SACHET-ಹವಾಮಾನ ಮುನ್ಸೂಚನೆಗೆ ಹೊಸ ಆ್ಯಪ್ ಬಿಡುಗಡೆ ಮಾಡಿದ ಪ್ರಧಾನಿ ಮೋದಿ,ನಿಮ್ಮ ಮೊಬೈಲ್ ನಲ್ಲೇ ಹೀಗೆ ತಿಳಿದುಕೊಳ್ಳಿ ಹವಾಮಾನ ಮುನ್ಸೂಚನೆ

ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಮನ್ ಕಿ ಬಾತ್‌ನಲ್ಲಿ (Mann Ki Baat)ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA)ದ CAP ಆಧಾರಿತ ಇಂಟಿಗ್ರೇಟೆಡ್ ಅಲರ್ಟ್ ಸಿಸ್ಟಮ್ ಸ್ಯಾಚೆಟ್ ಆಪ್‌ (SACHET app)ಬಗ್ಗೆ ಉಲ್ಲೇಖಿಸಿದ್ದಾರೆ.

SACHET-ಹವಾಮಾನ ಮುನ್ಸೂಚನೆಗೆ ಹೊಸ ಆ್ಯಪ್ ಬಿಡುಗಡೆ ಮಾಡಿದ ಪ್ರಧಾನಿ ಮೋದಿ,ನಿಮ್ಮ ಮೊಬೈಲ್ ನಲ್ಲೇ ಹೀಗೆ ತಿಳಿದುಕೊಳ್ಳಿ ಹವಾಮಾನ ಮುನ್ಸೂಚನೆ

SACHET-ಹವಾಮಾನ ಮುನ್ಸೂಚನೆಗೆ ಹೊಸ ಆ್ಯಪ್ ಬಿಡುಗಡೆ ಮಾಡಿದ ಪ್ರಧಾನಿ ಮೋದಿ,ನಿಮ್ಮ ಮೊಬೈಲ್ ನಲ್ಲೇ ಹೀಗೆ ತಿಳಿದುಕೊಳ್ಳಿ ಹವಾಮಾನ ಮುನ್ಸೂಚನೆ


ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಮನ್ ಕಿ ಬಾತ್‌ನಲ್ಲಿ (Mann Ki Baat)ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA)ದ CAP ಆಧಾರಿತ ಇಂಟಿಗ್ರೇಟೆಡ್ ಅಲರ್ಟ್ ಸಿಸ್ಟಮ್ ಸ್ಯಾಚೆಟ್ ಆಪ್‌ ಬಗ್ಗೆ ಉಲ್ಲೇಖಿಸಿದ್ದಾರೆ. ಈ ವ್ಯವಸ್ಥೆಯು ಭಾರತದಾದ್ಯಂತ ಲಭ್ಯವಿದ್ದು, ಅದರ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದಂತೆ ಭೂ ಗುಪ್ತಚರವನ್ನು ಬಳಕೆ ಮಾಡಿಕೊಂಡು ಬಹು ತಂತ್ರಜ್ಞಾನದ ಮೂಲಕ ಮುಂಚಿನ ಎಚ್ಚರಿಕೆಯ ನೈಜ-ಸಮಯದ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ.

ಸಚೇತ್‌ನ ವೆಬ್‌ಸೈಟ್ ಪ್ರಕಾರ,"XX-NDMAEW ಹೆಡರ್‌ನಿಂದ ಎಸ್‌ಎಂಎಸ್‌ ಮೂಲಕ ವಿಪತ್ತು ಎಚ್ಚರಿಕೆಗಳನ್ನು ಸ್ವೀಕರಿಸಿಕೊಳ್ಳಬಹುದಾಗಿದ್ದು, ಬಳಕೆದಾರರು ಜಾಗರೂಕರಾಗಿರಬಹುದಾಗಿದೆ. ಆಯಪ್ ಅನ್ನು ಪ್ರತ್ಯೇಕವಾಗಿ "ಹವಾಮಾನ ಮುನ್ಸೂಚನೆ ಮಾಹಿತಿಗಾಗಿ ಮತ್ತು ಬಹು ಸ್ಥಳಗಳ ಚಂದಾದಾರಿಕೆ ಸೌಲಭ್ಯದೊಂದಿಗೆ ವಿಪತ್ತು ಎಚ್ಚರಿಕೆಗಳನ್ನು ಸ್ವೀಕರಿಸಲು ಬಳಸಬಹುದು". ಎಂದು ಮೋದಿ ತಿಳಿಸಿದ್ದಾರೆ.

ಬಳಕೆದಾರರು ತಮ್ಮ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಬ್ರೌಸರ್‌ಗಳಲ್ಲಿ ಬ್ರೌಸರ್ ನೋಟಿಫಿಕೇಶ್‌ ಅನ್ನು ಪಡೆಯುತ್ತಾರೆ. ಬಳಕೆದಾರರು ವಿಪತ್ತು ಸಂಬಂಧಿತ ಮಾಹಿತಿಯ ಅಧಿಸೂಚನೆಯನ್ನು ತತ್‌ ಕ್ಷಣವೇ ಪಡೆಯಬಹುದು ಎಂದು ವೆಬ್‌ಸೈಟ್ ನಲ್ಲಿ ಉಲ್ಲೇಖ ಮಾಡಿದೆ.

ಆರ್‌ಎಸ್‌ಎಸ್ ಫೀಡ್‌ನಲ್ಲಿಯೂ ಎಚ್ಚರಿಕೆಯನ್ನು ಪ್ರಕಟಿಸಲಾಗುತ್ತದೆ. ಅಲ್ಲದೆ ಸುದ್ದಿ ಸಂಸ್ಥೆಗಳು ಇದಕ್ಕೆ ಚಂದಾದಾರರಾಗಿದ್ದರೆ ಮುಂಚಿತವಾಗಿ ಈ ಬಗ್ಗೆ ಮಾಹಿತಿ ಪ್ರಕಟ ಮಾಡಬಹುದಾಗಿದೆ. ಈ ಮೂಲಕ ಮುಂದೆ ಆಗುವ ದೊಡ್ಡ ಮಟ್ಟದ ಅನಾಹುತಗಳನ್ನು ತಪ್ಪಿಸಬಹುದಾಗಿದೆ.

ವೆಬ್‌ಸೈಟ್‌ನಲ್ಲಿ ಪ್ರಕಟವಾದ ಮಾಹಿತಿಯ ಪ್ರಕಾರ, ಆಪ್‌ ಅನ್ನು ಉತ್ತರ ಪ್ರದೇಶದಲ್ಲಿ ಸುಮಾರು 5.4 ಕೋಟಿ ಜನರು, ರಾಷ್ಟ್ರ ರಾಜಧಾನಿಯಲ್ಲಿ 4.6 ಕೋಟಿ ಜನರು, ಮಹಾರಾಷ್ಟ್ರದಲ್ಲಿ 1.1 ಕೋಟಿ ಜನರು ಡೌನ್‌ಲೋಡ್ ಮಾಡಿದ್ದಾರೆ.

ನೀವೂ ಆ್ಯಪ್ ಮೂಲಕ ಮಳೆ ಮುನ್ಸೂಚನೆ ತಿಳಿಯಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://play.google.com/store/apps/details?id=com.cdotindia.capsachet

ನಂತರ ಆ್ಯಪ್ ಡೌನಲ್ಲೋಡ್ ಮಾಡಿಕೊಳ್ಳಿ

ನಂತರ ಮುಂದೆ ಮೇಲೆ ಕ್ಲಿಕ್ ಮಾಡಿ

ನಂತರ ಮತ್ತೆ ಮುಂದೆ ಮೇಲೆ ಕ್ಲಿಕ್ ಮಾಡಿ

ನಂತರ /(Yes) ಮಾರ್ಕ್ ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯನ್ನು ನಮೂದಿಸಿ,ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ

ನಂತರ ಈ ಕೆಳಗಿನಂತೆ ನಿಮಗೆ ಹವಾಮಾನ ಮಾಹಿತಿ ಸಿಗಲಿದೆ