ಬೆಳೆದರ್ಶಕ ಆ್ಯಪ್ ಮೂಲಕ ನೀವು ಬೆಳೆದ ಬೆಳೆ ಮತ್ತು ಅಪ್ಲೊಡ್ ಆದ ಫೋಟೊ ಸರಿಯಾಗಿರುವುದನ್ನು ಚೆಕ್ ಮಾಡಿ

ಬೆಳೆದರ್ಶಕ ಆ್ಯಪ್ ಮೂಲಕ ನೀವು ಬೆಳೆದ ಬೆಳೆ ಮತ್ತು ಅಪ್ಲೊಡ್ ಆದ ಫೋಟೊ ಸರಿಯಾಗಿರುವುದನ್ನು ಚೆಕ್ ಮಾಡಿ

ಈ ಅಪ್ಲಿಕೇಶನ್ ಮಾಡಿದ ಉದ್ದೇಶ ಬೆಳೆ ಸಮೀಕ್ಷೆಯನ್ನು ನೋಡಲು.. ಇದರಲ್ಲಿ ನೀವು ಅಪ್‌ಲೋಡ್ ಮಾಡಿದ ಚಿತ್ರಗಳನ್ನು ಮತ್ತು ಸಮೀಕ್ಷೆ ಮಾಡಿದ ಸರ್ವೇಯರ್ ವಿವರಗಳನ್ನು ನೋಡಬಹುದು.

ತಮ್ಮ ಮೊಬೈಲ್ ಮೂಲಕ ಬೆಳೆಗಳ ಸಮೀಕ್ಷೆ ಮಾಡಬಹುದು. ಅಥವಾ ನೆರೆಯ ಖಾಸಗಿ ವ್ಯಕ್ತಿಗಳ ಮೊಬೈಲ್ ಮೂಲಕ ಜಮೀನುಗಳ ಸಮೀಕ್ಷೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ನಿಮ್ಮ ಜಮೀನಿನ ಸರ್ವೆ ನಂಬರ್ ಮತ್ತು ಜಮೀನಿನ ಫೊಟೋ ಅಪ್ಲೋಡ್ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಮೊಬೈಲ್ ನಲ್ಲಿ Bele darshak app ಮೂಲಕ ಕ್ಷಣಾರ್ಧದಲ್ಲಿ  ನೋಡಬಹುದು. ಒಂದು ವೇಳೆ ತಪ್ಪಾಗಿದ್ದಲ್ಲಿ ಆಕ್ಷೇಪಣೆ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬಹುದು. 

ರೈತರು ಕೃಷಿ ಇಲಾಖೆಯು ಅಭಿವೃದ್ಧಿಪಡಿಸಿದ ಬೆಳೆ ಸಮೀಕ್ಷೆ ಆ್ಯಪ್ (farmers crop survey app 2022-23) ಮೂಲಕ ಈಗಾಗಲೇ ಮುಂಗಾರು ಬೆಳೆಗಳ ಸಮೀಕ್ಷೆ ಕಾರ್ಯ ನಡೆದಿದೆ. ರೈತರು ಸ್ವತಃ ಅವರ ಮೊಬೈಲ್ ಮೂಲಕವೇ ಸಮೀಕ್ಷೆ ಮಾಡಿದ್ದಾರೆ. ಇನ್ನೂ ಕೆಲವು ರೈತರು ಖಾಸಗಿ ವ್ಯಕ್ತಿಗಳಿಂದ ಅಪ್ಲೋಡ್ ಮಾಡಿಸಿದ್ದಾರೆ. ಸರ್ವೆ ನಂಬರ್, ಅಗತ್ಯ ಮಾಹಿತಿ ಹಾಗೂ ಫೋಟ್ ಸರಿಯಾಗಿ ಅಪ್ಲೋಡ್ ಆಗಿದೆಯೇ ಎಂಬುದನ್ನು ಬೆಳೆ ದರ್ಶಕ್ ಆ್ಯಪ್ ಮೂಲಕ ನೋಡಬಹುದು.

ಬೆಳೆ ದರ್ಶಕ್ ಆ್ಯಪ್ ಇನ್ಸ್ ಸ್ಟಾಲ್ ಮಾಡಿಕೊಂಡ ನಂತರ ವರ್ಷ, ಋತು, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ಇನ್ನಿತರ ಮಾಹಿತಿ ನಮೂದಿಸಬೇಕು. ಬೆಳೆ ದರ್ಶಕ್ ಆ್ಯಪ್ ಮೂಲಕ ಜಮೀನಿನಲ್ಲಿ ಬೆಳೆ ಸಮೀಕ್ಷೆ ಪ್ರಕಾರ ದಾಖಲಾಗಿರುವ ಬೆಳೆ ವಿವರಗಳು ಮತ್ತು ವಿಸ್ತೀರ್ಣದ ಮಾಹಿತಿ ಪಡೆಯಬಹುದು. ಬೆಳೆ ಸಮೀಕ್ಷೆ ಸಮಯದಲ್ಲಿ ತೆಗೆಯಲಾದ ಜಿಪಿಎಸ್ ಆಧಾರಿತ ಛಾಯಾಚಿತ್ರಗಳನ್ನು ವೀಕ್ಷಿಸಬಹುದು. ಅಲ್ಲದೆ ರೈತರ ಜಮೀನಿನ ಬೆಳೆ ಸಮೀಕ್ಷೆ ಮಾಡಿದವರ ಹೆಸರು ಮತ್ತು ಮೊಬೈಲ್ ಸಂಖ್ಯೆಯ ವಿವರ, ರೈತರು ಬೆಳೆ ಸಮೀಕ್ಷೆ ಪ್ರಕಾರ ದಾಖಲಿಸಿದ ಮಾಹಿತಿಯನ್ನು ನೋಡಬಹುದು.

 ಒಂದು ವೇಳೆ ಮಾಹಿತಿ ತಪ್ಪಾಗಿದ್ದರೆ ಆಕ್ಷೇಪಣೆ ಸಲ್ಲಿಸಬಹುದು.ಆಕ್ಷೇಪಣೆ ಸಲ್ಲಿಸಲು ನವಂಬರ್ 5 ಕೊನೆಯ ದಿನಾಂಕ. ಮೇಲ್ವಿಚಾರಕರು ಸೂಕ್ತ ಬೆಳೆಗಳನ್ನು ದಾಖಲಿಸಿ ರೈತರ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸುತ್ತಾರೆ. ಇನ್ನೇಕೆ ತಡ ಒಮ್ಮೆ ನಿಮ್ಮ ಬೆಳೆ ಸಮೀಕ್ಷೆಯಲ್ಲಿ ಎಲ್ಲಾ ಸರ್ವೆ ನಂಬರ್, ಮಾಹಿತಿ ಹಾಗೂ ಫೋಟೋ ಸರಿಯಾಗಿ ಅಪ್ಲೋಡ್ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಬೇಟಿ ಕೊಡಿ

ರೈತರು ಗೂಗಲ್ ಪ್ಲೇ ಸ್ಟೋರ್ ಮೂಲಕ ಅಥವಾ https://play.google.com/store/apps/details?id=com.crop.offcskharif_2021  ಲಿಂಕ್ ಮೇಲೆ ಕ್ಲಿಕ್ ಮಾಡಿ ಇನ್ಸ್ ಸ್ಟಾಲ್ ಮಾಡಿಕೊಳ್ಳಬಹುದು. 

ಮೊದಲು ಮೊಬೈಲ್ ನಂಬರ್ ಹಾಕಿ, ಮೊಬೈಲ್ ಗೆ ಬರುವ OTP ಹಾಕಿ

 ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿ.

ನಂತರ ಸರ್ವೇ ನಂಬರ್ ಹಾಕಿದರೆ ನೀವು ಬೆಳೆದ ಬೆಳೆ ಹಾಗೂ ಫೋಟೊ ಅಪ್ಲೊಡ್ ಸರಿಯಾಗಿರುವುದನ್ನು ಪರಿಕ್ಷೀಸಿ.

ಸರಿಯಾಗಿರದಿದ್ದರೆ ಆಕ್ಷೇಪಣೆ ಸಲ್ಲಿಸಿ ಸರಿಪಡಿಸಲು ಅವಕಾಶವಿರುತ್ತದೆ.