ಮುಸ್ಲಿಮರ ಹೆಸರಿನಲ್ಲಿ 29,000 ನಕಲಿ ಖಾತೆ,ಸತ್ತವರ ಖಾತೆಗೂ ಹಣ ವರ್ಗಾವಣೆ, ಇಲ್ಲಿದೆ ಪಿಎಂ ಕಿಸಾನ್ ಅನರ್ಹ ಪಟ್ಟಿ-Pmkisan ineligible list

ಕರ್ನಾಟಕದಲ್ಲಿ ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯ (ಪಿಎಂ-ಕಿಸಾನ್) ಫಲಾನುಭವಿಗಳ ಸಂಖ್ಯೆ(pmkisan ineligible list) ಐದು ಲಕ್ಷದಿಂದ ಆರು ಲಕ್ಷದಷ್ಟು ಕುಸಿತವಾಗಿದೆ.

ಮುಸ್ಲಿಮರ ಹೆಸರಿನಲ್ಲಿ 29,000 ನಕಲಿ ಖಾತೆ,ಸತ್ತವರ ಖಾತೆಗೂ ಹಣ ವರ್ಗಾವಣೆ, ಇಲ್ಲಿದೆ ಪಿಎಂ ಕಿಸಾನ್ ಅನರ್ಹ ಪಟ್ಟಿ-Pmkisan ineligible list

ಮುಸ್ಲಿಮರ ಹೆಸರಿನಲ್ಲಿ 29,000 ನಕಲಿ ಖಾತೆ,ಸತ್ತವರ ಖಾತೆಗೂ ಹಣ ವರ್ಗಾವಣೆ, ಇಲ್ಲಿದೆ ಪಿಎಂ ಕಿಸಾನ್ ಅನರ್ಹ ಪಟ್ಟಿ-Pmkisan ineligible list

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(Pradan mantri kisan samman nidhi yojane)ಹಣ ಪಡೆಯಲು ನಕಲಿ ಖಾತೆಗಳನ್ನು ರಚಿಸಿರುವ ಬೃಹತ್ ಹಗರಣ ರಾಜಸ್ತಾನದಲ್ಲಿ ಬೆಳಕಿಗೆ ಬಂದಿದೆ.

ರಾಜಸ್ಥಾನದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ದೊಡ್ಡ ಹಗರಣ ಬೆಳಕಿಗೆ ಬಂದಿದ್ದು, ಯೋಜನೆಯ ಹಣ ಪಡೆಯಲು ಮುಸ್ಲಿಮರ ಹೆಸರಿನಲ್ಲಿ 29,000 ನಕಲಿ ಖಾತೆಗಳನ್ನು ತೆರೆದಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

29 ಸಾವಿರ ನಕಲಿ ಖಾತೆಗಳಿಗೆ 7 ಕೋಟಿ ವರ್ಗಾವಣೆ

ವಂಚಕರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅಕ್ರಮವಾಗಿ ಹಣ ಪಡೆಯಲು ಸುಮಾರು 29 ಸಾವಿರ ನಕಲಿ ಬ್ಯಾಂಕ್ ಖಾತೆಗಳನ್ನು ರಚಿಸಿದ್ದಾರೆ. ಈ ಖಾತೆಗಳಿಗೆ ಸುಮಾರು 7 ಕೋಟಿ ರೂ ಹಣ ವರ್ಗಾವಣೆಯಾಗಿದೆ ಎಂದು ಹೇಳಲಾಗಿದೆ. ಅಚ್ಚರಿ ಎಂದರೆ ಈ 29 ಸಾವಿರ ಖಾತೆಗಳು ರಾಜಸ್ತಾನದ ಒಂದೇ ಜಿಲ್ಲೆಯಲ್ಲಿ ರಚಿಸಲಾಗಿದೆ.

ಇನ್ನು ಕರ್ನಾಟಕದಲ್ಲಿ ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯ (ಪಿಎಂ-ಕಿಸಾನ್) ಫಲಾನುಭವಿಗಳ ಸಂಖ್ಯೆ(pmkisan ineligible list) ಐದು ಲಕ್ಷದಿಂದ ಆರು ಲಕ್ಷದಷ್ಟು ಕುಸಿತವಾಗಿದೆ.


ಲೋಕಸಭೆಯಲ್ಲಿ ಮೈಸೂರು ಸಂಸದ ಯದುವೀ‌ರ್ ಒಡೆಯ‌ರ್ ಮಂಗಳವಾರ ಕೇಳಿದ ಪ್ರಶ್ನೆಗೆ ಕೃಷಿ ಖಾತೆ ರಾಜ್ಯ ಸಚಿವ ರಾಮನಾಥ್ ಠಾಕೂರ್ ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ.


13ನೇ ಕಂತಿನವರೆಗೆ (2023ರ ಮಾರ್ಚ್) ರಾಜ್ಯದ ಫಲಾನುಭವಿಗಳ ಸಂಖ್ಯೆ 49 ಲಕ್ಷದಷ್ಟು ಇತ್ತು. 14ನೇ ಕಂತಿನಲ್ಲೂ ಫಲಾನುಭವಿಗಳ ಸಂಖ್ಯೆ 49.34 ಲಕ್ಷ ಆಗಿತ್ತು. 15ನೇ ಕಂತಿನಲ್ಲಿ ಈ ಸಂಖ್ಯೆ 43.78 ಲಕ್ಷಕ್ಕೆ ಕುಸಿಯಿತು. ಆ ಬಳಿಕ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗಿಲ್ಲ.


ಪಿಎಂ- ಕಿಸಾನ್ ಯೋಜನೆಯಡಿ ಕೃಷಿಕರಿಗೆ ವಾರ್ಷಿಕ ₹6 ಸಾವಿರ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ. ಈ ಮೊತ್ತವನ್ನು ₹8 ಸಾವಿರ ಅಥವಾ ₹12 ಸಾವಿರಕ್ಕೆ ಏರಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

Pmkisan instalment ineligible list-ಪಿಎಂ ಕಿಸಾನ್ ಅನರ್ಹ ಪಟ್ಟಿ ಬಿಡುಗಡೆ,ಅನರ್ಹ ಪಟ್ಟಿ ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://pmkisan.gov.in/VillageDashboard_Portal.aspx

ನಂತರ ನಿಮ್ಮ ರಾಜ್ಯ,ಜಿಲ್ಲೆ,ತಾಲೂಕು,ಗ್ರಾಮ select ಮಾಡಿ,Submit ಮೇಲೆ ಕ್ಲಿಕ್ ಮಾಡಿ

ನಂತರ Aadhaar authentication status ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ನಿಮ್ಮ ಗ್ರಾಮದಲ್ಲಿರುವ ಪಿಎಂಕಿಸಾನ್ ಅನರ್ಹ ರೈತರ ಪಟ್ಟಿ ದೊರೆಯಲಿದೆ

ಇದನ್ನೂ ಓದಿ

Kisan samman-ತುಂಡು ಕೃಷಿ ಭೂಮಿ ಹೊಂದಿರುವ ಎಲ್ಲಾ ಅರ್ಹ ರೈತರಿಗೂ ಪಿಎಂ ಕಿಸಾನ್ ಹಣ-ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್,ಹಾಗಾದರೆ ಅರ್ಹತೆಯ ಮಾನದಂಡಗಳೇನು? - https://krushirushi.in/Kisan-samman-1959