ಶೇಂಗಾ ತೆಂಗಿನಕಾಯಿ ಬೆಳೆಯುವ ರೈತರೇ PMFME ಯೋಜನೆಯಡಿ 15 ಲಕ್ಷ ಸಬ್ಸಿಡಿಯೊಂದಿಗೆ ಎಣ್ಣೆಗಾಣ ಮಾಡಿ ಯಶಸ್ವಿ
ಶೇಂಗಾ ತೆಂಗಿನಕಾಯಿ ಬೆಳೆಯುವ ರೈತರೇ PMFME ಯೋಜನೆಯಡಿ 15 ಲಕ್ಷ ಸಬ್ಸಿಡಿಯೊಂದಿಗೆ ಎಣ್ಣೆಗಾಣ ಮಾಡಿ ಯಶಸ್ವಿ

PMFME ಯೋಜನೆಯಡಿ ರೊಟ್ಟಿ ಮಶೀನ್,ಹಿಟ್ಟಿನ ಗಿರಣೆ,ಎಣ್ಣಿ ಗಾಣ,ಬೆಲ್ಲದ ಗಾಣ,ಖಾರದ ಪುಡಿ,ಶಾವಿಗೆ,ಬೇಕರಿ,ಕುರಿ,ಕೋಳಿ ಫುಡ್ ತಯಾರಿಕೆಗೆ 15 ಲಕ್ಷ ಸಬ್ಸಿಡಿ-PMFME subsidy scheme
ಕರ್ನಾಟಕದಲ್ಲಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿಗಾಗಿ PMFME ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ ಅರಿವು ಮೂಡಿಸುವ ಸಭೆಯನ್ನು ಇಂದು ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಯಿತು.
ಈ ಯೋಜನೆ ಅಡಿಯಲ್ಲಿ ಸಿರಿಧಾನ್ಯಗಳು, ಬೆಲ್ಲ, ಬೇಕರಿ ಉತ್ಪನ್ನಗಳು ಸೇರಿದಂತೆ ವಿವಿಧ ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಶೇ. 50 ಅಥವಾ ಗರಿಷ್ಠ ₹15 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತಿದೆ. ಇದರಲ್ಲಿ ಕೇಂದ್ರದ ₹6 ಲಕ್ಷ ಮತ್ತು ರಾಜ್ಯದ ₹9 ಲಕ್ಷ ಪಾಲು ಸೇರಿದ್ದು, ವೈಯಕ್ತಿಕ ಉದ್ದಿಮೆದಾರರು, ಗುಂಪುಗಳು ಮತ್ತು ಸ್ವಸಹಾಯ ಸಂಘಗಳಿಗೆ ಇದು ವರದಾನವಾಗಿದೆ. ಸ್ವಸಹಾಯ ಸಂಘಗಳ ಸದಸ್ಯರಿಗೆ ₹40,000 ವರೆಗೆ ಬೀಜ ಬಂಡವಾಳ ಮತ್ತು ಸಂಘಗಳಿಗೆ ₹4 ಲಕ್ಷದ ವರೆಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಕೃಷಿಕರನ್ನು ಉದ್ಯಮಿಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಿರುವ ಕೆಪೆಕ್, ಈ ಯೋಜನೆಯಡಿ ಕರ್ನಾಟಕದಲ್ಲಿ 11,910 ಉದ್ಯಮಗಳನ್ನು ಸ್ಥಾಪಿಸಲು/ಉನ್ನತೀಕರಿಸಲು ₹493 ಕೋಟಿ ಅನುದಾನ ಮೀಸಲಿಟ್ಟಿದೆ. ಇದು ವೈಯಕ್ತಿಕ ಉದ್ಯಮಿಗಳಿಗೆ 35% (60:40) ಸಬ್ಸಿಡಿ ಜೊತೆಗೆ ಕರ್ನಾಟಕ ಸರ್ಕಾರದಿಂದ 15% ಹೆಚ್ಚುವರಿ ಟಾಪ್-ಅಪ್ ಸಬ್ಸಿಡಿ ನೀಡುತ್ತದೆ.
ಈಗಾಗಲೇ 6,585 ಅರ್ಜಿಗಳಿಗೆ ಸಾಲ ಮಂಜೂರಾಗಿದ್ದು, ₹756.48 ಕೋಟಿ ಬಂಡವಾಳ ಹೂಡಿಕೆಯಾಗಿದೆ. 4,489 ಫಲಾನುಭವಿಗಳಿಗೆ ₹162.50 ಕೋಟಿ ಸಹಾಯಧನ ಹಾಗೂ 3,770 ಫಲಾನುಭವಿಗಳಿಗೆ ₹59.48 ಕೋಟಿ ಹೆಚ್ಚುವರಿ ಸಹಾಯಧನ ಬಿಡುಗಡೆ ಮಾಡಲಾಗಿದೆ. ಜೊತೆಗೆ, 5 ಬ್ರ್ಯಾಂಡಿಂಗ್ ಮಾರ್ಕೆಟಿಂಗ್ ಪ್ರಸ್ತಾವನೆಗಳು, 4 ಸಾಮಾನ್ಯ ಮೂಲಭೂತ ಸೌಕರ್ಯ ಘಟಕಗಳು ಮತ್ತು 14 ಇನ್ಕ್ಯುಬೇಷನ್ ಕೇಂದ್ರಗಳನ್ನು ಸ್ಥಾಪಿಸಿ, ರಾಜ್ಯದಲ್ಲಿ ಆಹಾರ ಸಂಸ್ಕರಣಾ ವಲಯದ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ.
#PMFME #FoodProcessing #Agriculture #Empowerment #KEPEC #Farmers #SelfHelpGroups
ಪಿಎಂಎಫ್ಎಮ್ ಇ ಯೋಜನೆಯಡಿ 50% ಸಬ್ಸಿಡಿಯಲ್ಲಿ ಆಹಾರ ಸಂಸ್ಕರಣಾ ಘಟಕಗಳಿಗೆ ಅರ್ಜಿ ಆಹ್ವಾನ-pmfme subsidy scheme
PMFME-ಕಿರು ಆಹಾರ ಉದ್ಯಮ ಸ್ಥಾಪನೆಗೆ 50% ಸಬ್ಸಿಡಿ,ಅರ್ಜಿ ಸಲ್ಲಿಸಲು ಬೇಕಾದ ಎಲ್ಲಾ ಜಿಲ್ಲೆಗಳ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ (DRP contact number) ಸಂಪರ್ಕ ಸಂಖ್ಯೆ ತಿಳಿಯಲು ಈ ಕೆಳಗಿನ pdf download ಮಾಡಿಕೊಳ್ಳಿ