Mansoon rains-ಮುಂದಿನ 24 ಗಂಟೆಯೊಳಗೆ ಮುಂಗಾರು ಪ್ರವೇಶ,ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೊಷಣೆ
Mansoon rains-ಮುಂದಿನ 24 ಗಂಟೆಯೊಳಗೆ ಮುಂಗಾರು ಪ್ರವೇಶ,ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೊಷಣೆ

Mansoon rains-ಮುಂದಿನ 24 ಗಂಟೆಯೊಳಗೆ ಮುಂಗಾರು ಪ್ರವೇಶ,ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೊಷಣೆ
ಮಾಮೂಲಿಗಿಂತ ಮೊದಲೇ ಈ ಬಾರಿ ಮುಂಗಾರು ಪ್ರವೇಶ ಆಗಲಿದೆ. ಮುಂದಿನ 24 ಗಂಟೆಯೊಳಗೆ ಕೇರಳಕ್ಕೆ ಮುಂಗಾರು ಪ್ರವೇಶವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ಕಳೆದ 16 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಕೇರಳದಲ್ಲಿ ಅವಧಿಗಿಂತ ಮೊದಲೇ ಮಾನ್ಸೂನ್ ಪ್ರವೇಶಿಸಲಿದೆ.
ಮಾನ್ಸೂನ್ ಆರಂಭಕ್ಕೆ ಎಲ್ಲಾ ಅನುಕೂಲಕರ ಪರಿಸ್ಥಿತಿಗಳು ರಾಜ್ಯದಲ್ಲಿ ಅಭಿವೃದ್ಧಿಗೊಂಡಿದ್ದು, ಕಳೆದ ಎರಡು ದಿನಗಳಿಂದ ಕಡಿಮೆ ಒತ್ತಡದ ಪ್ರದೇಶ ಮತ್ತು ಮುಂದುವರಿಯುತ್ತಿರುವ ಮಾನ್ಸೂನ್ ವ್ಯವಸ್ಥೆಯ ಸಂಯೋಜನೆಯಿಂದಾಗಿ ಕೇರಳದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗಿದೆ.
2001 ಮತ್ತು 2009ರಲ್ಲಿ ಮೇ ಅಂತ್ಯದೊಳಗೆ ಕೇರಳಕ್ಕೆ ಮುಂಗಾರು ಪ್ರವೇಶವಾಗಿತ್ತು. ಆಗ ಮೇ 23ರಂದು ಮುಂಗಾರು ಮಳೆ ಆರಂಭವಾಗಿತ್ತು.
ಸಾಮಾನ್ಯವಾಗಿ ಜೂನ್ 1ರಂದು ಕೇರಳಕ್ಕೆ ಮಾನ್ಸೂನ್ ಆಗಮನವಾಗುತ್ತದೆ. 1918ರಲ್ಲಿ ಅಂದರೆ ಶತಮಾನಕ್ಕೆ ಮೊದಲೊಮ್ಮೆ ಮೇ 11ರಂದೇ ಮುಂಗಾರು ಪ್ರವೇಶವಾಗಿತ್ತು. ಮತ್ತೊಂದೆಡೆ, ತಡವಾಗಿ ಆರಂಭವಾದ ಮಳೆಯ ದಾಖಲೆ 1972 ರಲ್ಲಿತ್ತು, ಆಗ ಜೂನ್ 18 ರ ಹೊತ್ತಿಗೆ ಮಾನ್ಸೂನ್ ಮಳೆ ಪ್ರಾರಂಭವಾಗಿತ್ತು.
ಕಳೆದ 25 ವರ್ಷಗಳಲ್ಲಿ ಅತ್ಯಂತ ತಡವಾಗಿ ಆರಂಭವಾದ ಮುಂಗಾರು ಎಂದರೆ ಅದು 2016ರಲ್ಲಿ. ಆಗ ಜೂನ್ 9ರಂದು ಮುಂಗಾರು ಮಳೆ ಶುರುವಾಗಿತ್ತು.
ದಕ್ಷಿಣ ರಾಜ್ಯಗಳಲ್ಲಿ, ಭಾರತ ಹವಾಮಾನ ಇಲಾಖೆ (ಐಎಂಡಿ) ಶನಿವಾರ (ಮೇ 24) ಕೇರಳ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ಕೊಂಕಣ ಮತ್ತು ಗೋವಾದಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ.
ರಳಕ್ಕೆ ಇಂದು ಮುಂಗಾರು ಪ್ರವೇಶವಾಗಿದೆ. ಇದರ ನಡುವೆ ಕರ್ನಾಟಕ ಮತ್ತು ಕೇರಳ ಸೇರಿದಂತೆ ಹಲವಾರು ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆಯು ಭಾರೀ ಮಳೆಯ ಎಚ್ಚರಿಕೆ ನೀಡಿದೆ.
ರಳಕ್ಕೆ ಇಂದು ಮುಂಗಾರು ಪ್ರವೇಶವಾಗಿದೆ. ಇದರ ನಡುವೆ ಕರ್ನಾಟಕ ಮತ್ತು ಕೇರಳ ಸೇರಿದಂತೆ ಹಲವಾರು ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆಯು ಭಾರೀ ಮಳೆಯ ಎಚ್ಚರಿಕೆ ನೀಡಿದೆ.
ಕಳೆದ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ ರಾಜ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಇಂದು ಮತ್ತು ನಾಳೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಮಳೆ ಹೆಚ್ಚಾಗಿದೆ. ಮಲೆನಾಡು ರಾಜ್ಯಗಳಲ್ಲೂ ಗುಡುಗು, ಮಿಂಚು ಸಹಿತ ಮಳೆಯಾಗಿದೆ.
ಮುಂಬೈನಲ್ಲಿ ಮೇ 25ರಿಂದ 27ರವರೆಗೆ 3 ದಿನಗಳವರೆಗೆ ಭಾರೀ ಮಳೆಯಾಗಲಿದೆ.
ನೈಋತ್ಯ ಮಾನ್ಸೂನ್ ಇಂದು ಅಧಿಕೃತವಾಗಿ ಕೇರಳಕ್ಕೆ ಆಗಮಿಸಿದ್ದು, ತಿರುವನಂತಪುರಂ, ಕೊಲ್ಲಂ, ಕೊಟ್ಟಾಯಂ, ಆಲಪ್ಪುಳ, ತ್ರಿಶೂರ್, ಇಡುಕ್ಕಿ ಮತ್ತು ಮಲಪ್ಪುರಂ ಜಿಲ್ಲೆಗಳಿಗೆ ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ.
ಕರ್ನಾಟಕದ ಕರಾವಳಿಯಲ್ಲಿ ರೆಡ್ ಅಲರ್ಟ್;
ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಕಡಿಮೆ ಒತ್ತಡದ ಪ್ರದೇಶದಿಂದಾಗಿ ಕರ್ನಾಟಕದಾದ್ಯಂತ ಅದರಲ್ಲೂ ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಐಎಂಡಿ (ಹವಾಮಾನ ಇಲಾಖೆ) ನೀಡಿದೆ. ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ ಮೇ 27ರವರೆಗೆ ಬಿರುಗಾಳಿ ಸಹಿತ ಅತ್ಯಂತ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಆದರೆ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಕೊಂಚ ನಿಯಂತ್ರಣಕ್ಕೆ ಬರಲಿದೆ.
ಬೆಳಗಾವಿ ಮತ್ತು ಧಾರವಾಡದಲ್ಲಿ ಕೂಡ ಅಲರ್ಟ್ ಘೋಷಿಸಿದ್ದು, ಬಳ್ಳಾರಿ, ಬೆಂಗಳೂರು (ಗ್ರಾಮೀಣ ಮತ್ತು ನಗರ), ಚಿಕ್ಕಬಳ್ಳಾಪುರ, ಚಾಮರಾಜನಗರ, ತುಮಕೂರು ಮತ್ತು ಇತರ ಒಳನಾಡಿನ ಜಿಲ್ಲೆಗಳಲ್ಲಿ ಮಧ್ಯಮ ಮಳೆಯಾಗುವ ಮುನ್ಸೂಚನೆ ಇದೆ. ಮೇ 25ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ.ಹವಾಮಾನ ಇಲಾಖೆಯ ಮುನ್ಸೂಚನೆಯ ಅವಧಿಯಲ್ಲಿ ಮಳೆಯೊಂದಿಗೆ ಬಿರುಗಾಳಿ ಬೀಸಲಿದ್ದು, ಹಲವಾರು ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಲಾಗಿದೆ.