ನಮ್ಮ ಹೊಲ ನಮ್ಮ ದಾರಿ' ಯೋಜನೆ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

ನಮ್ಮ ಹೊಲ ನಮ್ಮ ದಾರಿ' ಯೋಜನೆ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

ನಮ್ಮ ಹೊಲ ನಮ್ಮ ದಾರಿ' ಯೋಜನೆ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

2022-23ನೇ ಸಾಲಿನ 'ನಮ್ಮ ಹೊಲ ನಮ್ಮ ದಾರಿ' ಯೋಜನೆಯನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ರಾಜ್ಯ ಸರ್ಕಾರದ ಯೋಜನೆಯಡಿ ಅನುಷ್ಠಾನಗೊಳಿಸುವ ಕುರಿತು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ:ಆಇ/597/ವೆಚ್ಚ-6/2022 ದಿನಾಂಕ:20.08.2022

ಗ್ರಾಮೀಣ ಪ್ರದೇಶಗಳಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ನರೇಗಾ ಯೋಜನೆಯಡಿ ಈ ಹಿಂದೆ ಗ್ರಾಮೀಣ ಸರ್ವಋತು ಸಂಪರ್ಕ ರಸ್ತೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಸದರಿ ಯೋಜನೆಯಡಿ ರಸ್ತೆಗಳನ್ನು ಕೊನೆಯ ಆದ್ಯತೆಯಾಗಿ ಪರಿಗಣಿಸಿ ಶೇ10ರ ಮಿತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿತ್ತು.

ರಾಜ್ಯಾದ್ಯಂತ ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸಲು ವ್ಯಾಪಕವಾಗಿ ಕ್ರಮ ಕೈಗೊಳ್ಳಲು ಸಾಧವಾಗದ ಕಾರಣ, ಹಾಗೂ ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಸಕಾಲದಲ್ಲಿ ಮಾರುಕಟ್ಟೆಗೆ ಸಾಗಿಸಲು ಅನುಕೂಲವಾಗುವಂತೆ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಅತಗತವಾಗಿರವುದನ್ನು ಮನಗಂಡು ಸನ್ಮಾನ ಮುಖ್ಯಮಂತ್ರಿಗಳು 2022-23ನೇ ಆಯವ್ಯಯ ಭಾಷಣದಲ್ಲಿ ಓದಲಾದ 1 ಕಿ ಆಯವ್ಯಯದ ಕಂಡಿಕೆ ಸಂ:211 ರಲ್ಲಿ “2021-22ನೇ ಸಾಲಿಗೆ ಮಹಾತ್ಮ ಗಾಂಧಿ ಗ್ರಾಮೇಣ ಉದ್ಯೋಗ ಖಾತ್ರಿ ಯೋಜನೆಯಡಿ 13 ಕೋಟಿ ಮಾನವ ದಿನಗಳ ಉದ್ಯೋಗವನ್ನು ಸೃಜಿಸುವ ಗುರಿಗೆದುರಾಗಿ 14.05 ಕೋಟೆ ಮಾನವ ದಿನಗಳನ್ನು ಸೃಜಿಸಲಾಗಿದೆ. ಈ ಯೋಜನೆಯಡಿಯಲ್ಲಿ ರೈತರು ತಮ್ಮ ಹೊಲಕ್ಕೆ ಹೋಗುವ ರಸ್ತೆಗಳನ್ನು ಆದ್ಯತೆ ಮೇಲೆ ತೆಗೆದುಕೊಳ್ಳಲಾಗುವುದು” ಎಂದು ಘೋಷಣೆ ಮಾಡಿರುತ್ತಾರೆ.

ಆದ್ದರಿಂದ, 2022-23 ನೇ ಸಾಲಿನ ನರೇಗಾ ಯೋಜನೆಯ ಕಾರ್ಯಾಚರಣೆಯ ಮಾರ್ಗಸೂಚಿಗಳಂತೆ ರೈತರ ಹೊಲ/ಗೆದ್ದೆ/ತೋಟ/ಜಮೀನುಗಳಿಗೆ ರಸ್ತೆ ಸಂಪರ್ಕವನ್ನು ಕಲ್ಪಿಸುವ ಕಾಮಗಾರಿಗಳನ್ನು ತೆಗೆದುಕೊಳ್ಳಲು ತೀರ್ಮಾನಿಸಿ, ಯೋಜನೆಯ ಒಟ್ಟು ಕಾರ್ಮಿಕ ಆಯವ್ಯಯದ ಶೇ 25 ರ ಮಿತಿಯಲ್ಲಿ ಅನುಷ್ಠಾನಗೊಳಿಸಲು ಓದಲಾದ-2 ರಲ್ಲಿ ಆದೇಶಿಸಲಾಗಿದೆ.

ಮೇಲಿನ ಹಿನ್ನೆಲೆಯಲ್ಲಿ, ರಾಜ್ಯದ 189 ಗ್ರಾಮೀಣ ವಿ.ಸ.ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರಕ್ಕೆ 30 ಕಿ.ಮೀ ನಂತೆ ರೈತರ ಹೊಲಗಳಿಗೆ ಹೋಗುವ ದಾರಿಗಳನ್ನು ನಿರ್ಮಾಣ ಮಾಡಲು “ನಮ್ಮ ಹೊಲ ನಮ್ಮ ದಾರಿ” ಎಂಬ ಯೋಜನೆಯನ್ನು ರೂಪಿಸಿ, ಸದರಿ ಯೋಜನೆಗೆ ರಾಜ್ಯ ಸರ್ಕಾರದ ಲೆಕ್ಕ ಶೀ. 3054 ರಡಿ ಮತ್ತು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಒಗ್ಗೂಡಿಸುವಿಕೆಯೊಂದಿಗೆ ಅನುದಾನವನ್ನು ಬಳಸಿಕೊಂಡು ಅನುಷ್ಟಾನಗೊಳಿಸಲು ಸರ್ಕಾರವು ತೀರ್ಮಾನಿಸಿದೆ.

ಮುಂದುವರೆದು, ಓದಲಾದ 3ರಲ್ಲಿ ರಾಜ್ಯದ 189 ಗ್ರಾಮೀಣ ವಿ.ಸ.ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 30 ಕಿ.ಮೀ ನಂತೆ, ಪ್ರತಿ ಕಿ.ಮೀಗೆ 12.50 ಲಕ್ಷದಂತೆ ನಿಗಧಿಪಡಿಸಿ, ಅದರಂತೆ, ಒಟ್ಟಾರೆ 5670.00 ಕಿಮೀ ರಸ್ತೆಯನ್ನು ಅಭಿವೃದ್ಧಿಪಡೆಸಲು ರೂ.708.75 ಕೋಟಿಗಳಲ್ಲಿ, MGNREGA ಯೋಜನೆಯಿಂದ ಪ್ರತಿ ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲು ರೂ.9.00 ಲಕ್ಷದಂತೆ ಒಟ್ಟು ರೂ.510.30 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ ಲೆಕ್ಕ ಶೀ 3054 ರಸ್ತೆ ಪ್ರತಿ ಕಿ.ಮೀ ರಸ್ತೆಯನ್ನು ಅಭಿವೃದಿಪಡಿಸಲು ರೂ.3.50 ಲಕ್ಷದಂತೆ ಒಟ್ಟು 198.45 ಕೋಟಿಗಳನ್ನು ಭರಿಸಲು ಆರ್ಥಿಕ ಇಲಾಖೆಯು ಸಹಮತಿ ನೀಡಿರುತ್ತದೆ.