Drought affecting Arecanut-ಅಡಿಕೆಗೆ ಹೊದ ಮಾನ ಆನೆ ಕೊಟ್ಟರೂ ಬಾರದು,ಬರಗಾಲದಲ್ಲಿ ಅಡಿಕೆ ಬೆಳೆಗಾರರ ಕಥೆ ವ್ಯಥೆ,ಮುಂದೇನು ಅಡಿಕೆ ಭವಿಷ್ಯ?
<Krushirushi> <ಅಡಿಕೆ ಬೆಳೆ> <ಅಡಿಕೆ> <drought affecting Arecanut>
Drought affecting Arecanut-ಅಡಿಕೆಗೆ ಹೊದ ಮಾನ ಆನೆ ಕೊಟ್ಟರೂ ಬಾರದು,ಬರಗಾಲದಲ್ಲಿ ಅಡಿಕೆ ಬೆಳೆಗಾರರ ಕಥೆ ವ್ಯಥೆ
ಜಮೀನಿನಲ್ಲಿ ವರ್ಷವಿಡಿ ಬೆವರು ಹರಿಸಿದರೂ ಬದುಕಿನ ಕನಿಷ್ಠ ಆದಾಯವು ಕೈಗೆಟುಕದ ಬಯಲು ಸೀಮೆಬಾಗದ ರೈತರು ಹತಾಶರಾಗಿ ಸಾಂಪ್ರದಾಯಿಕ ಕೃಷಿ ಬೆಳೆಗಳಿಂದ ವಿಮುಖ ರಾಗುತ್ತಿದ್ದಾರೆ. ಅಡಿಕೆ ಬೆಳೆಗಾರರ ಬದುಕಿನಲ್ಲಾಗುತ್ತಿರುವ ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆಗಳಿಂದ ಪ್ರಭಾವಿತರಾಗುತ್ತಿರುವ ಈ ಭಾಗದ ರೈತರು ಹೆಚ್ಚು ಆದಾಯ ಪಡೆಯಬೇಕು ಎಂಬ ಕನಸಿನ ಬೆನ್ನೇರಿ ಅಡಿಕೆ ತೋಟ ಮಾಡುತ್ತಿದ್ದಾರೆ.
ಇದರ ಪರಿಣಾಮವೇ ಬಯಲು ಸೀಮೆಯ ಹಲವು ಜಿಲ್ಲೆಗಳಲ್ಲಿ ಅಡಿಕೆ ಬೆಳೆಯುವ ಪ್ರದೇಶ ಐದಾರು ವರ್ಷಗಳಲ್ಲಿ ದುಪ್ಪಟ್ಟಾಗಿದ್ದು ಅಲ್ಲೂ ಅಡಿಕೆಯ ಘಮಲು ಪಸರಿಸುತ್ತಿದೆ.
ಕರಾವಳಿ ಮಲೆನಾಡಿನ ಪ್ರಮುಖ ಬೆಳೆಯಾಗಿದ್ದ ಅಡಿಕೆಗೆ ಸಿಗುತ್ತಿರುವ ಚಿನ್ನದ ಬೆಲೆಯು ಬಯಲು ಸೀಮೆಯ ರೈತರನ್ನು ಬೆರಗುಗೊಳಿಸಿದೆ. ತುಮಕೂರು ಚಿತ್ರದುರ್ಗ ದಾವಣಗೆರೆ ಹಾವೇರಿ ಗದಗ ಬಳ್ಳಾರಿ ಜಿಲ್ಲೆಗಳ ರೈತರು ಅಲ್ಲಿರುವ ಅಲ್ಪಸಲ್ಪ ನೀರಾವರಿ ಸೌಲಭ್ಯ ಬಳಸಿಕೊಂಡು ಅಡಿಕೆ ತೋಟ ನಿರ್ಮಿಸುತ್ತಿದ್ದಾರೆ. ಕರಾವಳಿ ಮಲೆನಾಡಿನ ಅಡಿಕೆ ಬೆಳೆಗಾರರೊಂದಿಗೆ ಅಲ್ಲಿನ ರೈತರು ಪೈಪೋಟಿಗೆ ಇಳಿದಿದ್ದಾರೆ.
ತೋಟಗಾರಿಕೆ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ 2021ರ ಹಂತಕ್ಕೆ 5.63 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು ವಾರ್ಷಿಕ ಅಂದಾಜು 8.64 ಲಕ್ಷ ಟನ್ ಅಡಿಕೆ ಉತ್ಪಾದನೆ ಆಗುತ್ತಿದೆ.
2017-18 ರಿಂದ 2021-22 ರವರೆಗಿನ ಐದು ವರ್ಷಗಳ ಅವಧಿಯಲ್ಲಿ ತುಮಕೂರು ಜಿಲ್ಲೆಯಲ್ಲಿ 34,839 ಹೆಕ್ಟರ್ ( ಶೇಕಡ 99 ), ಚಿತ್ರದುರ್ಗ ಜಿಲ್ಲೆಯಲ್ಲಿ 20,061 ಹೆಕ್ಟರ್( ಶೇಕಡ 60 ) ಹಾಗೂ ಹಾವೇರಿ ಜಿಲ್ಲೆಯಲ್ಲಿ 5,901 ಹೆಕ್ಟರ್ ನಷ್ಟು ( ಶೇಕಡ 301) ಅಡಿಕೆ ಬೆಳೆಯುವ ಪ್ರದೇಶ ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಚಿಕ್ಕಮಂಗಳೂರು ಜಿಲ್ಲೆಯಲ್ಲಿ 24,214 ಹೆಕ್ಟರ್ ( ಶೇಕಡ 109 ) ಏರಿಕೆಯಾಗಿದೆ.
ಐದು ವರ್ಷಗಳ ಹಿಂದೆ ಗದಗ್ ಜಿಲ್ಲೆಯಲ್ಲಿ ಕೇವಲ 22 ಎಕರೆಯಷ್ಟಿದ್ದ ಅಡಿಕೆ ಕ್ಷೇತ್ರಕ್ಕೆ 250 ಎಕರೆಗೆ ವಿಸ್ತರಣಗೊಂಡಿದೆ. ಮುಂಡರಗಿ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನ ರೈತರು ಅಡಿಕೆ ಬೆಳೆಯತ್ತ ಒಲವು ತೋರಿಸುತ್ತಿದ್ದಾರೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ಹೂವಿನಹಡಗಲಿ ಹೊಸಪೇಟೆ ಹಾಗು ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನಲ್ಲೂ ಅಡಿಕೆ ತೋಟಗಳು ತಲೆ ಎತ್ತುತ್ತಿವೆ.
ಒಂದು ಎಕರೆ ಅಡಿಕೆ ತೋಟದಲ್ಲಿ ಖರ್ಚಲ ತೆಗೆದು ವರ್ಷಕ್ಕೆ ಮೂರುವರೆ ಲಕ್ಷ ಲಾಭ ಸಿಗುತ್ತಿದೆ. ಈ ತೋಟದ ಪಕ್ಕದಲ್ಲಿ ಮೆಕ್ಕೆಜೋಳ ಮತ್ತೆ ತರ ಬೆಳೆ ಬೆಳೆಯುತ್ತಿರುವ ರೈತರಿಗೆ ಎಕರೆಗೆ 20 ಸಾವಿರ ಲಾಭ ಸಿಕ್ಕರೆ ಹೆಚ್ಚು ಎಂಬ ಸ್ಥಿತಿ ಇದೆ. ಅಡಿಕೆ ಬೆಳೆಗಾರರು ನಡೆಸುತ್ತಿರುವ ಐಷಾರಾಮಿ ಜೀವನ ಬೇರೆ ಬೆಳೆ ಮೆಚ್ಚಿಕೊಂಡ ರೈತರನ್ನು ಆಕರ್ಷಿಸುತ್ತಿದೆ. ವರ್ಷವಿಡಿ ದುಡಿದರು ಕೈಗೆ ಬಡಿಗಾಸು ಸಿಗುವುದಾದರೆ ನಾವೇಕೆ ಇನ್ನು ಕೃಷಿ ಬೆಳೆಯನ್ನೇ ನಂಬಿಕೊಂಡು ಬದುಕಬೇಕು ಎಂಬ ಭಾವನೆಯೊಂದಿಗೆ ಅಡಿಕೆ ತೋಟದತ್ತ ಮುಖ ಮಾಡುತ್ತಿದ್ದಾರೆ.
ಕಣ್ಣು ಕುಕ್ಕುತ್ತಿರುವ ದರ
ಏಳೆಂಟು ವರ್ಷಗಳ ಹಿಂದೆ ಅಡಿಕೆ ದರವು ಒಂದು ಕ್ವಿಂಟಲ್ಗೆ 80000 ಗಡಿ ದಾಟಿತ್ತು. ಕಡಿಮೆ ಖರ್ಚು ಹಾಗೂ ಅಧಿಕ ಲಾಭ ತಂದು ಕೊಡುವ ಅಡಿಕೆಗೆ ಕೆಲವು ವರ್ಷಗಳಿಂದ ಒಳ್ಳೆಯದರ ಇದೆ. ಕಳೆದ ಅಕ್ಟೋಬರ್ ನಲ್ಲಿ 53,000 ಇತ್ತು. ಕೇಂದ್ರ ಸರ್ಕಾರ ಭೂತಾನನಿಂದ ಅಡಿಕೆ ಅನ್ನೋದು ಮಾಡಿಕೊಳ್ಳಲು ಅನುಮತಿ ನೀಡಿದ್ದರಿಂದ ಕನಿಷ್ಠ 45,000 ಬೆಲೆ ಈಗಲೂ ಸಿಗುತ್ತಿದೆ.
ಅಡಿಕೆಗೆ ಸಿಗುತ್ತಿರುವ ಬಂಗಾರದ ಬೆಲೆಯು ಭತ್ತ ಮೆಕ್ಕೆಜೋಳ ತರಕಾರಿ ದಾಳಿಂಬೆ ಕಬ್ಬು ಬೆಳೆಯುವ ರೈತರ ಕಣ್ಣು ಕುಕ್ಕುತ್ತಿದ್ದು 4-5 ಎಕರೆ ಭೂಮಿಯಲ್ಲಿ ಅಡಿಕೆ ಸಸಿ ನೀಡಲು ಆರಂಭಿಸಿದ್ದಾರೆ ಈಗಾಗಲೇ ಅಡಿಕೆ ಬೆಳೆದವರು ಕ್ಷೇತ್ರ ವಿಸ್ತರಣೆ ನೀಡುತ್ತಿದ್ದಾರೆ.
ಕೆಲ ವರ್ಷಗಳ ಹಿಂದೆ ಬತ್ತಕ್ಕೆ ಒಳ್ಳೆಯ ದರ ಬಂದಾಗ ದಾವಣಗೆರೆ ಜಿಲ್ಲೆಯಲ್ಲಿ ತೆಂಗಿನ ತೋಟ ತೆಗೆದು ಬತ್ತ ಬೆಳೆದಿದ್ದರು. ಈಗ ಅಡಿಕೆಯ ಸರದಿ. ಮುಂದಿನ 20 30 ವರ್ಷಗಳ ಕಾಲ ಅಡಿಕೆ ತೋಟದಿಂದ ಕನಿಷ್ಠ ಲಾಭ ಸಿಕ್ಕೇ ಸಿಗುತ್ತದೆ ಎಂಬುದು ರೈತರ ನಂಬಿಕೆಯಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಹೇಳುತ್ತಾರೆ.
ಒಂದು ಎಕರೆ ತೋಟ ನಿರ್ವಹಣೆಗೆ ವರ್ಷಕ್ಕೆ ಗರಿಷ್ಠ 75000 ಖರ್ಚಾಗಬಹುದು. ಎಕರೆಗೆ 8 ರಿಂದ 10 ಕ್ವಿಂಟಲ್ ಇಳುವರಿ ಪಕ್ಕಾ. 45,000 ಗಿಂತಲೂ ಹೆಚ್ಚು ದರ ಇರುವುದರಿಂದ ಎಕರೆಗೆ ಕನಿಷ್ಠ ಮೂರು ಲಕ್ಷ ಲಾಭ ಸಿಗುತ್ತದೆ.
ನಾವೇ ಅಡಿಕೆ ಸಲಿಸಿ ಒಣಗಿಸಿ ಮಾರಿದರೆ ಒಂದು ಎಕರೆಗೆ ಕೇಣೆ ನೀಡುವುದಕ್ಕಿಂತ 50000 ಕ್ಕಿಂತ ಲಾಭ ಸಿಗಲಿದೆ ಎಂಬುದು ಚೆನ್ನಗಿರಿ ತಾಲೂಕು ಕಾರಿಗೂರಿನ ರೈತ ಗುಂಟನೂರು ಮುರುಗೇಶ್ ಅವರ ಲೆಕ್ಕಾಚಾರ.
ದಾವಣಗೆರೆಯವರು ಅಡಿಕೆ ಬೆಳೆಯಬಹುದಾದರೆ ನಮಗೆಕೆ ಅಸಾದ್ಯ ಎಂಬ ಪ್ರಶ್ನೆಯೇ ಅಡಿಕೆ ಬೆಳೆಯಲು ಸ್ಫೂರ್ತಿ ಆಯಿತು. ಆರಂಭದಲ್ಲಿ ನಾಲ್ಕು ಎಕರೆಯಲ್ಲಿ ಅಡಿಕೆ ಬೆಳೆದೆ ಈಗ 14 ಎಕರೆಗೆ ವಿಸ್ತರಿಸಿದ್ದೇನೆ ಕಳೆದ ವರ್ಷ 13 ಲಕ್ಷ ಆದಾಯ ಬಂದಿದೆ ಎಂದು ಗದಗ್ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ರೈತ ರಾಮಾಂಜನೇಯ ರಾಜು ತಿಳಿಸಿದರು.
ಕೃಷಿ ಬೆಳೆಯನ್ನೇ ನಂಬಿಕೊಂಡಿರುವ ರೈತರು ಎಕರೆಗೆ ಅಬ್ಬಬ್ಬ ಎಂದರೆ 40000 ಗಳಿಸಬಹುದು ಅಂತೇಯ ಸಾಲ ಮಾಡಿ ಅಡಿಕೆ ಬೆಳೆಯುವ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ. ಬೆಳೆ ಕೈ ಕೊಟ್ಟರೆ ನಿರ್ವಹಿಸುವ ಸಾಮರ್ಥ್ಯವಿಲ್ಲದೆ ಬಾರಿ ಲಾಭವಾದ ಗಿನ ಆರ್ಥಿಕ ಸಾಮಾಜಿಕ ಅಸಮೂತಲನ ನಿಭಾಯಿಸುವ ಜಾಣ್ಮೆಯು ಇರುವುದಿಲ್ಲ. ಈ ಕಾರಣದಿಂದ ಇತಿಮಿತಿಯಲ್ಲೇ ಅಡಿಕೆ ಬೆಳೆಯುವುದು ಒಳಿತು ಎಂಬುದು ಕೃಷಿ ಇಲಾಖೆಯ ದಾವಣಗೆರೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ ಕಿವಿಮಾತು.
ಕರಾವಳಿ ಮಲೆನಾಡಿಗೆ ಹೋಲಿಸಿದರೆ ಬಯಲು ಸೀಮೆಯ ಅಡಿಕೆ ಬೆಳೆಗೆ ರೋಗಬಾಧೆ ಕಡಿಮೆ ಮಳೆನಾಡಿನಲ್ಲಿ ರೋಗ ಕಾಣಿಸಿಕೊಂಡರೆ ಬಾರಿ ಪ್ರಮಾಣದಲ್ಲಿ ಫಸಲು ನಷ್ಟವಾಗುತ್ತದೆ. ಬಯಲು ಸೀಮೆಯಲ್ಲಿ ರೋಗದಿಂದ ಸ್ವಲ್ಪ ಇಳುವರಿ ಕಡಿಮೆಯಾದರು ಲಾಭ ಸಿಗುವುದರಲ್ಲಿ ಸಂದೇಹವಿಲ್ಲ. ಅಡಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಾಗ ಕೀಟಬಾಧೆಯಿಂದ ಇಳುವರಿ ಕುಸಿದು ಬೆಲೆ ಸ್ಥಿರವಾಗಿರುವ ಸಾಧ್ಯತೆಯೂ ಇದೆ ಎಂದು ದಾವಣಗೆರೆಯ ಐಸಿಎರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ ಜಿ ಅಭಿಪ್ರಾಯ ಪಡುತ್ತಾರೆ.
ಉಷ್ಣಾಂಶ ಹೆಚ್ಚಾದರೆ ಇಳುವರಿ ಕುಸಿತ
ಬಯಲು ಸೀಮೆಯ ಅಡಿಕೆ ತೋಟಗಳಲ್ಲಿ ಸವಳು ಜವಳು ಸಮಸ್ಯೆ ಕಾಣಿಸಿಕೊಂಡಿಲ್ಲ. ಬತ್ತದ ಗದ್ದೆಯನ್ನು ಅಡಿಕೆ ತೋಟ ಮಾಡಿದಾಗ ಬಸಿಗಾಲವಿಗಳನ್ನು ನಿರ್ಮಿಸದಿದ್ದರೆ ಬೇರುಗಳಿಗೆ ಸರಿಯಾದ ಗಾಳಿ ಸಿಗದೆ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬೇಸಿಗೆಯಲ್ಲಿ ಉಷ್ಣಾಂಶವು ನಿರಂತರ 40 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿದ್ದರೆ ಅಡಿಕೆ ಕಾಯಿ ಸ್ವಲ್ಪ ಉದುರುತ್ತದೆ. ಅಡಿಕೆಗೆ ಒಳ್ಳೆಯ ಬೆಲೆ ಇರುವುದರಿಂದ ಹೆಚ್ಚಿನ ನಷ್ಟವೇನು ಆಗುವುದಿಲ್ಲ ಎಂದು ತೋಟಗಾರಿಕೆ ಇಲಾಖೆಯ ದಾವಣಗೆರೆ ಜಿಲ್ಲೆಯ ಉಪ ನಿರ್ದೇಶಕ ಜೆಸಿ ರಾಘವೇಂದ್ರಪ್ರಸಾದ್ ಅಭಿಪ್ರಾಯಪಡುತ್ತಾರೆ.
ಗರಿಗೆದರಿದ ನರ್ಸರಿ ಉದ್ಯಮ
ಈ ಹಿಂದೆ ಸಾಗರ ತೀರ್ಥಹಳ್ಳಿ ಭಾಗದ ನರ್ಸರಿ ಗಳಿಂದ ದಾವಣಗೆರೆ ಚಿತ್ರದುರ್ಗ ಹಾವೇರಿ ಜಿಲ್ಲೆಗಳ ರೈತರು ಅಡಿಕೆ ಸಸಿ ಖರೀದಿಸುತ್ತಿದ್ದರು. ಈಗ ದಾವಣಗೆರೆ ಚೆನ್ನಾಗಿರಿಯಲ್ಲಿ ಹಲವು ನರ್ಸರಿಗಳಲ್ಲಿ ಅಡಿಕೆ ಸಸಿ ಸಿಗುತ್ತದೆ. ದಾವಣಗೆರೆ ಚಿತ್ರದುರ್ಗ ಜಿಲ್ಲೆಗಳಲ್ಲೂ ಹಲವು ರೈತರು ತಮ್ಮ ತೋಟಗಳಲ್ಲೇ ಅಡಿಕೆ ಸಸಿ ಬೆಳೆಸಿ ಮಾರುತ್ತಿದ್ದಾರೆ. ಏಳೆಂಟು ವರ್ಷಗಳ ಹಿಂದೆ ವರ್ಷಕ್ಕೆ 5000 ಅಡಿಕೆ ಸಸಿ ಬೆಳೆಸುತಿದ್ದೆವು ಈಗ ಎರಡುವರೆ ಲಕ್ಷ ಸಸಿ ಬೆಳೆಸಿದರು ಬೇಡಿಕೆ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಸಾಗರದ ಸಹ್ಯಾದ್ರಿ ನರ್ಸರಿಯ ಮಾಲೀಕ ಗಿರೀಶ ತಿಳಿಸಿದರು.
ಕರಾವಳಿ ಮಲೆನಾಡಿನಲ್ಲೂ ಬೆಳೆ ವಿಸ್ತರಣೆ
ಕಳೆದ ಐದಾರು ವರ್ಷಗಳಲ್ಲಿ ಕರಾವಳಿ ಮಲೆನಾಡಿನ ಭಾಗದಲ್ಲೂ ಅಡಿಕೆ ಬೆಳೆಯುವ ಪ್ರದೇಶ ಗಣನೀಯವಾಗಿ ಏರಿಕೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 2016ರಲ್ಲಿ 70011 ಹೆಕ್ಟರ್ ಪ್ರದೇಶದಲ್ಲಿದ್ದ ಅಡಿಕೆ ಬೆಳೆಯುತ್ತಿದ್ದ ಪ್ರದೇಶ ಈಗ 1.2 ಲಕ್ಷ ಹೆಕ್ಟರ್ ಮುಟ್ಟಿದೆ. ಟ್ವೆಂಟಿ ಅನಾನಸ್ ಬೆಳೆಯಲು ಮೂರು ವರ್ಷಗಳ ಗುತ್ತಿಗೆ ನೀಡುತ್ತಿರುವ ಮಲೆನಾಡಿನ ರೈತರು ಈ ಅವಧಿಯಲ್ಲಿ ಅಡಿಕೆ ಸಸಿ ಬೆಳೆಸಿ ತೋಟ ಮಾಡುತ್ತಿದ್ದಾರೆ. ಬಗರ್ ಹುಕುಂ ಭೂಮಿಯಲ್ಲೂ ದೊಡ್ಡ ಪ್ರಮಾಣದಲ್ಲಿ ಅಡಿಕೆ ತೋಟ ತಲೆ ಎತ್ತುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 2016ರಲ್ಲಿ 18527 ಅಡಿಕೆ ಪ್ರದೇಶ ಈಗ 33365 ಹೆಕ್ಟರಿಗೆ ಏರಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 4300 ಹೆಕ್ಟರ್ ರಷ್ಟು ಅಡಿಕೆ ಪ್ರದೇಶ ಹೆಚ್ಚಾಗಿದೆ.
ಅಡಿಕೆಗೂ ನರೇಗಾ ಬಲ
ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ, ನರೇಗಾ ಯೋಜನೆ ಅಡಿ ಸಣ್ಣ ಅತಿ ಸಣ್ಣ ರೈತರಿಗೆ ಅಡಿಕೆ ತೋಟ ನಿರ್ಮಿಸಲು ಒಂದು ಹೆಕ್ಟೇರಿಗೆ 80,000ದ ವರೆಗೆ ಸಹಾಯಧನ ನೀಡಲಾಗುತ್ತಿದೆ. ಅರೆ ಮಲೆನಾಡು ಪ್ರದೇಶಗಳಾದ ಚೆನ್ನಗಿರಿ ಹೊನ್ನಾಳಿ ನ್ಯಾಮತಿ ಹಾನಗಲ್ ತಾಲೂಕುಗಳಲ್ಲಿ ಈ ಸೌಲಭ್ಯ ಪಡೆದು ಅಡಿಕೆ ತೋಟ ಎಬ್ಬಿಸಲು ರೈತರು ಪೈಪೋಟಿಗೆ ಇಳಿದಿದ್ದಾರೆ. ಇದರ ಬೆನ್ನಲ್ಲೇ ಬಯಲು ಸೀಮೆಯ ತಾಲೂಕು ಗಳಿಗೂ ನರೇಗಾದಡಿ ನೆರವು ನೀಡಬೇಕು ಎಂಬ ಹೂವು ರೈತರಿಂದ ಕೇಳಿ ಬರುತ್ತಿದೆ.
ರೈತ ಸ್ನೇಹಿತ ಸಹಕಾರಿ ಮಾರುಕಟ್ಟೆ
ಅಡಿಕೆ ಬೆಳೆಗೆ ಇರುವಷ್ಟು ವ್ಯವಸ್ಥಿತವಾದ ರೈತ ಸ್ನೇಹ ಸಹಕಾರಿ ಮಾರುಕಟ್ಟೆ ವ್ಯವಸ್ಥೆ ಉಳಿದ ಬೆಳೆಗಳಿಗೆ ಇಲ್ಲ. ಎರಡು ವರ್ಷ ಇಟ್ಟರೂ ಅಡಿಕೆ ಹಾಳಾಗುವುದಿಲ್ಲ. ದರಕುಸಿದ್ದರೆ ರೈತರು ಅಡಿಕೆಯನ್ನು ಮಾರಾಟ ಮಾಡದೆ ತಮ್ಮಗೋಡಮಿನಲ್ಲಿಯೇ ಇಟ್ಟು ಅಡಮಾನ ಸಾಲ ಪಡೆದುಕೊಳ್ಳಬಹುದಾಗಿದೆ. ಒಳ್ಳೆಯ ಬೆಲೆ ಇದ್ದಾಗ ಮಾರಲು ಅವಕಾಶ ಇರುವುದರಿಂದ ಅಡಿಕೆ ಬೆಳೆಗಾರರು ನೆಮ್ಮದಿಯಿಂದ ಇದ್ದಾರೆ ಎಂದು ಚೆನ್ನಗಿರಿಯ ತುಮ್ಕೋಸ್ ಅಧ್ಯಕ್ಷ ಆರ್‌ಎಮ್ ರವಿ ಅಭಿಪ್ರಾಯ ಪಡುತ್ತಾರೆ.
ಭೂತಾನ್ ನಿಂದ ಅಡಿಕೆ ಆಗೋದು ಮಾಡಿಕೊಂಡಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಲೆ ಕುಸಿತವಾಗಿಲ್ಲ. ನಮ್ಮ ಬಹುಪಾಲು ಅಡಿಕೆ ನಮ್ಮಲ್ಲಿ ಬಳಕೆಯಾಗುತ್ತಿರುವುದು ಇದಕ್ಕೆ ಕಾರಣ. ಅಡಿಕೆ ತೋಟಗಳು ಹೆಚ್ಚುತ್ತಿರುವುದರಿಂದ ದರದ ಮೇಲೆ ಪರಿಣಾಮ ಬೀರಲು ಇನ್ನೂ ನಾಲ್ಕೈದು ವರ್ಷಗಳಾದರೂ ಬೇಕಾಗಬಹುದು. ಭವಿಷ್ಯದಲ್ಲೂ ಅಡಿಕೆಗೆ ಉತ್ತಮ ದರ ಕಾಯ್ದುಕೊಳ್ಳಲು ಉಪ ಉತ್ಪನ್ನಗಳ ಬಗ್ಗೆ ಸರ್ಕಾರ ಸಹಕಾರ ಸೊಸೈಟಿಗಳು ಬೆಳೆಗಾರರು ಸಂಶೋಧನೆ ನಡೆಸಬೇಕು ಎಂದು ಅವರ ಸಲಹೆ ನೀಡಿದ್ದಾರೆ.
ತುಮ್ ಕೋರ್ಸ್ ದಾವಣಗೆರೆಯ ಡ್ಯಾಮ್ಕೋಸ್ ಭದ್ರಾವತಿಯ ರಾಂಬೊ ಸಾಗರದ ಅಫ್ಕೋರ್ಸ್ ಶಿವಮೊಗ್ಗದ ಮ್ಯಾಮ್ ಕೋರ್ಸ್ ದಕ್ಷಿಣ ಕನ್ನಡದ ಕ್ಯಾಂಪು ಸಿರಸಿಯ ತೋಟಗಾರಿಕೆ ಸೊಸೈಟಿ ಹೀಗೆ ಹಲವು ಸಹಕಾರ ಮಾರುಕಟ್ಟೆಗಳು ವ್ಯವಸ್ಥಿತವಾಗಿ ಅಡಿಕೆ ವೈವಾಟು ನಡೆಸುತ್ತಿದ್ದು ಬೆಳೆಗಾರರ ಹಿತವನ್ನು ಕಾಯುತ್ತಿದೆ.
ತೋಟವನ್ನು ಕೇಳಿ ನೀಡುವ ಪದ್ಧತಿಯು ಬಯಲುಸೀಮೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದ್ದು ಜೊತೆಗೆ ಹಸಿ ಅಡಿಕೆಯನ್ನು ಕೊಯ್ದು ಸುಲಿದು ಒಣಗಿಸಿ ಮಾರಾಟಕ್ಕೆ ಸಿದ್ಧ ಮಾಡಿ ವಾಪಸ್ ಕೊಡುವ ಪದ್ಧತಿಯು ಚಾಲನೆಯಲ್ಲಿದೆ. ಹಸಿ ಅಡಿಕೆ ಮಾರಾಟ ಮಾಡಲು ಅವಕಾಶವಿದ್ದು ಒಂದು ಕ್ವಿಂಟಲ್ ಹಸಿ ಅಡಿಕೆಗೆ ಸದ್ಯ 6,400 ರವರೆಗೆ ದರ ಇದೆ.
ಅಡಿಕೆಗೆ ನೀರು ಎರೆದ ಯೋಜನೆ
ಭದ್ರಾ ಮೇಲ್ದಂಡೆ ತುಂಗಾ ಮೇಲ್ದಂಡೆ ಹಾಗೂ ಕೆರೆ ತುಂಬಿಸುವ ಯೋಜನೆಗಳಿಂದಾಗಿ ಮಳೆಯಾಶ್ರಿತ ಪ್ರದೇಶಗಳಿಗೂ ನಿರಾವರಿ ಸೌಲಭ್ಯ ಸಿಗುತ್ತಿರುವುದರಿಂದ ಪಾಳು ಬಿದ್ದಿದ್ದ ಜಮೀನಿನಲ್ಲೂ ಅಡಿಕೆ ತೋಟ ತಲೆ ಎತ್ತುತ್ತಿದೆ.
ಎರಡು ವರ್ಷಗಳಿಂದ ಉತ್ತಮ ಮಳೆಯಾಗಿದ್ದು ಬಯಲುಸೀಮೆಯ ಜಿಲ್ಲೆಗಳ ಹಲವು ತೆರೆಗಳು ತುಂಬಿ ಅಂತರ್ಜಲ ಮಟ್ಟ ಹೆಚ್ಚಾಗಿದೆ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಮೂರ್ನಾಲ್ಕು ವರ್ಷ ನೀರಿಗೆ ಬರ ಉಂಟಾಗುವುದಿಲ್ಲ ಎಂಬ ವಿಶ್ವಾಸದಿಂದ ರೈತರು ಅಡಿಕೆ ಬೆಳೆಯ ಕಡೆ ಒಲವು ತೋರಿದ್ದಾರೆ.
ಭದ್ರಾ ಮೇಲ್ದಂಡೆ ಎತ್ತಿನಹೊಳೆ ಯೋಜನೆ ನಂಬಿಕೊಂಡು ತುಮಕೂರು ಜಿಲ್ಲೆಯಲ್ಲಿ ರೈತರು ಈಗಿನಿಂದಲೇ ಅಡಿಕೆ ಇತ್ತ ಪೈಪೋಟಿಗೆ ಇಳಿದಿದ್ದಾರೆ. ಒಂದೆರಡು ವರ್ಷಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳಲಿದೆ ಎಂಬ ಕಾರಣಕ್ಕೆ ಚಿತ್ರದುರ್ಗ ಜಿಲ್ಲೆಯಲ್ಲೂ ನಾಲೆ ಪಕ್ಕದ ಎರಡು ಬದಿಯ ಜಮೀನುಗಳಲ್ಲಿ ಅಡಿಕೆ ಸಸಿಗಳು ಮೇಲೆ ಏಳುತ್ತಿವೆ. ಹಿರಿಯೂರಿನ ವಾಣಿವಿಲಾಸ ಸಾಗರ ಜಲಾಶಯ 89 ವರ್ಷಗಳ ಬಳಿಕ ಭರ್ತಿ ಆಗಿರುವುದು ರೈತರಲ್ಲಿ ಭರವಸೆ ಮೂಡಿಸಿದೆ.
ದಾಳಿಂಬೆ ಬೆಳೆಗಾರರು ಅಡಿಕೆ ಸೆಳೆತಕ್ಕೆ ಒಳಗಾಗುತ್ತಿದ್ದಾರೆ. ಈರುಳ್ಳಿ ಮೆಕ್ಕೆಜೋಳ ಶೇಂಗಾ, ಸಿರಿಧಾನ್ಯ ಬೆಳೆಯುತ್ತಿದ್ದ ಜಮೀನುಗಳಲ್ಲಿ ಅಡಿಕೆ ಕಾಣುತ್ತಿದೆ, ಕೆರೆ ತುಂಬಿಸುವ ಯೋಜನೆಯಿಂದಾಗಿ ಬರಪೀಡಿತ ಜಗಳೂರು ತಾಲೂಕಿನ ರೈತರ ಮನದಲ್ಲೂ ಅಡಿಕೆ ತೋಟ ನಿರ್ಮಿಸಬೇಕೆಂಬ ಕನಸು ಚಿಗುರು ಒಡೆದಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಈ ಬಾರಿ ಕುಸಿತ ಕಂಡಿದೆ. ಇತ್ತೀಚೆಗಷ್ಟೇ ಅಡಿಕೆ ಧಾರಣೆಯಲ್ಲಿ ಏರಿಕೆ ಕಂಡಿದ್ದು ಏಕಾಏಕಿ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದೆ. ಈ ಸಲ ಅಡಿಕೆ ಬೆಳೆಯಲ್ಲಿ ಉತ್ತಮ ಇಳುವರಿ ಆಗಿದ್ದು ಬೆಲೆ ಹೇಳಿಕೆಯಿಂದ ಬೆಳೆಗಾರರು ಬೇಸರಗೊಂಡಿದ್ದಾರೆ.
ಕರ್ನಾಟಕ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ ಧಾರಣೆ ಮುಂದಿನ ದಿನಗಳಲ್ಲಿ ಉತ್ತಮ ಸ್ಥಿತಿಯನ್ನು ಪಡೆದುಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ವರದಿಗಳ ಪ್ರಕಾರ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ರಾಜ್ಯದ ಹಲೆವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ ಅಲ್ಲದೆ ಪ್ರತಿದಿನವೂ ಬೆಲೆಗಳಲ್ಲಿ ವಿರಳಿತವಾಗಿರುತ್ತದೆ. ಎಲ್ಲ ರಾಜ್ಯಕ್ಕಿಂತ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ಅಡಿಕೆ ಧಾರಣೆ 52899 ದರದಲ್ಲಿ ವೈವಾಟು ನಡೆಸುತ್ತಿದ್ದು ಸ್ಥಿರತೆಯನ್ನು ಕಾಯ್ದುಕೊಂಡಿದೆ. ಇನ್ನು ಮಂಗಳೂರಿನ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ 25876 ರಿಂದ 31,000 ಬೆಲೆಯಲ್ಲಿ ಮಾರಾಟವಾಗುತ್ತಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.
ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪದಲ್ಲಿ ರಾಶಿ ಅಡಿಕೆ -41,119 ರೂ
ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ರಾಶಿ ಅಡಿಕೆ-46,799 ರೂ
ದಾವಣಗೆರೆ ಜಿಲ್ಲೆಯಲ್ಲಿ ರಾಶಿ ಅಡಿಕೆ 45269
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ರಾಶಿ ಅಡಿಕೆ 46,099
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ರಾಶಿ ಅಡಿಕೆ 46609
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ರಾಶಿ ಅಡಿಕೆ 46799
ಉತ್ತರ ಕನ್ನಡ ಜಿಲ್ಲೆಯ ಎಲ್ಲಾಪುರದಲ್ಲಿ ರಾಶಿ ಅಡಿಕೆ 52899
ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಹಳೆಯ ಅಡಿಕೆಗೆ 48,000 ದಿಂದ 54,500
ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಕೋಕಾ ಅಡಿಕೆಗೆ ಹನ್ನೆರಡುವರೆ ಸಾವಿರದಿಂದ 25,000
ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಹೊಸ ಅಡಿಕೆಗೆ 25876 ರಿಂದ 31,000
ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಕೋಕಾ ಅಡಿಕೆಗೆ 11,000 ದಿಂದ 26,000
ಪುತ್ತೂರಿನಲ್ಲಿ ಹೊಸ ಅಡಿಕೆಗೆ 32,000 ದಿಂದ 38,000
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ರಾಶಿ ಅಡಿಕೆ 45,899
ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ರಾಶಿ ಅಡಿಕೆ 46419
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ರಾಶಿ ಅಡಿಕೆ 46,679
ಶಿಕಾರಿಪುರದಲ್ಲಿ ರಾಶಿ ಅಡಿಕೆ 45900
ಶಿವಮೊಗ್ಗ ಜಿಲ್ಲೆಯಲ್ಲಿ ರಾಶಿ ಅಡಿಕೆ 46299 ರೂಪಾಯಿ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ರಾಶಿ ಅಡಿಕೆ 46899
ತುಮಕೂರು ಜಿಲ್ಲೆಯಲ್ಲಿ ರಾಶಿ ಅಡಿಕೆ 43400
ಇಲ್ಲಿದೆ ಪರಿಹಾರ
ಬಯಲು ಸೀಮೆ ರೈತರು ಅಡಿಕೆ ಬದಲು ನಿಂಬೆ ನೆಡಿ
ವಿಧಿಯಿಲ್ಲದೇ ಆದಾಯ ಗ್ಯಾರೆಂಟಿ ಬೆಳೆ ಹಿಂದೆ ಬಿದ್ದಿರೋ ನಮ್ಮ ಬಹುತೇಕ ರೈತರು ಅಡಿಕೆ ನೆಡಲು ಉತ್ಸುಕರಾಗಿಹರು. ಈಗಾಗಲೇ ಬಯಲುಸೀಮೆಯವರೂ ಸೇರಿದಂತೆ ಕೋಟ್ಯಾನುಕೋಟಿ ಅಡಿಕೆ ಗಿಡಗಳ ನೆಟ್ಟಿಹರು, ನೆಡುತಿಹರು. ಮಲೆನಾಡಿನ ಭತ್ತದ ಗದ್ದೆಗಳು, ಅರೆಮಲೆನಾಡಿನ ಹೊಲಗಳು ಬೋರ್ ವೆಲ್ ನಂಬಿ ಅಡಿಕೆ ತೋಟಗಳಾಗುತ್ತಿವೆ.
ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಕಾಲದ ಬರಗಾಲದ ನೆನಪಿರೋ ಯಾವ ರೈತನೂ ಅಡಿಕೆ ನೆಡುವ ಮುನ್ನ ನೂರು ಬಾರಿ ಯೋಚಿಸುವನು. ಆ ವೇಳೆ ಬರಗಾಲದ ಬಿಸಿಲ ಧಗೆಗೆ, ನೀರಿನ ಕೊರತೆಗೆ ಮಲೆನಾಡಿನಲ್ಲೂ ಅಡಿಕೆ ತೋಟ ಒಣಗಿದ ಸಾವಿರಾರು ಉದಾಹರಣೆಗಳು ನಮಗೆ ಸಿಗುವವು.
ಜೊತೆಗೆ ಜಗತ್ತು ಮುಕ್ತ ಮಾರುಕಟ್ಟೆಗೆ ಮುಖಾಮುಖಿ ಆಗಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಅಡಿಕೆ ಉತ್ಪಾದನೆ ಮಾಡೋ ಭಾರತವೂ ಕಾರ್ಪೋರೇಟ್ ಕಂಪೆನಿಗಳ ಲಾಬಿಗೆ ಮಣಿದು ಕಳೆದ ವರ್ಷ ನಯಾ ಪೈಸೆ ಆಮದು ಶುಲ್ಕವಿಲ್ಲದೇ ಭೂತಾನ್ ನಿಂದ 17 ಸಾವಿರ ಟನ್ ಅಡಿಕೆ ಆಮದಿಗೆ ಅನುಮತಿ ಕೊಟ್ಟಿದ್ದು, ಅದರ ಪರಿಣಾಮ ಎಲ್ಲಾ ನಮಗೆ ಗೊತ್ತೇ ಇದೆ.
ಇನ್ನೂ ಖಾಸಗೀಕರಣದಿಂದಾಗಿ ವಿದ್ಯುತ್ ಕ್ಷೇತ್ರವೂ ಖಾಸಗೀಕರಣಗೊಂಡು ಅಡಿಕೆ ರೈತರ ಪಾಲಿಗೆ ಬಿಸಿ ತುಪ್ಪವಾಗಲಿದೆ. ತಂತು ಬೇರಿನ ಅಡಿಕೆ ಮರ ಬರ ಸಹಿಷ್ಣುವಾಗಿರುವುದಿರಲಿ, ನೀರಿನ ಕೊರತೆಯನ್ನೂ ಸಹಿಸಲಾರದಂತ ಅಸಹಾಯಕ ಬೆಳೆ. ಇತ್ತೀಚೆಗೆ ಮರಣಮೃದಂಗ ನುಡಿಸಿದಂತೆ ಎಲೆ ಚುಕ್ಕಿ ರೋಗ ಬೇರೆ ಅಡಿಕೆ ಬೆಳೆಗಾರರಿಗೆ ದೊಡ್ಡ ಗಂಡಾಂತರವಾಗಿ ಪರಿಣಮಿಸಿದೆ. ಭೂಮಿಯೊಳಗಿನ ಅಂತರ್ಜಲ ಸಂಪತ್ತು ಭಯ ಹುಟ್ಟಿಸುವ ಮಟ್ಟಕ್ಕೆ ಖಾಲಿ ಆಗುತ್ತಿದೆ. ವಿದ್ಯುತ್ ಬಿಲ್ ಕಟ್ಟಿ , ಬೋರ್ ವೆಲ್ ಗಳ ಕೊರೆಸಿ ಅಡಿಕೆ ರೈತರು ಹೈರಾಣವಾಗಲಿಹರು.
ಒಟ್ಟಾರೆ ರೈತರು ವಾತಾವರಣದ ಏರುಪೇರು, ಜಾಗತಿಕ ಮಾರುಕಟ್ಟೆ, ದೇಶದೊಳಗಿನ ಕಾರ್ಪೊರೇಟ್ ಪರ ಬದಲಾವಣೆಗಳು ಇತ್ಯಾದಿಗಳನ್ನೆಲ್ಲಾ ಸೂಕ್ಷವಾಗಿ ಗಮನಿಸಿ ಭರವಸೆಯ ಪರ್ಯಾಯ ಬೆಳೆಗಳತ್ತ ಮುಖಾಮುಖಿ ಆಗುವುದು ಒಳಿತು.
ಜಾಗತಿಕ ತಾಪಮಾನ ಹಾಗೂ ರೋಗರುಜಿನಗಳ ಜೊತೆ ತನ್ನ ಬೆಲೆ ಮತ್ತು ಅನಿವಾರ್ಯತೆ ಹೆಚ್ಚಿಸಿಕೊಳ್ಳುತ್ತಿರುವ, ವರ್ಷಪೂರ್ತಿ ಫಸಲು ಕೊಡೋ ಕಾಗ್ಜಿ ನಿಂಬೆಯಂತೂ ಬಯಲುಸೀಮೆ ರೈತರ ಪಾಲಿಗೆ ATM ಆಗಿ ಹಿತ ಕಾಯುವುದು.
✍️ ಬೆಳವಾಡಿ ನವೀನ ಕುಮಾರ್
ಬಿಜಾಪುರ ಕಾಗ್ಜಿ ನಿಂಬೆ ನರ್ಸರಿ
ನಮ್ಮ ಭೂಮಿ, ಹಾಸನ
9591066583
ಎಲೆ ಎಂದಾಕ್ಷಣ ಅಡಿಕೆ ಎಂಬ ಮಾತು ಹಿಂದೆನೇ ಬರುತ್ತೆ, ಅಡಿಕೆ ತಿನ್ನಲು ರುಚಿಯ ಜೊತೆಗೆ ಆರೋಗ್ಯಪೂರ್ಣ ಹೌದು ಹೀಗಾಗಿ ಅಡಿಕೆಯಲ್ಲಿರುವ ಔಷಧಿ ಗುಣಗಳ ಬಗ್ಗೆ ತಿಳಿದುಕೊಳ್ಳುವ ಲೇಖನ ನಿಮಗಾಗಿ
ಅಡಿಕೆ ಮಹತ್ವವನ್ನು ನಮ್ಮ ಗಾದೆಗಳಲ್ಲಿ ಅರ್ಥವತ್ತಾಗಿ ಹೇಳಿದ್ದಾರೆ. ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು ಅಡಿಕೆ ಕತ್ತರಿ ಒಳಗೆ ಸಿಕ್ಕಿಕೊಂಡಂತೆ ಹೋದರೆ ಒಂದು ಗೂಟ ಅಡಿಕೆ ಆದರೆ ಒಂದು ಮರ ಮುಂತಾದ ಗಾದೆಗಳಲ್ಲಿ ಅಡಿಕೆಯ ಪ್ರಮುಖತೆಯನ್ನು ವರ್ಣಿಸಲಾಗಿದೆ.
ಅಡಿಕೆಯ ವೈವಿಧ್ಯತೆ ಹಲವಾರು ಬಗೆ
ಇದಕ್ಕೆ ಸಾಮಾಜಿಕ ಧಾರ್ಮಿಕ ಹಾಗೂ ಆರ್ಥಿಕ ಮಹತ್ವಗಳಿವೆ. ಅಡಿಕೆ ಇಲ್ಲದೆ ಯಾವುದೇ ಪೂಜೆ ಪುನಸ್ಕಾರ ಸಭೆ ಸಮಾರಂಭ ಶುಭ ಕಾರ್ಯ ಅತಿಥಿಸತ್ಕಾರ ಸನ್ಮಾನ ಮದುವೆ ಮುಂಜಿ ಉಪನಯನ ನಾಮಕರಣ ಶವಸಂಸ್ಕಾರ ಇತ್ಯಾದಿ ನಡೆಯುವುದಿಲ್ಲ.
ಅಡಿಕೆಯ ಔಷಧೀಯ ಗುಣಗಳು
ಅಡಿಕೆ ಔಷಧಿಯ ಗುಣಗಳಿಂದಾಗಿಯೇ ಇದನ್ನು ಆಹಾರದ ನಂತರ ಹಾಗೂ ಪೂರ್ವದಲ್ಲಿ ಸೇವಿಸುವ ರೂಢಿ ಇದೆ
ಎಲೆ ಮತ್ತು ಸುಣ್ಣದೊಂದಿಗೆ ಅಡಿಕೆಯನ್ನು ಜಗಿದಲ್ಲಿ ಬಾಯಿಯ ದುರ್ಗಂಧ ದೂರಗೊಳ್ಳುತ್ತದೆ.
ಅಡಿಕೆಯನ್ನು ಬಯಡಿಸುವುದರಿಂದ ದವಡೆ ಮತ್ತು ಕೆನ್ನೆಗೆ ಒಳ್ಳೆಯ ವ್ಯಾಯಾಮವಾಗುತ್ತದೆ.
ತಲೆ ಸಿಡಿತ ಹಲ್ಲು ನೋವು ನಾರು ಹುಣ್ಣು ತಿವಿಸೋರುವುದು ಮುಂತಾದವುಗಳಿಗೆ ಅಡಿಕೆ ಸೇವನೆ ಉಪಯುಕ್ತ
ಅಡಿಕೆಯ ಸೇವನೆ ಕೆಲವೊಂದು ಅಣು ಜೀವಿಗಳನ್ನು(Anti Bacterial property)ಹತ್ತಿಕ್ಕವಲ್ಲದು.
ಅಡಿಕೆಯನ್ನು ಹದವಾಗಿ ಹುರಿದು ಪುಡಿ ಮಾಡಿ ಕಾಫಿ ಅಂತ ಪಾನೀಯವನ್ನು ತಯಾರಿಸಿ ಕುಡಿಯುವುದುಂಟು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆಯಿಂದ ತಯಾರಿಸಿದ ಸುಪಾನ ಹಾಗೂ ಪೂಗ ಪಾನಿಯಗಳು ಅತಿ ಜನಪ್ರಿಯ
ಆಯುರ್ವೇದದಲ್ಲಿ ವಿಶೇಷವಾಗಿ ಹಲವು ವಿಧದ ಚರ್ಮರೋಗಗಳಿಗೆ ( ವಿಸರ್ಪ ಗಜಕರ್ಣ ತುರಿಕಚ್ಚಿ ಇತ್ಯಾದಿ ) ಎಲೆ ಅಡಿಕೆ ಹಾಗೂ ಹಣ್ಣು ಅಡಿಕೆಗಳನ್ನ ಉಪಯೋಗಿಸುತ್ತಾರೆ.
ಈ ಗುಣಗಳಿಂದ ಅಡಿಕೆಯನ್ನು ಔಷಧಿಕೃತ ಸಾಬೂನುಗಳ ತಯಾರಿಕೆಯಲ್ಲಿ ಬಳಸಲು ವಿಫಲ ಅವಕಾಶವಿದೆ.
ಮಧುಮೇಹ ಹಾಗೂ ರಕ್ತದ ಒತ್ತಡಗಳಲ್ಲಿ ಅಡಿಕೆಯು ವಿಶೇಷ ಪರಿಣಾಮಕಾರಿಯಾಗಿರುವುದು ಎಂಬುದನ್ನು ಬಹಳ ಹಿಂದೆ ಆಯುರ್ವೇದ ತಜ್ಞರು ಕಂಡುಕೊಂಡಿದ್ದಾರೆ.
ಟೇಪ್ ವರ್ಮ್ ಜಂತುಹುಳು ಇತ್ಯಾದಿಗಳಿಗೆ ಅಡಿಕೆ ಪರಿಣಾಮಕಾರಿ ಔಷಧಿ.
ಅಡಿಕೆಯಲ್ಲಿ ಹಲ್ಲು ಪುಡಿ ತಯಾರಿಕೆಯಲ್ಲೂ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಟೂತ್ಪೇಸ್ಟ್ ಗಳನ್ನು ಉಪಯೋಗಿಸಬಹುದಾಗಿದೆ.
ವಾತ ವ್ಯಾದಿಗೆ ಅಡಿಕೆಯನ್ನು ಉಪಯೋಗಿಸುತ್ತಾರೆ
ಅಡಿಕೆಯಲ್ಲಿ tasanin 15 ಪರ್ಸೆಂಟ್ ಕೊಬ್ಬು 14% ಅರೆ ಕೈ 0.1% ಅರೆಕೋಲೈಲ್ 0.07% ಮತ್ತು ಕೆಲವು ಸಸ್ಯ ಕ್ಷಾರ ಅಲ್ಕ ಲೊಯಿಲ್ಡ್ ಗಳಿವೆ.
ಅರೆ ಕೋ ಲೈನ್ ಎಂಬ ಸಸ್ಯಕ್ಶರ ಆಲ್ಕಲೈನಲ್ಲಿ ಸ್ವಲ್ಪ ಪ್ರಮಾಣದ ಉತ್ತೇಜನ ಜನ್ನ ಅಂಶವಿರುತ್ತದೆ. ಆ ಕಾರಣದಿಂದ ಕೃಷಿ ಕೆಲಸಗಳಲ್ಲಾಗಲಿ ಅಥವಾ ಇತರ ಕೆಲಸ ಕಾರ್ಯಗಳಲ್ಲಿ ತೊಡಗಿರುವವರು ಆಯಾಸ ಪರಿಹಾರಕ್ಕಾಗಿ ಸ್ವಲ್ಪ ಹೊತ್ತು ಎಲೆ ಅಡಿಕೆ ಜಗೆಯುವುದು ಸಾಮಾನ್ಯ.
ಅಡಿಕೆಯಲ್ಲಿ ಟ್ಯಾನಿಂಗ್ ಅಥವಾ ಚೊ lಗರು( ಹಸಿ ಅಡಿಕೆಯನ್ನು ಸಂಸ್ಕರಿಸಿ ಬೇಯಿಸಿದಾಗ ಲಭಿಸುವ ಅಂಶ )ಎಂಬ ಅಂಶವಿರುತ್ತದೆ. ಅದನ್ನು ಚರ್ಮದ ಮಾಡಲು ಮಸಿ ಅಥವಾ ಶಾಹಿ ರಟ್ಟುಗಳನ್ನು ಅಂಟಿಸಲು ಒಂದು ವಸ್ತುವಾಗಿ ಹಾಗೂ ಉಣ್ಣೆ ಮತ್ತು ಕಾಗದ ಗಳಿಗೆ ಬಣ್ಣ ಹಚ್ಚಲು ಉಪಯೋಗಿಸಲಾಗುತ್ತದೆ.
ಅಡಿಕೆಯಿಂದ ತಯಾರಿಸಿದ ಬಣ್ಣವನ್ನು ಬಟ್ಟೆಗಳಿಗೆ ಬಣ್ಣ ಕೊಡಲು ಬಳಸುವುದುಂಟು.
ಅಡಿಕೆ ಕಾಯಿಗಳಲ್ಲಿ 10 ರಿಂದ 14% ಕೊಬ್ಬು ಜಿಡ್ಡು ಇರುತ್ತದೆ ಸದ್ಯಕರಿಸಿದ ಅಡಿಕೆ ಕೊಬ್ಬು ಬೆಣ್ಣೆ ಅಥವಾ ಕೋಕೋ ಬೆನ್ನಿಗಿಂತ ಗಟ್ಟಿ ಇರುತ್ತದೆ ಇದರಿಂದ ತಯಾರಾದ ಸಿಹಿ ತಿನಿಸುಗಳು ವನಸ್ಪತಿಗಳನ್ನು ಬಳಸಿ ತಯಾರಿಸುವ ತಿಂಡಿಗಳಷ್ಟೇ ಉತ್ತಮವಾಗಿರುತ್ತದೆ.
ಸುಗಂಧ ಸುಪಾರಿ ಅಥವಾ ಪರಿಮಳಯುಕ್ತ ಅಡಿಕೆ ಪುಡಿ
ಒಣಗಿಸಿದ ಅಡಿಕೆಯನ್ನು ಒಡೆದು ಸಣ್ಣ ಸಣ್ಣ ಚೂರು ಅಥವಾ ಹೋಳುಗಳನ್ನಾಗಿ ಮಾಡಿ ಸುವಾಸನೆಯುಕ್ತ ವಸ್ತು (ಸುಗಂಧದ ದ್ರವ್ಯ) ಗಳು, ಅಡಿಕೆ ಪುಡಿ ಕಲ್ಲು ಸಕ್ಕರೆ ಲವಂಗ ಆಹಾರದ ಬಣ್ಣ ಪಚ್ಚ ಕರ್ಪೂರ ಮುಂತಾದವುಗಳನ್ನು ಸೇರಿಸಿ ಪೊಟ್ಟಣಗಳನ್ನಾಗಿ ಮಾಡಿ ಮಾರಾಟ ಮಾಡುತ್ತಾರೆ
ಈ ಸುಫರಿಯನ್ನು ಚಾಲಿ ಮತ್ತು ಕೆಂಪಡಿಕೆಗಳನ್ನು ಬಳಸಿ ತಯಾರಿಸುತ್ತಾರೆ
ಒಣಕೊಬ್ಬರಿ ಸಕ್ಕರೆ ಮತ್ತು ಸಾಂಬಾರ್ ವಸ್ತುಗಳ ಪುಡಿಯಲ್ಲಿ ಸೇರಿಸುವುದುಂಟು.
ಅಡಿಕೆ ಚೂರುಗಳು ಲವಂಗ ಜಾಯಿಕಾಯಿ ಜಾಪತ್ರೆ ಏಲಕ್ಕಿ ದಾಲ್ಚಿನ್ನಿ, ಕುಂಕುಮ ಕೇಸರಿ ಮೆಣಸು ಮುಂತಾದವುಗಳನ್ನು ಬಳಸಿ ಇದನ್ನು ತಯಾರಿಸುತ್ತಾರೆ.
ಇತರ ಎಲ್ಲಾ ವಸ್ತುಗಳೊಂದಿಗೆ ಅಡಿಕೆ ಚೂರುಗಳನ್ನು ಬೇರೆ ಸಿಟ್ಟು ಗುಲಾಬಿ ತೈಲವನ್ನು ಈ ಮಿಶ್ರಣಕ್ಕೆ ಚುಮುಕಿಸಿ ಆನಂತರ ಡಬ್ಬಿ ಗಳಲ್ಲಿ ತುಂಬಿ ಭದ್ರಪಡಿಸುತ್ತಾರೆ
ವಿದೇಶಿ ವಸ್ತ್ರಕ್ಕೆ ಅಡಿಕೆ ಬಣ್ಣದ ಬಳಕೆ
ವಸ್ತ್ರೋದ್ಯಮದಲ್ಲಿ ಅಡಿಕೆಯ ಬಣ್ಣದ ಬಳಕೆ ಈಗ ವಿದೇಶಗಳಲ್ಲಿಯೂ ಹೆಚ್ಚುತ್ತಿದೆ. ಈ ನೈಸರ್ಗಿಕ ಬಣ್ಣದ ಉತ್ಕೃಷ್ಟತೆಯನ್ನು ಇನ್ನಷ್ಟು ಹೆಚ್ಚಿಸಿದರೆ ಅಡಿಕೆ ಕೃಷಿಯಲ್ಲಿ ಹೊಸ ಕ್ರಾಂತಿ ಉಂಟಾಗುವ ಸಾಧ್ಯತೆ ಇದೆ ಎಂದು ಅಡಿಕೆ ಕೃಷಿ ತಜ್ಞರು ಹೇಳುತ್ತಿದ್ದಾರೆ.
ಕೆಂಪಡಿಕೆಯ ಕೊಯ್ಲೋತರ ಸಂಸ್ಕರಣೆಯ ಉಪ ಉತ್ಪನ್ನ ಚೊಗರು ಅಥವಾ ತೊಗುರು ಅನ್ನು ನೈಸರ್ಗಿಕ ಬಣ್ಣಕ್ಕೆ ಬಳಸಲಾಗುತ್ತಿದೆ. ಅಡಿಕೆಯ ತೊಗರಿನಿಂದ ಬಣ್ಣ ತಯಾರಿಕೆ ಬಹಳ ವರ್ಷಗಳಿಂದ ಇದೆ. ಅದು ಅತಿ ಕಡಿಮೆ ಪ್ರಮಾಣದಲ್ಲಿ ಇತ್ತು ಈಗ ಜಾಗತಿಕವಾಗಿ ಬೇಡಿಕೆ ಪಡೆದುಕೊಳ್ಳುತ್ತಿದೆ.
ಮಧ್ಯವರ್ತಿಗಳಿಂದ ಚೊಗರು ಖರೀದಿಸಿ ಅಲ್ಪ ಪ್ರಮಾಣದಲ್ಲಿ ಸಂಸ್ಕರಿಸಿ ರಾಜಸ್ಥಾನ್ ಗುಜರಾತ್ ಉತ್ತರಪ್ರದೇಶದ ಕಂಪನಿಗಳಿಗೆ ಪೂರೈಸುತ್ತಿದ್ದೇವೆ ಎನ್ನುತ್ತಾರೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶೆಡ್ತಿಕೆರೆ ಗ್ರಾಮದ ಹವ್ಯಕ ಕೃಷಿ ಉದ್ಯೋಗ ಮತ್ತು ಕೈಗಾರಿಕಾ ಕಂಪನಿಯ ಸಂತೋಷ್ ಕುಮಾರ್.
ಹಾಲಿನ ಪೌಡರ್ ನಂತೆ ಅಡಿಕೆಯ ತೊಗರಿನಿಂದ ಪೌಡರನ್ನು ಬೆಂಗಳೂರು ಹಾಗೂ ರಾಜಸ್ಥಾನದಲ್ಲಿ ಉತ್ಪಾದಿಸಿ ನಟ್ ಬ್ರೌನ್ ಹೆಸರಿನಲ್ಲಿ ಈ ಬಣ್ಣವನ್ನು ದೇಶ ವಿದೇಶಗಳಿಗೆ ಪೂರೈಸಲಾಗುತ್ತಿದೆ ಇದಕ್ಕೆ ಬೇಡಿಕೆಯು ಹೆಚ್ಚುತ್ತಿದೆ ಕಳಪೆ ಗುಣಮಟ್ಟದ ಅಡಿಕೆಯ ಬಣ್ಣ ವೃದ್ಧಿಸಲು ತೊಗರನ್ನು ಈಗಲೂ ಕೆಲವು ವ್ಯಾಪಾರಿಗಳು ಬಳಕೆ ಮಾಡುತ್ತಿದ್ದಾರೆ ಇದರಿಂದ ರೈತರಿಗೆ ಯಾವುದೇ ಲಾಭವಿಲ್ಲ ಬಣ್ಣ ತಯಾರಿಕೆಗೆ ಮಾರಾಟ ಮಾಡಿದರೆ ರೈತರು ಎರಡರಿಂದ ಮೂರು ಪಟ್ಟು ಆದಾಯ ಗಳಿಸಬಹುದು ಎಂದರು.
ಶಿವಮೊಗ್ಗ ಜಿಲ್ಲೆ ಹೆಗ್ಗೋಡಿ ಎಲ್ಲಿರುವ ಪ್ರಸನ್ನ ಅವರ ಚರಕ ಸಂಸ್ಥೆಯವರು ಎರಡು ದಶಕಗಳಿಂದ ತೊಗರಿನಿಂದ ನೈಸರ್ಗಿಕ ಬಣ್ಣ ತಯಾರಿಸಿ ಅದನ್ನು ವಸ್ತ್ರೋದ್ಯಮದಲ್ಲಿ ವ್ಯಾಪಕವಾಗಿ ಬಳಸುತ್ತಿದ್ದಾರೆ ಜಗತ್ತಿನ ಪ್ರಸಿದ್ಧ 50 ವಸ್ತ್ರ ಉತ್ಪಾದನಾ ಸಂಸ್ಥೆಗಳು ಅಡಿಕೆ ಬಣ್ಣಬಳಕೆ ಆರಂಭಿಸಿವೆ. ರೇಷ್ಮೆ ಬಟ್ಟೆಗೂ ಇದನ್ನು ಬಳಸಲಾಗುತ್ತಿದೆ. ತಮಿಳುನಾಡು ಮತ್ತು ಚೆನ್ನಪಟ್ಟಣದ ಗೊಂಬೆ ತಯಾರಕರಾದ ವೆಂಕಟೇಶ್ ಅವರು ಗೊಂಬೆಗಳಿಗೆ ಈ ಬಣ್ಣ ಬಳಸಲು ಮುಂದಾಗಿದ್ದಾರೆ. ಇದು ಆಶಾದಾಯಕ ಬೆಳವಣಿಗೆ ಎಂಬುದು ಅಡಿಕೆ ತಜ್ಞ ಶ್ರೀ ಪಡ್ರೆ ಅವರ ವಿವರಣೆ.
ಅಡಿಕೆಯಿಂದ ಬಣ್ಣ ತಯಾರಾಗುತ್ತದೆ ಎಂಬುದು ಅಡಿಕೆ ಬೆಳೆಯುವ ಶೇಕಡ 80ರಷ್ಟು ರೈತರಿಗೆ ಗೊತ್ತಿಲ್ಲ. ಅಡಿಕೆ ತೊಗರು ನೈಸರ್ಗಿಕ ಬಣ್ಣವಾಗಿ ಬಳಸಬಹುದು ಎಂಬುದು ಬಹುಪಾಲು ವಸ್ತ್ರೋದ್ಯಮಿಗಳಿಗೆ ಅರಿವಿಗೆ ಬಂದಿಲ್ಲ. ಈಗ ವರ್ಷಕ್ಕೆ ಅಂದಾಜು ಒಂದು ಲಕ್ಷ ಲೀಟರ್ ಟಗರು ಉತ್ಪಾದನೆ ಆಗುತ್ತಿದ್ದು ವ್ಯವಸ್ಥಿತವಾಗಿ ಮಾಡಿದರೆ 4 ಲಕ್ಷ ಲೀಟರ್ ವರೆಗೆ ಉತ್ಪಾದಿಸುವ ಅವಕಾಶ ಇದೆ ಚಗರು ಸಂಸ್ಕರಣೆ ಮತ್ತು ಅದರಿಂದ ಉತ್ಕೃಷ್ಟ ಗುಣಮಟ್ಟದ ನೈಸರ್ಗಿಕ ಬಣ್ಣ ತಯಾರಿಕೆಯ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಬೇಕು. ಅದಕ್ಕೆ ರೈತರನ್ನು ಅನಿಗೊಳಿಸಿದರೆ ಅಡಿಕೆಯ ತೊಗರಿನಿಂದಲೂ ರೈತರು ಹೆಚ್ಚಿನ ಆದಾಯ ಗಳಿಸುವ, ಚೊಗರೇ ಮುಖ್ಯ ಉತ್ಪನ್ನ ವಾಗುವ ಅವಕಾಶ ಇದೆ ಎನ್ನುವುದು ಅವರ ವಿಶ್ವಾಸ.
ಮಲೆನಾಡಿನಲ್ಲಿ ತಂಪು ವಾತಾವರಣದ ಪ್ರದೇಶದಲ್ಲಿ ಬೆಳೆಯುವ ಕೆಂಪಡಿಕೆಯಿಂದ ಪೊಗರು ಹೆಚ್ಚು ಉತ್ಪಾದನೆಯಾಗುತ್ತಿದೆ.ದ್ರವರೂಪದಲ್
ಅಚ್ಚು ಹಾಕುವಲ್ಲಿಯೂ ಅಚ್ಚುಮೆಚ್ಚು
ನೂಲನ್ನು ಬಣ್ಣದಲ್ಲಿ ಅದ್ದುವ ವಿಧಾನಕ್ಕೆ ಅಡಿಕೆ ಬಣ್ಣ ಬಳಸುವ ವಿಧಾನ ಜನಪ್ರಿಯವಾಗಿದೆ. ಅಡಿಕೆಯಿಂದ ನೈಸರ್ಗಿಕ ಬಣ್ಣ ತಯಾರಿಸಿ ವಸ್ತ್ರೋದ್ಯಮಕ್ಕೆ ಬಳಸುವ ವಿಧಾನದ ಕುರಿತು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ 1996 ರಲ್ಲಿ ಡಾಕ್ಟರ್ ಗೀತಾ ಮಹಾಲೆ ಅವರು ಸಂಶೋಧನೆ ನಡೆಸಿದರು ಅಚ್ಚು ಹಾಕುವ ವಿಧಾನದಲ್ಲಿಯೂ ಈ ಬಣ್ಣಬಳಕೆಯಾಗುತ್ತಿರುವುದು ಹೊಸ ಬೆಳವಣಿಗೆ.
ಅಡಿಕೆಯ ಚೊಗರಿನ ದ್ರವರೂಪದ ಬಣ್ಣ ಬಳಸಿ ಬಟ್ಟೆಗೆ ಹಚ್ಚು ಹಾಕುವ ಪ್ರಯೋಗವನ್ನ ನಾವು ಆರಂಭಿಸಿದ್ದೇವೆ ಎಂದು ಗದಗ ಜಿಲ್ಲೆಯ ಹುಲಕೋಟಿಯ ರೂರಲ್ ಇಂಜಿನಿಯರಿಂಗ್ ಕಾಲೇಜಿನ ಟೆಕ್ಸ್ಟೈಲ್ ತಂತ್ರಜ್ಞಾನ ವಿಭಾಗ ಮುಖ್ಯಸ್ಥ ಪ್ರೊಫೆಸರ್ ಸೋಮನಗೌಡ ತಿಳಿಸಿದರು.
ಏನಿದು ಚೊಗರು?
ಎರಡು ವಿಧ ಒಂದು ಚಾಲಿ ಅಡಿಕೆ ಅಂದರೆ ಬಿಳಿ ಅಡಿಕೆ ಇದನ್ನು ಮರದಲ್ಲಿ ಅಡಿಕೆ ಹಣ್ಣು ಆದಾಗ ಕೊಯ್ದು ಒಣಗಿಸಿ ಮಾರಾಟ ಮಾಡಲಾಗುತ್ತದೆ.
Annabhagya-ಈ ಪಟ್ಟಿಯಲ್ಲಿರುವವರಿಗೆ ಸಿಗಲಿದೆ ಸೆಪ್ಟೆಂಬರ್ ತಿಂಗಳ ಅನ್ನಭಾಗ್ಯ ಹಣ,ಇಲ್ಲಿದೆ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್
1 ಸದಸ್ಯರಿರುವ ಕುಟುಂಬಕ್ಕೆ 170 ರೂಪಾಯಿ ಈ ಲೇಖನದಲ್ಲಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ,ಫಲಾನುಭವಿಗಳ ಪಟ್ಚಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
https://ahara.kar.nic.in/Home/EServices
ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗಡೆ e-Ration Card ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗಡೆ show village list ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಜಿಲ್ಲೆ,ತಾಲೂಕು,ಗ್ರಾಮ ಪಂಚಾಯತಿ,ಗ್ರಾಮ select ಮಾಡಿ,Go ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ನಿಮ್ಮ ಗ್ರಾಮದಲ್ಲಿರುವ ರೇಷನ್ ಕಾರ್ಡ್ ಹೊಂದಿರುವವರ ರೇಷನ್ ಕಾರ್ಡ್ ನಂಬರ್, ಹೆಸರು,ವಿಳಾಸ,ಕಾರ್ಡ್ ನ ವಿಧ ಹಾಗೂ ಕುಟುಂಬದ ಸದಸ್ಯರ ಸಂಖ್ಯೆ ತೋರಿಸುತ್ತದೆ,ಅದರಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
ಇದನ್ನೂ ಓದಿ
https://ahara.kar.nic.in/Home/EServices
ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗಡೆ ಇರುವ ಇ-ಸ್ಥಿತಿ ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗಡೆ ಇರುವ ಡಿಬಿಟಿ ಸ್ಥಿತಿ ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗೆ ಕೊಟ್ಟಿರುವ ಜಿಲ್ಲೆಗಳ ಪಟ್ಟಿಯಲ್ಲಿ ನಿಮ್ಮ ಜಿಲ್ಲೆಯನ್ನು select ಮಾಡಿ
ನಂತರ ನೇರ ನಗದು ವರ್ಗಾವಣೆ ಸ್ಥಿತಿ ಮೇಲೆ ಕ್ಲಿಕ್ ಮಾಡಿ
ನಂತರ ವರ್ಷ,ತಿಂಗಳು,ರೇಷನ್ ಕಾರ್ಡ್ ನಂಬರ್ ಹಾಕಿ Go ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗನಂತೆ ನಿಮ್ಮ ಹೆಸರು,member ID,ಕುಟುಂಬ ಸದಸ್ಯರ ಸಂಖ್ಯೆ,ನಿಮಗೆ ಸಿಗುವ ಅಕ್ಕಿಯ ಅಳತೆ ಹಾಗೂ ನಿಮ್ಮ ಖಾತೆಗೆ ಜಮಾ ಆದ ಹಣದ ಮೊತ್ತವನ್ನು ತೋರಿಸುತ್ತದೆ
ಇದನ್ನೂ ಓದಿ
Free electricity-ಇಂದಿನಿಂದ ಗೃಹಜ್ಯೊತಿ ಯೋಜನೆಯಡಿ ಉಚಿತ ವಿದ್ಯುತ್ ಗೆ ಅರ್ಜಿ ಸಲ್ಲಿಕೆ ಆರಂಭ, ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-305
ಈ ಲೇಖನದಲ್ಲಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ,ನಿಮ್ಮ ಕರೆಂಟ್ ಬಿಲ್ ನಂಬರ್,ಆಧಾರ್ ನಂಬರ್ ಹಾಕಿ,ಮಾಲಿಕ ಅಥವಾ ಬಾಡಿಗೆದಾರ ಎಂದು select ಮಾಡಿ 200 ಯುನಿಟ್ ಉಚಿತ ವಿದ್ಯುತ್ ಗೆ ಅರ್ಜಿ ಸಲ್ಲಿಸಿ
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಡಿಯೊ ನೋಡಿ
Aadhaar Photo change-ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋ ಚೆನ್ನಾಗಿಲ್ವ? ಬದಲಾಯಿಸಲು ಹೀಗೆ ಮಾಡಿ - https://krushirushi.in/Krushirushi-1000-197
Male nakshatra-2023 ನೇ ಸಾಲಿನ ಮಳೆ ನಕ್ಷತ್ರಗಳು ಹಾಗೂ ಮಳೆ ದಿನಾಂಕ - https://krushirushi.in/Krushirushi-1000-261
Crop insurance-ನನ್ನ ಖಾತೆಗೆ 11,354 ರೂಪಾಯಿ ಬೆಳೆವಿಮೆ ಜಮಾ-ನಿಮ್ಮ ಬೆಳೆವಿಮೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-257
District incharge ministers-ಇವರೇ ನೋಡಿ ನಿಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು - https://krushirushi.in/Krushirushi-1000-268
Karnataka ministers-ಕೊನೆಗೂ ಖಾತೆ ಹಂಚಿಕೆ ಅಂತಿಮ ಪಟ್ಟಿ ಬಿಡುಗಡೆ - https://krushirushi.in/Krushirushi-1000-254
DBT Karnataka-ಸರ್ಕಾರದಿಂದ ನಿಮಗೆ ಇಲ್ಲಿಯವರೆಗೂ ಯಾವ ಯೋಜನೆಯಿಂದ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-259
Yuvanidhi-ಯುವನಿಧಿ ಯೋಜನೆಯಡಿ 3000 ರೂಪಾಯಿ-ಷರತ್ತು ಮತ್ತು ನಿಬಂಧನೆಗಳ ಅಧಿಕೃತ ಆದೇಶ - https://krushirushi.in/Krushirushi-1000-267
Aadhaar-ಆಧಾರ್ ನಂಬರ್ ಹಾಕಿ ರಾಜ್ಯ ಸರ್ಕಾರದಿಂದ ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡಿ - https://krushirushi.in/Krushirushi-1000-266
Aadhaar bank seeding status-ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-260
5 Guarantees approved-5 ಗ್ಯಾರಂಟಿಗಳಿಗೆ ಸಚಿವ ಸಂಪುಟ ಸಭೆಯಿಂದ ಒಪ್ಪಿಗೆ - https://krushirushi.in/Krushirushi-1000-265
Crop loss-20160 ಹೇಕ್ಟೆರ್ ಬೆಳೆಹಾನಿ ಪರಿಹಾರ ಬಿಡುಗಡೆ-ಕಂದಾಯ ಸಚಿವ ಕೃಷ್ಞಬೈರೆಗೌಡ - https://krushirushi.in/Krushirushi-1000-264
Krushi bhagya-ಕೃಷಿ ಭಾಗ್ಯ ಮರು ಜಾರಿ, ಬೆಳೆ ವಿಮೆ ರೈತರ ಕಂತು ಕಡಿತ- ಕೃಷಿ ಸಚಿವ ಚೆಲುವರಾಯಸ್ವಾಮಿ - https://krushirushi.in/Krushirushi-1000-262
Free bus pass-ನಾಳೆಯಿಂದ ರಾಜ್ಯದಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಘೋಷಣೆ - https://krushirushi.in/Krushirushi-1000-256
Pmkisan name correction as per Aadhaar-ಆಧಾರ್ ನಲ್ಲಿರುವಂತೆ ನಿಮ್ಮ ಹೆಸರು ಬದಲಾವಣೆ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-252
Crop insurance-ಬೆಳೆವಿಮೆ ಜಮಾ ಪ್ರಾರಂಭವಾಗಿದ್ದು,ನಿಮ್ಮ ಜಮಾ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-253
ಕೆಂಪಡಿಕೆ ಅಡಿಕೆ ಸುಲಿದು ಬಯಸುತ್ತಾರೆ ಕರ್ನಾಟಕದಲ್ಲಿ ಬೆಳೆಯುವ ಅಡಿಕೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಮಾಣ ಕೆಂಪು ಅಡಿಕೆ ಎದ್ದು ಶಿವಮೊಗ್ಗ ಉತ್ತರ ಕನ್ನಡ ಹಾಗೂ ಬಯಲು ಸೀಮೆಯಲ್ಲಿ ಇದನ್ನು ಹೆಚ್ಚು ಬಳಸಲಾಗುತ್ತಿದೆ ಎಂದು ಕರೆಯಲಾಗುತ್ತಿದೆ.
ತೊಗರನ್ನು ಸಾರ ಪೇಸ್ಟ್ ಪೌಡರ್ ರೂಪದಲ್ಲಿ ತಯಾರಿಸುವ ವಿಧಾನದಲ್ಲೂ ಆಗಲೇ ರೂಢಿಸಿಕೊಂಡಿದ್ದೇವೆ. ಅಡಿಕೆಯ ಬಣ್ಣದಿಂದ 50 ರಿಂದ 60 ಶೇಡ್ ಗಳನ್ನು ತರಬಹುದು ಎನ್ನುತ್ತಾರೆ ಡಾಕ್ಟರ್ ಗೀತಾ ಮಹಾಲೆ.
ಅಡಿಕೆ ತೊಗರಿನಲ್ಲಿ ಗೆದ್ದಲು ನಿಯಂತ್ರಕ ಅಂಶ ಇದೆ ಪ್ಲೈವುಡ್ ತಯಾರಿಕೆಗೆ ಬೇಕಿರುವ ಅಂಟನ್ನು ತಯಾರಿಸಬಹುದು ನೈಸರ್ಗಿಕ ಬಣ್ಣ ಸೇರಿದಂತೆ ಪರ್ಯಾಯ ಬಳಕೆಗೆ ಒತ್ತು ನೀಡಿ ಅಡಿಕೆಯನ್ನು ಅಪರಾಧಿಪ್ರಜ್ಞೆಯಿಂದ ಮುಕ್ತಗೊಳಿಸಬೇಕಿದೆ ಎನ್ನುತ್ತಾರೆ ಅಡಿಕೆ ಕೃಷಿ ತಜ್ಞ ಶ್ರೀ ಪಡ್ರೆ.
2 ಸದಸ್ಯರಿರುವ ಕುಟುಂಬಕ್ಕೆ 340 ರೂಪಾಯಿ
3 ಸದಸ್ಯರಿರುವ ಕುಟುಂಬಕ್ಕೆ 510 ರೂಪಾಯಿ
4 ಸದಸ್ಯರಿರುವ ಕುಟುಂಬಕ್ಕೆ 680 ರೂಪಾಯಿ
Annabhagya-ನನ್ನ ಖಾತೆಗೆ 680 ರೂಪಾಯಿ ಅನ್ನಭಾಗ್ಯ ಯೋಜನೆಯ ಹಣ ಜಮಾ,ನಿಮ್ಮ ಜಮಾ ಚೆಕ್ ಮಾಡುವ ಡೈರೆಕ್ಟ್ ಲಿಂಕ್