Sala manna-ರೈತರ ಬಾಕಿ 300 ಕೋಟಿ ಬೆಳೆಸಾಲಮನ್ನಾ-ಸಿಎಂ ಸಿದ್ದರಾಮಯ್ಯ,ಹಾಗಾದರೆ ಯಾವ ಬಾಕಿ ರೈತರ ಸಾಲಮನ್ನಾ ಆಗಲಿದೆ,ಸಾಲಮನ್ನಾ ಆಗಲು ಬೇಕಾದ ದಾಖಲೆ ಹಾಗೂ ಅರ್ಹತೆಗಳೇನು?
Sala manna-ರೈತರ ಸಾಲಮನ್ನಾದ 300 ಕೋಟಿ ಬಾಕಿ ತಿರಿಸುತ್ತೇವೆ-ಸಿಎಂ ಸಿದ್ದರಾಮಯ್ಯ,ಹಾಗಾದರೆ ಯಾವ ರೈತರ ಸಾಲಮನ್ನಾ ಆಗಲಿದೆ,ಸಾಲಮನ್ನಾ ಆಗಲು ಬೇಕಾದ ದಾಖಲೆ ಹಾಗೂ ಅರ್ಹತೆಗಳೇನು?

Sala manna-ರೈತರ ಸಾಲಮನ್ನಾದ 300 ಕೋಟಿ ಬಾಕಿ ತಿರಿಸುತ್ತೇವೆ-ಸಿಎಂ ಸಿದ್ದರಾಮಯ್ಯ
ಹೆಚ್ಡಿ ಕುಮಾರಸ್ವಾಮಿ (HD Kumaraswamy) ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ರೈತರ ಸಾಲ ಮನ್ನಾ (Loan Waiver) ಮಾಡಿ ಬಾಕಿ ಉಳಿಸಿದ್ದ 300 ಕೋಟಿ ಹಣವನ್ನು ಕಾಂಗ್ರೆಸ್ ಸರ್ಕಾರ ಮುಂದಿನ ದಿನದಲ್ಲಿ ತೀರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.
ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಹಕಾರ ಸಚಿವ ಕೆಎನ್ ರಾಜಣ್ಣ ಅವರ 75ನೇ ವರ್ಷದ ‘ಅಮೃತ ಮಹೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ಕುಮಾರಸ್ವಾಮಿ ಹೆಸರು ಪಡೆದುಕೊಂಡರು. ಆದರೆ ಬಾಕಿಯನ್ನು ನಮ್ಮ ಸರ್ಕಾರ ತೀರಿಸಬೇಕಾಗಿದೆ. ಹೆಸರು ಅವರಿಗೆ, ಹೊರೆ ಹೊತ್ತುಕೊಂಡಿದ್ದು ನಮ್ಮ ಸರ್ಕಾರ ಎಂದರು.
2018 ರಿಂದ ಇಲ್ಲಿಯವರೆಗೂ ಕರ್ನಾಟಕದಲ್ಲಿ ಯಾರಿಗೆಲ್ಲಾ ಎಷ್ಟು ಸಾಲ ಮನ್ನಾ ಆಗಿದೆ? ಹಾಗಾದರೆ ಯಾವ ಬಾಕಿ ರೈತರ ಸಾಲಮನ್ನಾ ಆಗಲಿದೆ,ಸಾಲಮನ್ನಾ ಆಗಲು ಬೇಕಾದ ದಾಖಲೆ ಹಾಗೂ ಅರ್ಹತೆಗಳೇನು? ಹೀಗೆ ಚೆಕ್ ಮಾಡಿ-Bele sala manna status
2018 ರಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಇದ್ದಾಗ ರಾಜ್ಯದ ರೈತರ ಸಾಲಮನ್ನಾ(Bele sala manna) ಮಾಡಿದ್ದರು.ಆದರೆ ಅದರಲ್ಲಿ ಕೇಲವು ರೈತರ ದಾಖಲೆಗಳ ಕೊರತೆಯಿಂದಾಗಿ ಬಾಕಿ ಉಳಿದ ಪ್ರಕರಣಗಳಲ್ಲಿ ದಾಖಲಾತಿಗಳನ್ನು ಸಲ್ಲಿಸಿದ ನಂತರ ಸಾಲಮನ್ನಾ ಆಗುತ್ತಿದೆ.ಹಾಗಾದರೆ ಈ ಲೇಖನದಲ್ಲಿ ಯಾವೆಲ್ಲಾ ದಾಖಲಾತಿಗಳು ಬೇಕಾಗಬಹುದು ಎಂದು ಚೆಕ್ ಮಾಡಬಹುದು.
ಹಾಗಾದರೆ ಕರ್ನಾಟಕದಲ್ಲಿ ಇಲ್ಲಿಯವರೆಗೂ ಎಷ್ಟು ಬೆಳೆಸಾಲಮನ್ನಾ ಆಗಿದೆ ಹೀಗೆ ಚೆಕ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://mahitikanaja.karnataka.gov.in/department
ನಂತರ "Revenue department/ಕಂದಾಯ ಇಲಾಖೆ" ಮೇಲೆ ಕ್ಲಿಕ್ ಮಾಡಿ
ನಂತರ "ಕಂದಾಯ ಇಲಾಖೆ ಸೇವೆಗಳು"(Revenue department services)ಮೇಲೆ ಕ್ಲಿಕ್ ಮಾಡಿ
ನಂತರ ವಾಣಿಜ್ಯ ಬ್ಯಾಂಕ್ ನ ಸಾಲಮನ್ನಾ ಚೆಕ್ ಮಾಡಲು "Loan waiver report for commercial bank" ಮೇಲೆ ಕ್ಲಿಕ್ ಮಾಡಿ. ಸೊಸೈಟಿಯಲ್ಲಿನ ಸಾಲಮನ್ನಾ ಚೆಕ್ ಮಾಡಲು "Loan waiver report for primary agricultural cooperative societies" ಮೇಲೆ ಕ್ಲಿಕ್ ಮಾಡಿ
ನಂತರ ಮಾದರಿ "ರೈತ"(farmer) ಎಂದು Select ಮಾಡಿ
ನಂತರ ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ ಮತ್ತು ಗ್ರಾಮವನ್ನು Select ಮಾಡಿ "ಸಲ್ಲಿಸು"(Submit)ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ನಿಮ್ಮ ಊರಿನಲ್ಲಿ ಯಾರಿಗೆಲ್ಲಾ ಸಾಲಮನ್ನಾ(Crop loan wavier) ಆಗಿದೆ ಎಂದು ಚೆಕ್ ಮಾಡಬಹುದು.Search button ಅಲ್ಲಿ ನಿಮ್ಮ ಹೆಸರು ಹಾಕಿದರೆ ನಿಮ್ಮ ಹೆಸರು ಸಿಗುತ್ತದೆ.
ಹಸಿರು ಪಟ್ಟಿಯಲ್ಲಿ(Bele sala manna list) ನಿಮ್ಮ ಅರ್ಹತೆ ಹೀಗೆ ಚೆಕ್ ಮಾಡಿ
https://mahitikanaja.karnataka.gov.in/department
ನಂತರ "ಕಂದಾಯ ಇಲಾಖೆ/Revenue department" ಮೇಲೆ ಕ್ಲಿಕ್ ಮಾಡಿ
ನಂತರ "ಕಂದಾಯ ಇಲಾಖೆ ಸೇವೆಗಳು/Revenue department services" ಮೇಲೆ ಕ್ಲಿಕ್ ಮಾಡಿ
ನಂತರ "CLWS ರೈತನ ಅರ್ಹತೆ" ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಜಿಲ್ಲೆ ಮತ್ತು ಬ್ಯಾಂಕ್(bank) select ಮಾಡಿ,ಸಲ್ಲಿಸು/Submit ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ರೈತನ ಹೆಸರು,ಸಾಲ ಮನ್ನಾಗೆ(crop loan wavier) ಬೇಕಾದ ಅರ್ಹತೆ ಹಾಗೂ ಸ್ಥಿತಿಗತಿ ಚೆಕ್ ಮಾಡಬಹುದು
ಈ ಕೆಳಗಿನಂತೆ ಹಸಿರು ಪಟ್ಟಿಯಲ್ಲಿ "Yes" ಎಂದು ಇದ್ದರೆ ನೀವು ಸಾಲಮನ್ನಾಗೆ ಅರ್ಹ ಎಂದು ಅರ್ಥ,"No" ಎಂದು ಇದ್ದರೆ ನೀವು ಸಾಲಮನ್ನಾಗೆ ಅರ್ಹರಲ್ಲ ಎಂದು ಅರ್ಥ