Mullu sajje-ಮುಳ್ಳುಸಜ್ಜೆ ಕಳೆ ನಿವಾರಣೆಗೆ ಬಂತು ಕಳೆನಾಶಕ ಔಷಧಿ

Mullu sajje-ಮುಳ್ಳುಸಜ್ಜೆ ಕಳೆ ನಿವಾರಣೆಗೆ ಬಂತು ಕಳೆನಾಶಕ ಔಷಧಿ

Mullu sajje-ಮುಳ್ಳುಸಜ್ಜೆ ಕಳೆ ನಿವಾರಣೆಗೆ ಬಂತು ಕಳೆನಾಶಕ ಔಷಧಿ

Mullu sajje-ಮುಳ್ಳುಸಜ್ಜೆ ಕಳೆ ನಿವಾರಣೆಗೆ ಬಂತು ಕಳೆನಾಶಕ ಔಷಧಿ


ಮೆಕ್ಕೆಜೋಳ ಬೆಳೆಗಳಲ್ಲಿ ಬೆಂಬಿಡದೆ ಭೂತದಂತೆ ಕಾಡುತ್ತಿದ್ದ ಮುಳ್ಳುಸಜ್ಜೆ ಕಳೆ ನಿವಾರಣೆಗೆ ಕೊನೆಗೂ ಪರಿಹಾರ ದೊರೆತಿದೆ ಎಂದು ಚನ್ನಗಿರಿ ತಾಲೂಕು ಕತ್ತಲಗೆರೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಸ್ತರಣಾ ಮುಂದಾಳು ಡಾ.ಗಂಗಪ್ಪಗೌಡ ಎಸ್‌.ಬಿರಾದಾರ ತಿಳಿಸಿದರು.
ಶನಿವಾರ ದಾವಣಗೆರೆ ತಾಲೂಕಿನ ಗೋಣಿ ವಾಡ ಗ್ರಾಮದ ರೈತರೊಬ್ಬರ ಮೆಕ್ಕೆಜೋಳದ ಜಮೀನಿಗೆ ಭೇಟಿ ನೀಡಿ ಪ್ರಾತ್ಯಕ್ಷಿಕೆ ನಡೆಸಿ, ಮಾತನಾಡಿದರು.


'ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ವಿಜ್ಞಾನಗಳ ವಿಶ್ವವಿದ್ಯಾಲಯವು ಕೆಲ ವರ್ಷಗಳಿಂದ ನಡೆಸಿದ ಸಂಶೋಧನೆಯ ಹಂತದಲ್ಲಿಯೇ ಫಲ ನೀಡಿದೆ. ಕತ್ತಲಗೆರೆ ಕೃಷಿ ಮತ್ತು ತೋಟಗಾರಿಕಾ ಸಂಶೋ ಧನಾ ಕೇಂದ್ರದ ಕೃಷಿ ವಿಜ್ಞಾನಿಗಳು ಹೊನ್ನಾಳಿ, ಚನ್ನಗಿರಿ, ದಾವಣಗೆರೆ, ಹರಿಹರ ತಾಲೂಕುಗಳ ರೈತರ ಮೆಕ್ಕೆಜೋಳದ ಜಮೀನುಗಳಲ್ಲಿ ನಡೆಸಿದ್ದು ಕಳೆನಾಶಕ ಔಷಧ ಸಿಂಪಡಣೆ ಪ್ರಯೋಗದಿಂದ ಬೆಳೆಯಲ್ಲಿದ್ದ ಮುಳ್ಳುಸಜ್ಜೆ ಕಳೆನಾಶವಾಗಿರುವುದು ಸಾಬೀತಾಗಿದೆ. ಸಂಶೋಧನಾ ಹಂತದಲ್ಲಿ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ' ಎಂದು ತಿಳಿಸಿದರು.

ಕಳೆ ನಿರ್ವಹಣೆ ಔಷಧ(Weedicide): 'ಬಿತ್ತನೆ ಮಾಡಿದ ಮೂರು ದಿನಗಳೊಳಗಾಗಿ 'ಪೆಂಡಿ ಮೆಥಾಲಿನ್ 30 ಇಸಿ' ಒಂದು ಲೀಟರ್ ನೀರಿಗೆ 8ರಿಂದ 10 ಎಂಎಲ್ ಹಾಕಿ ಸಿಂಪಡಣೆ ಮಾಡಬೇಕು. ನಂತರ 12 ರಿಂದ 15 ದಿನಗಳ ಬೆಳೆಗೆ ಹಾಗೂ 30 ದಿನಗಳ ಬೆಳೆಯಲ್ಲಿರುವ (ಸಣ್ಣ) ಮುಳ್ಳುಸಜ್ಜೆ ಕಳೆ ನಿಯಂತ್ರಣಕ್ಕೆ 'ಮೆಸೋಟ್ರೇನ್ ಆಟ್ರಾಜಿನ್' ಔಷಧ ಸಿಂಪಡಿಸಿದರೆ ಕಳೆ ನಿಯಂತ್ರಣಕ್ಕೆ ಬರುತ್ತದೆ. ಈಗಾಗಲೇ ಈ ಪ್ರಯೋಗವನ್ನು ಬಳಸಿದ ರೈತರು ಕಳೆ ನಿಯಂತ್ರಣ ಆಗಿರುವ ಬಗ್ಗೆ ತಿಳಿಸಿದ್ದಾರೆ. ಸಂಶೋಧನೆ ಸಂಪೂರ್ಣ ಮುಗಿದ ನಂತರ ಹೆಚ್ಚಿನ ಮಾಹಿತಿಯನ್ನು ರೈತರಿಗೆ ನೀಡಲಾಗುವುದು' ಎಂದರು.
ಈ ವೇಳೆ ರೈತರಾದ ಸಿಂಗಟಗೆರೆ ರಾಕೇಶ್, ಮಂಜುನಾಥ್, ಹಣಮಂತ ಇದ್ದರು.