Skymet Rain predection 2024-ಈ ವರ್ಷ ಭಾರತದ ಹಾಗೂ ಕರ್ನಾಟಕದ ಮಳೆ ಮಾಹಿತಿ ಪ್ರಕಟಿಸಿದ ಸ್ಕೈಮೇಟ್ ಖಾಸಗಿ ಹವಾಮಾನ ಸಂಸ್ಥೆ

<Krushirushi> <Skymet Rain prediction> <ಸ್ಕೈಮೇಟ್ ಮಳೆ ಮಾಹಿತಿ> <ಮಳೆ ಮಾಹಿತಿ> <Male Mahiti> <Rain alert> <Havamana munsuchane> <Rain forecast> <weather forecast> <Mungaru male> <IMD> <Indian metrologival department> <Mansoon> <Indian agriculture> <Agriculture department> <Indian agriculture depend on mansoon rain>

Skymet Rain predection 2024-ಈ ವರ್ಷ ಭಾರತದ ಹಾಗೂ ಕರ್ನಾಟಕದ ಮಳೆ ಮಾಹಿತಿ ಪ್ರಕಟಿಸಿದ  ಸ್ಕೈಮೇಟ್ ಖಾಸಗಿ ಹವಾಮಾನ ಸಂಸ್ಥೆ

Skymet Rain predection 2024-ಈ ವರ್ಷ ಭಾರತದ ಹಾಗೂ ಕರ್ನಾಟಕದ ಮಳೆ ಮಾಹಿತಿ ಪ್ರಕಟಿಸಿದ  ಸ್ಕೈಮೇಟ್ ಖಾಸಗಿ ಹವಾಮಾನ ಸಂಸ್ಥೆ


ಯುಗಾದಿ ಹಬ್ಬದ ಆಚರಣೆ ಬೆನ್ನಲ್ಲೇ ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಹಾಲಿ ವರ್ಷದ ಹವಾಮಾನ ವರದಿ ನೀಡಿದ್ದು, ಈ ಬಾರಿ ಭಾರತದಲ್ಲಿ ಸಾಮಾನ್ಯ ಮುಂಗಾರು ಮಳೆಯಾಗಲಿದೆ ಎಂದು ವರದಿ ಮಾಡಿದೆ.

ಈ ವರ್ಷ ಜೂನ್ ಮತ್ತು ಸೆಪ್ಟೆಂಬರ್ ನಡುವೆ ಭಾರತವು 'ಸಾಮಾನ್ಯ' ಮಾನ್ಸೂನ್ (Monsoon) ಅನ್ನು ಅನುಭವಿಸುವ ನಿರೀಕ್ಷೆ ಇದೆ. ಮುಂಗಾರು ಮಳೆ ಶೇಕಡಾ 102ರಷ್ಟು ಆಗುವ ನಿರೀಕ್ಷೆಯಿದೆ. ಜೂನ್‌ನಿಂದ ಸೆಪ್ಟೆಂಬರ್ ವರೆಗೆ, ಮಧ್ಯ ಮತ್ತು ಪಶ್ಚಿಮ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ.

ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಸಾಮಾನ್ಯ ಮಳೆಯಾಗಲಿದೆ. ಈಶಾನ್ಯ ಭಾರತ ಮತ್ತು ಪೂರ್ವ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ (Skymet) ಮಂಗಳವಾರ ತನ್ನ ವರದಿಯಲ್ಲಿ ತಿಳಿಸಿದೆ.

'ಮಾನ್ಸೂನ್ ಮುನ್ಸೂಚನೆ 2024′ ವರದಿಯು ದೇಶದ ದಕ್ಷಿಣ, ಪಶ್ಚಿಮ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಅನುಕೂಲಕರವಾದ ಮಳೆಯಾಗಲಿದೆ ಎಂದು ಸೂಚಿಸಿದೆ. ಮಳೆಯಾಶ್ರಿತ ಪ್ರದೇಶಗಳಾದ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಸಾಕಷ್ಟು ಮಳೆಯಾಗುವ ನಿರೀಕ್ಷೆಯಿದೆ. ಆದರೆ ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಪೂರ್ವ ರಾಜ್ಯಗಳು ಗರಿಷ್ಠ ಮಾನ್ಸೂನ್ ತಿಂಗಳುಗಳಲ್ಲಿ ಮಳೆ ಕೊರತೆ ಅಪಾಯ ಎದುರಿಸಲಿವೆ.

ಮಳೆ ಪ್ರಮಾಣ

ವರದಿಯ ಪ್ರಕಾರ, ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮಾನ್ಸೂನ್ ಸಂಭವನೀಯತೆಯು ಅಧಿಕ ಮಳೆಯಾಗುವ ಸಾಧ್ಯತೆಯನ್ನು 10 ಪ್ರತಿಶತ, ಸಾಮಾನ್ಯ ಮಳೆಯ 45 ಪ್ರತಿಶತ ಸಾಧ್ಯತೆಯನ್ನು ಸೂಚಿಸಿದೆ. ಜೊತೆಗೆ 20 ಪ್ರತಿಶತದಷ್ಟು ಸಾಮಾನ್ಯ-ಹೆಚ್ಚು ಮಳೆ, 15 ಪ್ರತಿಶತ ಕಡಿಮೆ- ಸಾಮಾನ್ಯ ಮಳೆ, ಮತ್ತು ಶೇ.10 ರಷ್ಟು ಬರ ಪರಿಸ್ಥಿತಿಯ ಸಾಧ್ಯತೆ ಇದೆ ಎಂದು ಊಹಿಸಿದೆ.

ಮಾಸಿಕ ಪ್ರಮಾಣದಲ್ಲಿ, ಜೂನ್ 95%, ಜುಲೈ 105%, ಆಗಸ್ಟ್ 98% ಮತ್ತು ಸೆಪ್ಟೆಂಬರ್ 110 ಸರಾಸರಿ ಮಳೆಯನ್ನು ಪಡೆಯುವ ಮುನ್ಸೂಚನೆ ಇದೆ. ಹವಾಮಾನ ಸವಾಲುಗಳ ಹೊರತಾಗಿಯೂ, ವರದಿಯು ಈ ವರ್ಷ ಸಾಮಾನ್ಯ ಮಾನ್ಸೂನ್ ಋತುವನ್ನು ಊಹಿಸಿದೆ.

ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ

ಈಶಾನ್ಯ ಭಾರತವು ಋತುವಿನ ಮೊದಲಾರ್ಧದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯನ್ನು ಅನುಭವಿಸಬಹುದು. ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಗೋವಾದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಮತ್ತು ಕೇಂದ್ರ ಭಾಗಗಳಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ಸ್ಕೈಮೆಟ್ ತಿಳಿಸಿದೆ.

ಈ ಕುರಿತು ಮಾತನಾಡಿರುವ ಸ್ಕೈಮೆಟ್‌ನ MD ಜತಿನ್ ಸಿಂಗ್, 'ಸೂಪರ್ ಎಲ್ ನಿನೋದಿಂದ ಬಲವಾದ ಲಾ ನಿನಾಕ್ಕೆ ಗಮನಾರ್ಹ ಪರಿವರ್ತನೆಯಾಗಲಿದ್ದು, ಐತಿಹಾಸಿಕವಾಗಿ ಹೆಚ್ಚಿನ ಮಾನ್ಸೂನ್ ಅನ್ನು ಉಂಟಾಗಿಸಲಿದೆ. ಆದರೆ ಮಾನ್ಸೂನ್ ಅವಧಿಯು ದುರ್ಬಲವಾಗಿ ಪ್ರಾರಂಭವಾಗಬಹುದು. ಇದು ಎಲ್ ನಿನೊದ ಪಶ್ಚಾತ್‌ ಪರಿಣಾಮ. ಮಾನ್ಸೂನ್‌ ಋತುವಿನ ದ್ವಿತೀಯಾರ್ಧವು ಪ್ರಾಥಮಿಕ ಹಂತಕ್ಕಿಂತ ವಿಪರೀತವಾಗಿ ಇರಬಹುದು ಎಂದು ಹೇಳಿದರು.

ಈ ಬಾರಿಯೂ ಎನ್ ನಿನೋ ಪರಿಣಾಮ

ಕಳೆದ ವರ್ಷ ಮಾನ್ಸೂನ್ ಮೇಲೆ ಗಂಭೀರ ಪರಿಣಾಮ ಬೀರಿದ್ದ ಎಲ್ ನಿನೋ ಈ ಬಾರಿಯೂ ಮಾನ್ಸೂನ್ ಮೇಲೆ ಪರಿಣಾಮ ಬೀರಲಿದೆ ಎಂದು ಸ್ಕೈಮೆಟ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಎಲ್ ನಿನೊದ ದಕ್ಷಿಣ ಕಂಪನ, ಹಿಂದೂ ಮಹಾಸಾಗರದ ಡೈಪೋಲ್‌ನಂತಹ ಇತರ ಅಂಶಗಳು ಮಾನ್ಸೂನ್ ಮೇಲೆ ಪ್ರಭಾವ ಬೀರುತ್ತವೆ.

ದ್ವಿಧ್ರುವಿ ಅಥವಾ ಡೈಪೋಲ್‌ ಧನಾತ್ಮಕವಾಗಿದ್ದು, ಇದು ಲಾ ನಿನಾಗೆ ಪೂರಕವಾಗಿದೆ ಎಂದು ನಿರೀಕ್ಷಿಸಲಾಗಿದೆ. ಇದು ಉತ್ತಮ ಮಾನ್ಸೂನ್ ಭವಿಷ್ಯವನ್ನು ಹೆಚ್ಚಿಸಲಿದೆ. ಎಲ್ ನಿನೊದಿಂದ ಲಾ ನಿನಾಗೆ ತ್ವರಿತ ಪರಿವರ್ತನೆಯು ಋತುವಿನ ಆರಂಭದಲ್ಲಿ ಸ್ವಲ್ಪ ಅಡ್ಡಿಪಡಿಸಲಿದೆ. ಹೀಗಾಗಿ ಋತುವಿನ ಉದ್ದಕ್ಕೂ ಮಳೆಯ ವಿತರಣೆಯು ಅಸಮವಾಗಿರಬಹುದು ಎಂದು ಹೇಳಲಾಗಿದೆ.

Rain alert-ಅಶ್ವಿನಿ, ಭರಣಿ ನಕ್ಷತ್ರಗಳ ಪ್ರಭಾವ! ಯುಗಾದಿಗೂ ಮೊದಲು - ನಂತರ ಕರ್ನಾಟಕದಲ್ಲಿ ಒಟ್ಟು ನಾಲ್ಕು ಬಾರಿ ಮಳೆ!!

ನಮ್ಮ ಪೂರ್ವಿಕರು ಮಳೆ ನಕ್ಷತ್ರವನ್ನು ಆಧರಿಸಿ ಕರಾರುವಾಕ್ ಆಗಿ ಇಂಥದ್ದೇ ದಿನಗಳಲ್ಲಿ ಮಳೆಯಾಗುತ್ತದೆ ಎಂದು ನಿಖರವಾಗಿ ಹೇಳಿಬಿಡುತ್ತಿದ್ದರು. ಅಷ್ಟೇ ಅಲ್ಲ, ಮಳೆ ನಕ್ಷತ್ರಗಳು ಧಾರಾಕಾರವಾಗಿ ಮಳೆಯನ್ನು ಸುರಿಸುತ್ತದೆಯೋ, ಸಾಧಾರಣವಾಗಿ ಮಳೆ ಸುರಿಸುತ್ತವೆಯೋ ಅಥವಾ ಹಗುರವಾಗಿ ಮಳೆಯಾಗುತ್ತದೆಯೋ ಎಂಬುದನ್ನು ಅರಿತು ಅದರನ್ವಯ ಮಳೆಯ ಬಗ್ಗೆ ಹೇಳುತ್ತಿದ್ದರು. ಈ ಬಾರಿ, ಯುಗಾದಿ ಹಬ್ಬದ (ಏ. 9) ನಂತರ, ಮೂರು ಮಳೆ ನಕ್ಷತ್ರಗಳು ಒಂದರ ಹಿಂದೊದರಂತೆ ಬರಲಿವೆ. ಅವುಗಳಿಂದ ಧಾರಾಕಾರವಾಗಿ ಮಳೆಯಾಗದೇ ಇದ್ದರೂ ತಕ್ಕಮಟ್ಟಿಗೆ ಮಳೆಯಾಗುತ್ತದೆ ಎಂದು ಹೇಳಲಾಗಿದೆ. ಅತ್ತ, ಹವಾಮಾನ ಇಲಾಖೆಯೂ ಯುಗಾದಿಗೂ ಮುನ್ನ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಏ.6 ಹಾಗೂ 7ರಂದು ಎರಡು ಬಾರಿ ಮಳೆಯಾಗುತ್ತದೆ ಎಂದು ಹೇಳಿದೆ.

ಈ ವರ್ಷದ ಬೇಸಿಗೆಯ ಆರಂಭದಲ್ಲೇ ಬಿಸಿಲಬೇಗೆಯಿಂದ ತತ್ತರಿಸುವಂತಾಗಿರುವ, ಕುಡಿಯುವ ನೀರಿಗೆ ಪರದಾಡುವಂತಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಹೊತ್ತಿನಲ್ಲಿ ಹವಾಮಾನ ಇಲಾಖೆಯೂ ಯುಗಾದಿಗೂ ಮೊದಲು ರಾಜ್ಯಾದ್ಯಂತ ಉತ್ತಮ ಮಳೆಯಾಗಲಿದೆ ಎಂದು ಹೇಳಿದೆ. ಅತ್ತ, ಪಂಚಾಂಗಗಳಲ್ಲೂ ಯುಗಾದಿಯ ನಂತರ ಮೂರು ಮಳೆ ನಕ್ಷತ್ರಗಳು ಒಂದರ ಹಿಂದೊಂದರಂತೆ ಬರಲಿವೆ ಎಂದು ಹೇಳುತ್ತಿದೆ. ಹೀಗೆ, ನಮ್ಮ ದೇಶದ ಮಳೆಯ ಜ್ಞಾನ ಹಾಗೂ ವಿಜ್ಞಾನ ಎರಡೂ ಹೇಳುವಂತೆ ಉತ್ತಮ ಮಳೆಯಾದರೆ ಸಾಕು. ಹಾಗಾದರೆ, ಈ ಬಾರಿಯ ಮಳೆಯ ನಕ್ಷತ್ರಗಳು ಯಾವುವು, ಯುಗಾದಿಯ ನಂತರ ಯಾವ ನಕ್ಷತ್ರದಿಂದ ಯಾವ ಮಳೆ ಬರುತ್ತದೆ ಎಂಬುದನ್ನು ನೋಡೋಣ ಬನ್ನಿ.ಹವಾಮಾನ ಇಲಾಖೆ ಹೇಳಿದ್ದೇನು ಎಂಬುದನ್ನು ನೋಡೋಣ.

ಭಾರತೀಯ ಹವಾಮಾನ ಇಲಾಖೆ, ಕರ್ನಾಟಕದಲ್ಲಿ ಯುಗಾದಿಯ (ಏ. 9) ಮೊದಲು ಅಂದರೆ, ಏ. 6 ಹಾಗೂ ಏ. 7ರಂದು ಮಳೆ ಬೀಳುತ್ತದೆ ಎಂದು ಹೇಳಿದೆ. ರಾಜ್ಯದ ಎಲ್ಲಾ ಭಾಗಗಳಲ್ಲಿ ಸಮಗ್ರವಾಗಿಯಲ್ಲದಿದ್ದರೂ ಕರಾವಳಿ, ಕರ್ನಾಟಕದ ದಕ್ಷಿಣದ ಅಂಜಿನಲ್ಲಿರುವ ಕೆಲವು ಪ್ರದೇಶಗಳು, ಪೂರ್ವಕ್ಕಿರುವ ಜಿಲ್ಲೆಗಳು, ಮಧ್ಯಭಾಗದಲ್ಲಿ ಹಾಗೂ ಉತ್ತರ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತದೆ ಎಂದು ಹೇಳಿದೆ. ಆದರೆ, ಮಳೆ ನಕ್ಷತ್ರಗಳ ಪ್ರಕಾರ, ಯುಗಾದಿ ಮುಗಿದ ಬೆರಳೆಣಿಕೆಯ ದಿನಗಳಲ್ಲಿ ಏ. 13ರಿಂದ ಮಳೆ ನಕ್ಷತ್ರಗಳು ಶುರುವಾಗಿ ಸಾಧಾರಣ ಮಳೆ ಬೀಳುತ್ತದೆ. ಇದರ ವಿವರಗಳೇನು ಎಂಬುದನ್ನು ಮುಂದೆ ತಿಳಿಯಬಹುದು.

ಯುಗಾದಿ ಹಬ್ಬಕ್ಕಿಂತ ಮುನ್ನವೇ ಆಗಲಿದೆ ಮಳೆ - ಹವಾಮಾನ ಇಲಾಖೆ

ವಾರಾಂತ್ಯಕ್ಕೆ ರಾಜ್ಯಾದ್ಯಂತ ಹಲವು ಕಡೆ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏ.6ರಂದು ದಕ್ಷಿಣ ಕನ್ನಡ, ಉಡುಪಿ, ಬೀದರ್‌, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಏ.7ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ತುಮಕೂರು ಮತ್ತು ವಿಜಯಪುರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿಹಗುರ ಮಳೆಯಾಗುವ ಸಾಧ್ಯತೆ ಇದೆ.

ಏಪ್ರಿಲ್ ತಿಂಗಳಿನಲ್ಲಿ ಯಾವ ನಕ್ಷತ್ರಗಳಿಂದ ಯಾವ ಮಳೆ ಬರುತ್ತದೆ ಎಂಬುದನ್ನು ತಿಳಿಯುವುದಕ್ಕಿಂತ ಮುಂಚೆ, ನಾವು ಮಳೆ ನಕ್ಷತ್ರಗಳು ಎಷ್ಟೆಷ್ಟಿವೆ ಎಂದು ಮೊದಲು ತಿಳಿಯೋಣ. ಅದರಂತೆ, ಮಳೆ ನಕ್ಷತ್ರಗಳು ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ, ಮೃಗಶಿರಾ, ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷ, ಮಘ, ಹುಬ್ಬ, ಉತ್ತರ, ಹಸ್ತ, ಚಿತ್ತ, ಸ್ವಾತಿ, ವಿಶಾಖ ಎಂಬ ಒಟ್ಟು 16 ಮಳೆ ನಕ್ಷತ್ರಗಳಿವೆ. ಇವುಗಳ ಆಧಾರದಲ್ಲಿಯೂ ಕರಾರುವಾಕ್ ಆಗಿ ಇಂಥ ದಿನವೇ ಮಳೆ ಬರುತ್ತದೆ ಎಂದು ರೈತ ಸಮುದಾಯ ನಂಬಿದೆ.

ಅಶ್ವಿನಿ, ಭರಣಿ ನಕ್ಷತ್ರಗಳ ಮಳೆಯು ಏಪ್ರಿಲ್ - ಮೇ ತಿಂಗಳಲ್ಲಿ ಕಾಣಿಸಿಕೊಂಡರೆ, ಕೃತಿಕಾ ಹಾಗೂ ರೋಹಿಣಿ ನಕ್ಷತ್ರಗಳು ಮೇ ತಿಂಗಳಲ್ಲಿ ಮಳೆ ತರುತ್ತವೆ. ಮೃಗಶಿರಾ - ಆರಿದ್ರಾ ನಕ್ಷತ್ರಗಳು ಜೂನ್ ತಿಂಗಳಲ್ಲಿ ಮಳೆ ತಂದರೆ, ಪುನರ್ವಸು - ಪುಷ್ಯ ನಕ್ಷತ್ರ ಜುಲೈ ತಿಂಗಳಲ್ಲಿ, ಆಶ್ಲೇಷ - ಮಘ- ಹುಬ್ಬ ನಕ್ಷತ್ರಗಳು ಆಗಸ್ಟ್ ತಿಂಗಳಲ್ಲಿ, ಉತ್ತರ - ಹಸ್ತ ನಕ್ಷತ್ರಗಳು ಸೆಪ್ಟಂಬರ್ ತಿಂಗಳಲ್ಲಿ, ಚಿತ್ತ ಹಾಗೂ ಸ್ವಾತಿ ನಕ್ಷತ್ರಗಳು ಅಕ್ಟೋಬರ್ ತಿಂಗಳಲ್ಲಿ ಹಾಗೂ ವಿಶಾಖ ನಕ್ಷತ್ರವು ನವೆಂಬರ್ ತಿಂಗಳಲ್ಲಿ ಮಳೆ ತರುತ್ತವೆ.

ಮಳೆಯ ನಕ್ಷತ್ರದ ಜೊತೆಗೆ ಅದು ಯಾವ ವಾಹನದ ಮೇಲೆ ಬರುತ್ತದೆ ಎಂಬುದರ ಆಧಾರದಲ್ಲಿ ಆ ಮಳೆ ಹಗುರವೋ, ಸಾಧಾರಣವೋ ಅಥವಾ ಭೋರ್ಗರೆಯುವ ಮಳೆಯೋ ಎಂಬುದನ್ನು ಹೇಳಲಾಗುತ್ತದೆ. ಏ. 13ರಂದು ಅಶ್ವಿನಿ ಮಳೆ ನಕ್ಷತ್ರ ಆರಂಭವಾಗುತ್ತದೆ. ಇದರ ವಾಹನ ಆನೆಯಾಗಿರುವುದರಿಂದ, ಆನೆ ಹೇಗೆ ನಿಧಾನವಾಗಿ ನಡೆದುಕೊಂಡು ಹೋಗುತ್ತದೆಯೋ ಹಾಗೆ, ಇದು ಸಾಧಾರಣವಾದ ಮಳೆಯನ್ನು ತರುತ್ತದೆ ಎಂದು ಹೇಳಲಾಗಿದೆ.

ಭರಣಿ ನಕ್ಷತ್ರ.... ಇದು ಏಪ್ರಿಲ್ ನ ಕಡೆಯ ವಾರದಲ್ಲಿ (ಏ. 27) ಕಾಣಿಸಿಕೊಳ್ಳುವ ನಕ್ಷತ್ರವಾಗಿದೆ. ಇದರ ವಾಹನ ಕತ್ತೆ. ಅಂದರೆ, ಅತ್ತ ಹಗುರವೂ ಅಲ್ಲ, ಇತ್ತ ಧಾರಕಾರವೂ ಅಲ್ಲ ಎಂಬಂತೆ ಮಧ್ಯಮ ಪ್ರಮಾಣದಲ್ಲಿ ಮಳೆಯಾಗುತ್ತದೆ ಎಂದು ಇದನ್ನು ವಿಶ್ಲೇಷಿಸುತ್ತಾರೆ. ಅಂದರೆ, ಈ ನಕ್ಷತ್ರದ ಪ್ರಭಾವದಿಂದಾಗಿ, ರಾಜ್ಯದ ನಾನಾ ಪ್ರದೇಶಗಳಲ್ಲಿ ಸಾಧಾರವಾದ ಮಳೆಯಾಗುತ್ತದೆ

Male nakshatragalu-2024 ನೇ ಸಾಲಿನ ಮಳೆ ನಕ್ಷತ್ರಗಳು ಹಾಗೂ ಮಳೆ ದಿನಾಂಕ

ಚಂಡಮಾರುತವೋ....ವಾಯುಭಾರ ಕುಸಿತವೋ ಒಟ್ಟಿನಲ್ಲಿ ಮಳೆ ಬಂದರೆ ಸಾಕು ಎನ್ನುವಂತೆ ಆಗಿದೆ ಕರ್ನಾಟಕದ ಸದ್ಯದ ಪರಿಸ್ಥಿತಿ. ಮಾರ್ಚ್ ತಿಂಗಳ 2ನೇ ವಾರದಲ್ಲಿ ಸುಡು ಬಿಸಿಲಿನಿಂದ ಜನರು ಕಂಗೆಟ್ಟು ಹೋಗಿದ್ದಾರೆ. ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಈಗ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ಕರ್ನಾಟಕ ಬರದ ಛಾಯೆಗೆ ಸಿಕ್ಕಿ ತತ್ತರಿಸಿ ಹೋಗಿದೆ. ಇನ್ನೂ ಮಾರ್ಚ್ ಪೂರ್ತಿ, ಏಪ್ರಿಲ್ ಮತ್ತು ಮೇ ತಿಂಗಳು ಕಳೆಯುವುದು ಹೇಗೆ? ಎಂಬುದು ಜನರ ಚಿಂತೆಯಾಗಿದೆ. ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ 2020 ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳನ್ವಯ ಹಾಗೂ ಜಿಲ್ಲಾಧಿಕಾರಿಗಳಿಂದ ಬೆಳೆ ಹಾನಿ ಸಮೀಕ್ಷೆಯ (Ground Truthing) ವರದಿಯನ್ವಯ ರಾಜ್ಯದಲ್ಲಿ ಬರ ಘೋಷಣೆ ಮಾಡಲಾಗಿದೆ.

2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲ್ಲೂಕುಗಳ 223 ತಾಲ್ಲೂಕುಗಳನ್ನು ಬರ ಪಿಡೀತ ತಾಲ್ಲೂಗಳೆಂದು ಸರ್ಕಾರವು ಘೋಷಿಸಿದ್ದು, ಇದು ತಕ್ಷಣದಿಂದ ಜಾರಿಗೆ ಬಂದಿದೆ. ಈಗ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದೆ.

ಸಾಮಾನ್ಯ ಮುಂಗಾರು ನಿರೀಕ್ಷೆ: 2024ನೇ ಸಾಲಿನ ಮುಂಗಾರು ಆರಂಭವಾಗುವ ಮೇ ಅಂತ್ಯ ಅಥವ ಜೂನ್ ಹೊತ್ತಿಗೆ ಎಲ್ ನಿನೋ ದುರ್ಬಲಗೊಳ್ಳಲಿದೆ. ಆದ್ದರಿಂದ ಈ ಬಾರಿ ಸಾಮಾನ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಅಂದಾಜಿಸಿದೆ.

ಪಂಚಾಂಗದಲ್ಲಿನ ಮಳೆ ನಕ್ಷತ್ರಗಳ ಪ್ರಕಾರ 2024ರಲ್ಲಿ ಮಳೆ ಹೇಗಿದೆ? ಎಂಬ ಮಾಹಿತಿ ಇಲ್ಲಿದೆ. ಅಶ್ವಿನಿ ಇಂದ ಹಿಡಿದು ವಿಶಾಖ ತನಕ ಮಳೆ ನಕ್ಷತ್ರಗಳಿವೆ. ಇವುಗಳಲ್ಲಿ ಮಾರ್ಚ್, ಏಪ್ರಿಲ್ ತಿಂಗಳ ಮಳೆ ನಕ್ಷತ್ರಗಳು ರಾಜ್ಯದಲ್ಲಿ ಮಳೆ ಸುರಿಸುವುದಿಲ್ಲ. ಮೇ, ಜೂನ್, ಜುಲೈ ಮತ್ತು ಆಗಸ್ಟ್, ಸೆಪ್ಟೆಂಬರ್‌ ತಿಂಗಳಿನಲ್ಲಿ ಮಳೆ ನಕ್ಷತ್ರಗಳ ಅನ್ವಯ ಮಳೆಯನ್ನು ಲೆಕ್ಕ ಹಾಕಲಾಗುತ್ತದೆ. ಈ ಮಳೆ ನಕ್ಷತ್ರಗಳ ಆಧಾರದ ಮೇಲೆಯೇ ಹಲವಾರು ಗಾದೆ ಮಾತುಗಳು ಸಹ ಹುಟ್ಟಿಕೊಂಡಿವೆ.

ಅಶ್ವಿನಿ ನಕ್ಷತ್ರ 13/4/2024 ರಿಂದ ಆನೆಯನ್ನು ವಾಹನವಾಗಿ ಮಾಡಿಕೊಂಡು ಬರಲಿದ್ದು, ಸಾಧಾರಣೆ ಮಳೆ ಎಂದು ಪಂಚಾಂಗ ಹೇಳುತ್ತದೆ. ಭರಣಿ ನಕ್ಷತ್ರ 27/4/2024 ಕತ್ತೆ ವಾಹನವಾಗಿದ್ದು, ಸಾಧಾರಣೆ ಮಳೆ ನಿರೀಕ್ಷಿಸಲಾಗಿದೆ. 11/5/2024 ರಿಂದ ಕೃತಿಕ ನಕ್ಷತ್ರ ಕಪ್ಪೆಯನ್ನು ವಾಹನ ಮಾಡಿಕೊಂಡು ಬರಲಿದ್ದು, ಉತ್ತಮ ಮಳೆ ನಿರೀಕ್ಷೆ ಇದೆ. ಅಂದರೆ ಮೇ ತಿಂಗಳಿನಲ್ಲಿ ಮಳೆಯ ಮುನ್ಸೂಚನೆ ಇದೆ.

24/5/2024 ರಿಂದ ರೋಹಿಣಿ ಮಳೆ ನವಿಲು ವಾಹನವಾಗಿ ಬರಲಿದ್ದು, ಸಾಧಾರಣ ಮಳೆ ನಿರೀಕ್ಷೆ ಇದೆ. 7/6/2024 ರಿಂದ ಮೃಗಶಿರ ಮಳೆ ಕುದುರೆ ಮೇಲೆ ಬರಲಿದ್ದು, ಸಾಧಾರಣ ಮಳೆಯಾಗಲಿದೆ. ಸರ್ಕಾರದ ಲೆಕ್ಕದ ಪ್ರಕಾರ ಜೂನ್ 1ರಿಂದ ಸೆಪ್ಟೆಂಬರ್ 30 ನೈಋತ್ಯ ಮುಂಗಾರು ಮಳೆಯ ಅವಧಿಯಾಗಿದೆ.

21/6/2024 ರಿಂದ ಆರಿದ್ರ ಮಳೆ ಟಗರು ವಾಹನವಾಗಿ ಬರಲಿದ್ದು, ಸಾಧಾರಣ ಮಳೆ ಇದೆ. ಪುನರ್ವಸು ಮಳೆ 5/7/2024 ರಿಂದ ಆನೆ ವಾಹನವಾಗಿ ಬರಲಿದ್ದು, ಸಾಧಾರಣ ಮಳೆ ನಿರೀಕ್ಷೆ ಇದೆ. 19/7/2024 ರಿಂದ ಪುಷ್ಯ ಮಳೆ ಕಪ್ಪೆ ವಾಹನವಾಗಿ ಬರಲಿದ್ದು, ಉತ್ತಮ ಮಳೆ ನಿರೀಕ್ಷೆ ಮಾಡಲಾಗಿದೆ.

ಆಶ್ಲೇಷ ಮಳೆ 2/8/2024 ರಿಂದ ಬರಲಿದ್ದು, ಟಗರು ವಾಹನವಾಗಿದೆ. ಸಾಧಾರಣ ಮಳೆ ನಿರೀಕ್ಷೆ. 16/8/2024 ರಿಂದ ಮಘ ಮಳೆ ಕುದುರೆ ವಾಹನವಾಗಿ ಬರಲಿದ್ದು, ಉತ್ತಮ ಮಳೆಯಾಗಲಿದೆ ಎಂದು ಪಂಚಾಂಗ ಅಂದಾಜಿಸಿದೆ. ಹುಬ್ಬ ಮಳೆ 30/8/2024ರಿಂದ ಇಲಿ ವಾಹನವಾಗಿ ಬರಲಿದ್ದು, ಸಾಧಾರಣ ಮಳೆ ನಿರೀಕ್ಷೆ ಇದೆ.

13/9/2024 ರಿಂದ ಉತ್ತರ ಮಳೆ ಆನೆ ವಾಹನವಾಗಿ ಬರಲಿದ್ದು, ಸಾಧಾರಣ ಮಳೆ ನಿರೀಕ್ಷೆ ಇದೆ. ಹಸ್ತ ಮಳೆ 26/9/2024 ರಿಂದ ಟಗರು ವಾಹನವಾಗಿ ಬರಲಿದ್ದು, ಉತ್ತಮ ಮಳೆಯ ನಿರೀಕ್ಷೆ ಇದೆ. ಚಿತ್ತ 10/10/2024 ರಿಂದ ಎಮ್ಮೆ ವಾಹನವಾಗಿ ಬರಲಿದ್ದು, ಉತ್ತಮ ಮಳೆಯಾಗಲಿದೆ. ಸ್ವಾತಿ ಮಳೆ 23/10/2023 ರಿಂದ ಬರಲಿದ್ದು, ಟಗರು ವಾಹನವಾಗಿದೆ. ಸಾಧಾರಣ ಮಳೆ. ವಿಶಾಖ 6/11/2024 ರಿಂದ ಸುರಿಯಲಿದ್ದು, ಟಗರು ವಾಹವಾಗಿದೆ. ಸಾಧಾರಣ ಮಳೆ ನಿರೀಕ್ಷೆ ಮಾಡಲಾಗಿದೆ.

ಭಾರತದಲ್ಲಿ ಜೂನ್ 1ರಿಂದ ಸೆಪ್ಟೆಂಬರ್ 30ರ ತನಕ ಸುರಿಯುವ ನೈಋತ್ಯ ಮುಂಗಾರು ಮಳೆಗೆ ಭಾರೀ ಮಹತ್ವವಿದೆ. ಮುಂದಿನ ವರ್ಷದ ಬರ, ಬೆಳೆ ಎಲ್ಲವನ್ನೂ ಈ ಮಳೆಯ ನಿರ್ಧಾರ ಮಾಡಲಿದೆ. ಈ ಅವಧಿಯಲ್ಲಿ ಉತ್ತಮ ಮಳೆಯಾದರೆ ಕೃಷಿ ಚಟುವಟಿಕೆಗಳಿಗೆ ಸಹ ಸಹಾಯಕವಾಗುತ್ತದೆ. ಡ್ಯಾಂಗಳು ಭರ್ತಿಯಾಗಿ ಮುಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗುವುದಿಲ್ಲ.

ನೈಋತ್ಯ ಮುಂಗಾರು ಹೊರತುಪಡಿಸಿ ವಾತಾವರಣದಲ್ಲಿ ಆಗುವ ಬದಲಾವಣೆಗಳಿಂದ ಚಂಡಮಾರುತ, ವಾಯುಭಾರ ಕುಸಿತ ಉಂಟಾಗಿ ಮಳೆಯಾಗುವ ಸಾಧ್ಯತೆಯೂ ಇದೆ. 2024ರಲ್ಲಿ ಉತ್ತಮ ಮಳೆಯಾಗಲಿ ಎಂದು ಎಲ್ಲರೂ ಪ್ರಾರ್ಥಿಸೋಣ.