Poochanthe Parapancha- ತಮ್ಮ ಕನಸಿನ ತೋಟ ನಿರ್ಮಾಣಕ್ಕೆ 'ಪೂಚಂತೇ ಪರಪಂಚ'ದ ಸಸಿಗಳು ಮೊದಲ ಆದ್ಯತೆಯಾಗಲಿ.

<Poochanthe Parapancha> <Nursery> <Arecanut seedlings> <Banana seedlings> <Lemon seedlings>

Poochanthe Parapancha- ತಮ್ಮ ಕನಸಿನ ತೋಟ ನಿರ್ಮಾಣಕ್ಕೆ 'ಪೂಚಂತೇ ಪರಪಂಚ'ದ ಸಸಿಗಳು ಮೊದಲ ಆದ್ಯತೆಯಾಗಲಿ.

Poochanthe Parapancha- ತಮ್ಮ ಕನಸಿನ ತೋಟ ನಿರ್ಮಾಣಕ್ಕೆ 'ಪೂಚಂತೇ ಪರಪಂಚ'ದ ಸಸಿಗಳು ಮೊದಲ ಆದ್ಯತೆಯಾಗಲಿ.


*ಪೂಚಂತೇ ಪರಪಂಚ *
 *ಹೊಸ ವರುಷ, ತರಲಿ ಹಚ್ಚಸಿರ ಹರುಷ*

*ಆತ್ಮೀಯ ರೈತ ಬಾಂಧವರೇ...*
ಪ್ರತಿ ದಿನ ಹೊಸತನ, ನಿತ್ಯ ಜನನ ನಿತ್ಯ ಮರಣ. ಪ್ರಕೃತಿ ನಿತ್ಯನೂತನ ನವನವೀನ. ಮಾಗಿ ಚಳಿ 2025ರ ಕೊನೆ ಕ್ಷಣಗಳಿಗೂ 2026ರ ಹೊಸ ದಿನಗಳಿಗೂ ಸಾಕ್ಷಿಯಾಗಿ ಮೈಮನ ಆವರಿಸಿಕೊಂಡಿದೆ. ನೆನ್ನೆಯ ಅನುಭವ, ಇಂದಿನ ಕಲಿಕೆ, ನಾಳೆಯ ಭರವಸೆಯೊಂದಿಗೆ ತಮ್ಮ ಭೂಮಿಯಲ್ಲಿ ನಿತ್ಯೋತ್ಸವದ ಹಕ್ಕಿಪಕ್ಕಿ ಕಲರವದ ಕೂಗು ಸದಾ ಗುನುಗುತ್ತಿರುವಂತ ನಿತ್ಯ ಹರಿದ್ವರ್ಣದ ಚಂದದ ತೋಟ ರೂಪಿಸಲು ಹರಿವ ಹೊಳೆ ನೀರಿನ ಹುಮ್ಮಸಿನಂತೆ ಹೊಸ ವರುಷದಲ್ಲಿ ಯೋಚಿಸಿ ಯೋಜಿಸಿ, ಬದುಕು-ಬೇಸಾಯ ಹಸಿರಾಗಿಸಿ ನಗಿಸಿ. 

ನಿಮಗೆಲ್ಲರಿಗೂ ತಿಳಿದಿರುವಂತೆ *ಪೂಚಂತೇ ಪರಪಂಚ'* ದಲ್ಲಿ ನೈಸರ್ಗಿಕ ಕೃಷಿ ವಿಧಾನದಲ್ಲಿ ತಮಗೆ ಬೇಕಾದ ಸಸಿಗಳ ಉತ್ಪಾದನೆ, ನಿರ್ವಹಣೆ, ಆರೈಕೆ ಮಾಡುತ್ತಾ, ಪೂರೈಸುತ್ತಾ ಬಂದಿದ್ದೇವೆ. 2026 ರ ಹೊಸ ವರುಷದಲ್ಲಿ ನಿಮ್ಮ ಕನಸಿನ ತೋಟ ಕಟ್ಟಲು ನಮ್ಮಲ್ಲಿ ಏನೆಲ್ಲಾ ಗಿಡಗಳು ಲಭ್ಯ ನೋಡಿ. ಬಿಡುವು ಮಾಡಿಕೊಂಡು  ಭೇಟಿ ನೀಡಿ. 

*ಪೂಚಂತೇ ಪರಪಂಚ*
ವಿಸ್ಮಯಗಳ ಅಕ್ಷಯ ಪಾತ್ರೆ!
ಬೆಳವಾಡಿ 
ಅರಕಲಗೂಡು ತಾಲ್ಲೂಕು 
ಹಾಸನ 573113
9591066583

೧. *ವರ್ಷಪೂರ್ತಿ ಫಸಲು ಕೊಡುವ, ವರ್ಷ ಪೂರ್ತಿ ಮಾರಾಟವಾಗುವ ಜಗದ್ವಿಖ್ಯಾತ ಬಿಜಾಪುರದ ಕಾಗ್ಜಿ ನಿಂಬೆ ಗಿಡಗಳು* 

೨. ಅತ್ಯುತ್ತಮ ಬಿತ್ತನೆ ಗೋಟುಗಳ ಆಯ್ಕೆ ಮಾಡಿ ಬೆಳೆಸಿರುವ ನಾಟಿ ಅಡಿಕೆ ಸಸಿಗಳು

೩. ಚನ್ನರಾಯಪಟ್ಟಣ ತಾಲ್ಲೂಕಿನ ನೈಸರ್ಗಿಕ ಕೃಷಿಕರ ತೋಟದಲ್ಲಿ ಅತ್ಯುತ್ತಮ ತೆಂಗಿನ ಮರಗಳ ಗುರುತು ಮಾಡಿಕೊಂಡು ಆಯ್ಕೆ ಮಾಡಿ ತಂದಂತಹ ಬಿತ್ತನೆ ತೊಳ್ಳುಗಳಿಂದ ಬೆಳೆಸಿರುವ ತಿಪಟೂರು ಟಾಲ್ ತೆಂಗಿನ ಗಿಡಗಳು

೪.  ನಮ್ಮ ಕರ್ನಾಟಕದ ಪ್ರತಿಷ್ಠಿತ, ಒಕ್ಕೂಟ ಭಾರತ ಸರ್ಕಾರದಿಂದ ಪ್ರಮಾಣೀಕೃತಗೊಂಡಿರುವ ಬೆಂಗಳೂರಿನ *Green Leaf* ಸಂಸ್ಥೆಯ ಅಂಗಾಂಶ ಕೃಷಿ ಏಲಕ್ಕಿ ಬಾಳೆ ಮತ್ತು ವಿಲಿಯಮ್ಸ್ ಪಚ್ಚ ಬಾಳೆ ಸಸಿಗಳು 


೫. ಹಿರಳಿಕಾಯಿ 
೬. ಕೊಡಗು ಕಿತ್ತಳೆ 
೭. ಚಂದ್ರಗಿರಿ (ಅರೇಬಿಕಾ)ಕಾಫಿ 
೮. C*R (ರೊಬೋಸ್ಟಾ) ಕಾಫಿ ಸಸಿಗಳು 

೯. *ಜಾಯಿಕಾಯಿ*
೧೦. *ದಾಲ್ಚಿನ್ನಿ* 
೧೧. ಲವಂಗ
೧೨. ಸರ್ವ ಸಾಂಬಾರು 
೧೩. ಅಂಗಾಂಶ ಕೃಷಿ ಏಲಕ್ಕಿ ಸಸಿಗಳು 

೧೪.  ರಸಬಕ್ಕೆ 
೧೫. ಮಲ್ಲಪಾಳಂ ಹಲಸು 
೧೬. ಗೋಡಂಬಿ ಹಲಸು 
೧೭. ತಾಲಿಪಾರಂ ಹಲಸು 
೧೮. ಗಮ್ ಲೆಸ್ ಹಲಸು 
೧೯. ಆಲ್ ಟೈಂ ಹಲಸು ಗಿಡಗಳು 


೨೦. ಮಲ್ಲಿಕಾ ಮಾವು
೨೧. ರಸಪುರಿ ಮಾವು 
೨೨. ತೋತಾಪುರಿ (ಗಿಣಿ) ಮಾವು 
೨೩. ಜೀರಿಗೆ ಮಿಡಿ ಮಾವು 
೨೪. ಅಲ್ಫಾನ್ಸೋ ಮಾವು
೨೫. ಕೇಸರ್ ಮಾವು ಗಿಡಗಳು 


೨೬. ಜಂಭೂ ನೇರಳೆ (ಕಲ್ಕತ್ತಾ) 
೨೭. ಬಿಳಿ ನೇರಳೆ 
೨೮. ವೆಲ್ವೆಟ್ ಆಪಲ್ 
೨೯. ವಾಟರ್ ಆಪಲ್ ಗ್ರೀನ್ 
೩೦. ವಾಟರ್ ಆಪಲ್ ರೆಡ್ ಸಸಿಗಳು 

೩೧. ಅಗಸೆ ಗಿಡ 
೩೨. NMK GOLD ಸೀತಾಫಲ 
೩೩. ರಾಮಫಲ 
೩೪. ಲಕ್ಷ್ಮಣ ಫಲ ಗಿಡಗಳು 


೩೫. PKM1 ಹುಣಸೇ 
೩೬. ಬೆಟ್ಟದ ನೆಲ್ಲಿಕಾಯಿ 
೩೭. ಕಿರು ನೆಲ್ಲಿಕಾಯಿ 
೩೮. ಎಗ್ ಫ್ರೂಟ್
೩೯. ಬೇಲದ ಹಣ್ಣು 
೪೦. ಬಟರ್ ಫ್ರೂಟ್ ಸಸಿಗಳು 

೪೧. ಗೋಡಂಬಿ
೪೨. ಸಿಹಿ ಹುಣಸೇ 
೪೩. ಬಿಳಿ ಸಪೋಟ
೪೪. ಅಂಜೂರ
೪೫. ಕ್ರಿಕೆಟ್ ಬಾಲ್ ಸಪೋಟ ಗಿಡಗಳು 


೪೬. ಬಾರ್ಬಡೋಸ್ ಚೆರ್ರಿ
೪೭. ಅಲಹಾಬಾದ್ ಸಫೇದಾ ಸೀಬೆ 
೪೮. ಲಕ್ನೋ 49 ಸೀಬೆ 
೪೯. ಥೈವಾನ್ ಪಿಂಕ್ ಸೀಬೆ 
೫೦. ದಾಂಡೇಲಿ ತೇಗದ ಸಸಿಗಳು 

೫೧. ಜೇನು ಕೃಷಿಗೆ ಪೂರಕ ಅಂಟುವಾಳ 
೫೨. ಕಾಡು ಬಾದಾಮಿ 
೫೩.  ಅರಳಿ 
೫೪. ಬೇವು 
೫೫. ಹೊನ್ನೆ 
೫೬. ಬಿದಿರು 
೫೭. ಮುತ್ತುಗ

ಮತ್ತೂ ಇತ್ಯಾದಿ ಗಿಡಗಳು ಲಭ್ಯ.

ವೈವಿಧ್ಯ ಗಿಡಮರಗಳ ಹಚ್ಚಸಿರಿನಿಂದ ಕಂಗೊಳಿಸುವ ತೋಟಗಳು ರೈತರ ಪಾಲಿಗೆ ಸಾಕ್ಷಾತ್ ಸ್ವರ್ಗ, ಆಹಾರ-ಆರೋಗ್ಯಧಾಮ,  ನೆಮ್ಮದಿ ತಾಣ, ಬದುಕು ಬೇಸಾಯಕ್ಕೆ ಬೆನ್ನೆಲುಬಾಗೋ ಎಟಿಎಂ. *ಕೃಷಿಯೂ ಖುಷಿಯ ಚಿಲುಮೆಯಾಗಲು ಲಾಭದಾಯಕ ತೋಟವಂತೂ ಇರಲೇಬೇಕು.* ನಿಮ್ಮ ಕನಸಿನ ತೋಟದ ನಿರ್ಮಾಣಕ್ಕೆ ಬೇಕಾದ ಬಿಸಿಲಿನಲ್ಲಿ ನೈಸರ್ಗಿಕ ಕೃಷಿಯಲ್ಲಿ ಬೆಳೆಸಿರುವ ಗಿಡಗಳಿಗಾಗಿ *'ಪೂಚಂತೇ ಪರಪಂಚ* ನಿಮ್ಮ ಮೊದಲ ಆದ್ಯತೆಯಾಗಿರಲಿ, ಶುಭವಾಗಲಿ.