಪಡಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ

Pmkisan 15th instalment-ಪಿಎಂ ಕಿಸಾನ್ 15ನೇ ಕಂತಿನ ಅರ್ಹ ಪಟ್ಟಿ ಬಿಡುಗಡೆ,ಇಲ್ಲಿದೆ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-545