LPG cylinder subsidy-ವರ್ಷಕ್ಕೆ 9 ಸಿಲಿಂಡರ್ ಮರುಪೂರಣಕ್ಕೆ ಸಿಗಲಿದೆ 300 ರೂಪಾಯಿ ಸಬ್ಸಿಡಿ,ಇಲ್ಲಿಯವರೆಗೂ ನಿಮಗೇಷ್ಟು ಸಬ್ಸಿಡಿ ಜಮಾ ಆಗಿದೆ ಚೆಕ್ ಮಾಡಿ

LPG cylinder subsidy-ವರ್ಷಕ್ಕೆ 9 ಸಿಲಿಂಡರ್ ಮರುಪೂರಣಕ್ಕೆ ಸಿಗಲಿದೆ 300 ರೂಪಾಯಿ ಸಬ್ಸಿಡಿ,ಇಲ್ಲಿಯವರೆಗೂ ನಿಮಗೇಷ್ಟು ಸಬ್ಸಿಡಿ ಜಮಾ ಆಗಿದೆ ಚೆಕ್ ಮಾಡಿ

LPG cylinder subsidy-ವರ್ಷಕ್ಕೆ 9 ಸಿಲಿಂಡರ್ ಮರುಪೂರಣಕ್ಕೆ ಸಿಗಲಿದೆ 300 ರೂಪಾಯಿ ಸಬ್ಸಿಡಿ,ಇಲ್ಲಿಯವರೆಗೂ ನಿಮಗೇಷ್ಟು ಸಬ್ಸಿಡಿ ಜಮಾ ಆಗಿದೆ ಚೆಕ್ ಮಾಡಿ

LPG cylinder subsidy-ವರ್ಷಕ್ಕೆ 9 ಸಿಲಿಂಡರ್ ಮರುಪೂರಣಕ್ಕೆ ಸಿಗಲಿದೆ 300 ರೂಪಾಯಿ ಸಬ್ಸಿಡಿ,ಇಲ್ಲಿಯವರೆಗೂ ನಿಮಗೇಷ್ಟು ಸಬ್ಸಿಡಿ ಜಮಾ ಆಗಿದೆ ಚೆಕ್ ಮಾಡಿ

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಗ್ರಾಹಕರಿಗೆ ಲಭ್ಯವಾಗುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಮುಂದುವಿರಿಸುತ್ತಿದೆ. 12 ಸಾವಿರ ಕೋಟಿ ರೂಪಾಯಿಗಳ ಅಂದಾಜು ವೆಚ್ಚದೊಂದಿಗೆ ವರ್ಷದ ಉದ್ದೇಶಿತ ಸಬ್ಸಿಡಿಗಳನ್ನು ಮುಂದುವರಿಸಲು ಸರ್ಕಾರ ಅನುಮೋದನೆ ನೀಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 2025-26ರ ಹಣಕಾಸು ವರ್ಷದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY)ಯ ಫಲಾನುಭವಿಗಳಿಗೆ 14.2 ಕೆಜಿ ಸಿಲಿಂಡರ್‌ಗೆ ವರ್ಷಕ್ಕೆ 9 ಪುನರ್ ಭರ್ತಿಗೊಳಿಸುವಿಕೆ (ಮತ್ತು 5 ಕೆಜಿ ಸಿಲಿಂಡರ್‌ಗೆ ಅನುಗುಣವಾದ ಅನುಪಾತದಲ್ಲಿ) 300 ರೂ. ಉದ್ದೇಶಿತ ಸಬ್ಸಿಡಿ ನೀಡುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ, ಇದಕ್ಕಾಗಿ ರೂ. 12,000 ಕೋಟಿ ವೆಚ್ಚ ಮಾಡಲಿದೆ. ಯೋಜನೆಯಡಿ 10 ಕೋಟಿ 33 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಪ್ರಯೋಜನ ಪಡೆಯುತ್ತಿದ್ದು, ಸಬ್ಸಡಿಯ ಪ್ರಯೋಜನ ಲಭ್ಯವಾಗಲಿದೆ.

ಏನಿದು ಪ್ರಧಾನಮಂತ್ರಿ ಉಜ್ವಲ ಯೋಜನೆ?

ದೇಶಾದ್ಯಂತ ಬಡ ಕುಟುಂಬಗಳ ವಯಸ್ಕ ಮಹಿಳೆಯರಿಗೆ ಠೇವಣಿ-ಮುಕ್ತ ಎಲ್‌ಪಿಜಿ ಸಂಪರ್ಕ ಒದಗಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಯನ್ನು 2016 ಮೇ ನಲ್ಲಿ ಆರಂಭಿಸಲಾಯಿತು. 2025ರ ಜುಲೈವರೆಗಿನ ಮಾಹಿತಿಯಂತೆ, ದೇಶಾದ್ಯಂತ ಸುಮಾರು 10.33 ಕೋಟಿ ಪಿಎಂಯುವೈ ಅನಿಲ ಸಂಪರ್ಕಗಳಿವೆ.

ಎಲ್ಲಾ PMUY ಫಲಾನುಭವಿಗಳು ಠೇವಣಿ-ಮುಕ್ತ ಎಲ್‌ಪಿಜಿ ಸಂಪರ್ಕ ಪಡೆಯುತ್ತಾರೆ. ಇದರಲ್ಲಿ ಸಿಲಿಂಡರ್‌ನ ಭದ್ರತಾ ಠೇವಣಿ(ಎಸ್‌ಡಿ), ಒತ್ತಡ ನಿಯಂತ್ರಕ, ಸುರಕ್ಷಾ ಮೆದುಗೊಳವೆ. ದೇಶೀಯ ಅನಿಲ ಗ್ರಾಹಕ ಕಾರ್ಡ್ (ಡಿಜಿಸಿಸಿ) ಕಿರುಪುಸ್ತಕ ಮತ್ತು ಅನುಸ್ಥಾಪನಾ ಶುಲ್ಕಗಳು ಸೇರಿವೆ. ಉಜ್ವಲ 2.0ರ ಅಸ್ತಿತ್ವದಲ್ಲಿರುವ ವಿಧಾನಗಳ ಪ್ರಕಾರ, ಮೊದಲ ಮರುಪೂರಣ ಮತ್ತು ಸ್ಟೌವ್ ಅನ್ನು ಎಲ್ಲಾ ಫಲಾನುಭವಿಗಳಿಗೆ ಉಚಿತವಾಗಿ ನೀಡಲಾಗುತ್ತದೆ. ಪಿಎಂಯುವೈ ಫಲಾನುಭವಿಗಳು ಎಲ್‌ಪಿಜಿ ಸಂಪರ್ಕ ಅಥವಾ ಮೊದಲ ಮರುಪೂರಣ ಅಥವಾ ಸ್ಟೌವ್‌ಗೆ ಯಾವುದೇ ಪಾವತಿ ಮಾಡುವ ಅಗತ್ಯವಿಲ್ಲ, ಏಕೆಂದರೆ ಇವುಗಳ ವೆಚ್ಚವನ್ನು ಭಾರತ ಸರ್ಕಾರ/ತೈಲ ಮಾರುಕಟ್ಟೆ ಕಂಪನಿ(ಒಎಂಸಿ)ಗಳು ಭರಿಸುತ್ತವೆ.

ಉಜ್ವಲ ಯೋಜನೆಯ ಗ್ರಾಹಕರಿಗೆ ಉದ್ದೇಶಿತ ಸಬ್ಸಿಡಿ

ಭಾರತವು ತನ್ನ ಎಲ್‌ಪಿಜಿ ಅಗತ್ಯದ ಸುಮಾರು 60% ಪ್ರಮಾಣವನ್ನು ಆಮದು ಮಾಡಿಕೊಳ್ಳುತ್ತದೆ. ಉಜ್ವಲ ಯೋಜನೆಯ ಫಲಾನುಭವಿಗಳನ್ನು ಎಲ್‌ಪಿಜಿಯ ಅಂತಾರಾಷ್ಟ್ರೀಯ ಬೆಲೆಗಳಲ್ಲಿನ ತೀವ್ರ ಏರಿಳಿತಗಳ ಪರಿಣಾಮದಿಂದ ರಕ್ಷಿಸಲು ಮತ್ತು ಪಿಎಂಯುವೈ ಬಳಕೆದಾರರಿಗೆ ಎಲ್‌ಪಿಜಿಯನ್ನು ಹೆಚ್ಚು ಅನುಕೂಲಕರವಾಗಿಸುತ್ತಿದೆ. ಆ ಮೂಲಕ ಅವರಿಂದ ಎಲ್‌ಪಿಜಿಯ ನಿರಂತರ ಬಳಕೆಯನ್ನು ಖಚಿತಪಡಿಸಿಕೊಳ್ಳಲು, ಸರ್ಕಾರವು 2022 ಮೇನಲ್ಲಿ ಪಿಎಂಯುವೈ ಗ್ರಾಹಕರಿಗೆ ವಾರ್ಷಿಕ 12 ಮರುಪೂರಣಗಳಿಗೆ (ಮತ್ತು 5 ಕೆಜಿ ಸಂಪರ್ಕಗಳಿಗೆ ಪ್ರಮಾಣಕ್ಕೆ ಅನುಗುಣವಾದ ಅನುಪಾತದಲ್ಲಿ) 14.2 ಕೆಜಿ ಸಿಲಿಂಡರ್‌ಗೆ 200 ರೂ. ಉದ್ದೇಶಿತ ಸಬ್ಸಿಡಿ ಆರಂಭಿಸಿತು. 2023 ಅಕ್ಟೋಬರ್ ನಲ್ಲಿ ಸರ್ಕಾರವು ವಾರ್ಷಿಕ 12 ಮರುಪೂರಣಗಳಿಗೆ (ಮತ್ತು 5 ಕೆಜಿ ಸಂಪರ್ಕಗಳಿಗೆ ಪ್ರಮಾಣಕ್ಕೆ ಅನುಗುಣವಾದ ಅನುಪಾತದಲ್ಲಿ) 14.2 ಕೆಜಿ ಸಿಲಿಂಡರ್‌ಗೆ 300 ರೂ.ಗೆ ಉದ್ದೇಶಿತ ಸಬ್ಸಿಡಿಯನ್ನು ಹೆಚ್ಚಿಸಿತು.

ಎಲ್‌ಪಿಜಿ ಸಬ್ಸಿಡಿ ವಿತರಣೆ ಹೇಗೆ?

ಉಜ್ವಲ ಸಬ್ಸಿಡಿಯನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಪ್ರಸ್ತುತ, ಈ ಯೋಜನೆಯು ವರ್ಷಕ್ಕೆ 9 ಮರುಪೂರಣಗಳಿಗೆ 14.2 ಕೆಜಿ ಸಿಲಿಂಡರ್‌ಗೆ 300 ರೂ.ಗಳ ಗುರಿ ಸಬ್ಸಿಡಿಯನ್ನು ಒದಗಿಸುತ್ತದೆ.

ಎಲ್‌ಪಿಜಿ ಸಂಪರ್ಕ ಪಡೆಯಲು ಅರ್ಹತಾ ಮಾನದಂಡಗಳು

  • ಅರ್ಜಿದಾರರು (ಮಹಿಳೆಯರು ಮಾತ್ರ) 18 ವರ್ಷ ವಯಸ್ಸಿನವರಾಗಿರಬೇಕು.
  • ಒಂದೇ ಮನೆಯಲ್ಲಿ ಬೇರೆ ಯಾವುದೇ LPG ಸಂಪರ್ಕ ಹೊಂದಿರಬಾರದು.
  • ಈ ಕೆಳಗಿನ ಯಾವುದೇ ವರ್ಗಗಳಿಗೆ ಸೇರಿದ ವಯಸ್ಕ ಮಹಿಳೆ - SC, ST, ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ), ಅತ್ಯಂತ ಹಿಂದುಳಿದ ವರ್ಗಗಳು, ಅಂತ್ಯೋದಯ ಅನ್ನ ಯೋಜನೆ (AAY), ಚಹಾ ಮತ್ತು ಮಾಜಿ-ಟೀ ತೋಟದ ಬುಡಕಟ್ಟು ಜನಾಂಗದವರು, ಅರಣ್ಯವಾಸಿಗಳು, ದ್ವೀಪಗಳು ಮತ್ತು ನದಿ ದ್ವೀಪಗಳಲ್ಲಿ ವಾಸಿಸುವ ಜನರು, SECC ಕುಟುಂಬಗಳು (AHL TIN) ಅಡಿಯಲ್ಲಿ ದಾಖಲಾಗಿರುವವರು ಅಥವಾ 14-ಪಾಯಿಂಟ್ ಘೋಷಣೆಯ ಪ್ರಕಾರ ಯಾವುದೇ ಬಡ ಕುಟುಂಬ.

Gas subsidy-ನಿಮ್ಮ ಗ್ಯಾಸ್ ಸಬ್ಸಿಡಿ ಚೆಕ್ ಮಾಡುವ ಡೈರೆಕ್ಟ್ ಲಿಂಕ್

https://www.mylpg.in/

ನಂತರ ನೀವು ಬಳಸುವ ಗ್ಯಾಸ್ ಕಂಪನಿಯ ಸಿಲಿಂಡರ್ ಮೇಲೆ ಕ್ಲಿಕ್ ಮಾಡಿ

ನಂತರ ನೀವು ಮೊದಲ ಬಾರಿ login ಆಗತ್ತಿದ್ದರೆ, New user ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ರಾಜ್ಯ,ಜಿಲ್ಲೆ,ಗ್ಯಾಸ್ ಏಜನ್ಸಿ select ಮಾಡಿ,ನಿಮ್ಮ consumer number,ಮೊಬೈಲ್ ನಂಬರ್ ಹಾಗೂ Captch type ಮಾಡಿ,proceed ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ನಂಬರ್ ಗೆ ಬರುವ OTP ಹಾಕಿ, submit ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಇ-ಮೇಲ್ ಐಡಿ ಹಾಕಿ,ಹೊಸ Password create ಮಾಡಿ,confirm password type ಮಾಡಿ

ನಂತರ ನಿಮ್ಮ ಇಮೇಲ್ ಐಡಿಗೆ ಬರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ Account activate ಆಗುತ್ತದೆ.click here to login ಮೇಲೆ ಕ್ಲಿಕ್ ಮಾಡಿ

ನಂತರ ಮತ್ತೆ signin ಮೇಲೆ ಕ್ಲಿಕ್ ಮಾಡಿ ಮೊಬೈಲ್ ನಂಬರ್ ಅಥವಾ email Id ಹಾಕಿ, captcha type ಮಾಡಿ,Login ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ಹಾಕಿ, create ಮಾಡಿದ password ಹಾಕಿ login ಮಾಡಿ

ನಂತರ login ಆದ ನಂತರ ಮುಖಪುಟದ ಎಡಭಾಗದಲ್ಲಿರುವ view cylinder booking history/subsidy transfered ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಗ್ಯಾಸ್ ಸಬ್ಸಿಡಿ ಮಾಹಿತಿ ದೊರೆಯುತ್ತದೆ.