Society loan-ಸೊಸೈಟಿಯಲ್ಲಿ ರೈತರಿಗೆ ಸಾಲಗಳ ಪಟ್ಟಿ ಬಿಡುಗಡೆ
Society loan-ಸೊಸೈಟಿಯಲ್ಲಿ ರೈತರಿಗೆ ಸಾಲಗಳ ಪಟ್ಟಿ ಬಿಡುಗಡೆ

Society loan-ಸೊಸೈಟಿಯಲ್ಲಿ ರೈತರಿಗೆ ಸಾಲಗಳ ಪಟ್ಟಿ ಬಿಡುಗಡೆ
ರಾಜ್ಯದ ರೈತರ ಅನುಕೂಲಕ್ಕಾಗಿ ಸರ್ಕಾರದಿಂದ ವಿವಿಧ ಯೋಜನೆಗಳಿದ್ದಾವೆ. ಅದರೊಟ್ಟಿಗೆ ರಾಜ್ಯದಲ್ಲಿ ಸಹಕಾರಿ ಸಂಸ್ಥೆಗಳಿಂದ ರೈತರಿಗೆ ವಿವಿಧ ಸಾಲಸೌಲಭ್ಯಗಳು ಕೂಡ ದೊರೆಯುತ್ತಿವೆ.
ಈ ಬಗ್ಗೆ ಕಳೆದ ಮುಂಗಾರು ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಬುಡ್ನ ಸಿದ್ದಿ ಕೇಳಿದಂತ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಉತ್ತರ ನೀಡಿದ್ದಾರೆ.
ಹಾಗಾದ್ರೇ ಸಹಕಾರಿ ಸಂಸ್ಥೆಗಳಿಂದ ರೈತರಿಗೆ ದೊರೆಯುವ ವಿವಿಧ ಸಾಲಗಳು ಯಾವುವು ಎನ್ನುವ ಮಾಹಿತಿ ಈ ಕೆಳಗಿದೆ.
ರೈತರಿಗೆ ಸಿಗಲಿವೆ ಸಹಕಾರಿ ಸಂಸ್ಥೆಗಳಿಂದ ಈ ಸಾಲ ಸೌಲಭ್ಯಗಳು
ರೂ.5 ಲಕ್ಷಗಳವರೆಗಿನ ಅಲ್ಪಾವಧಿ ಬೆಳೆ ಸಾಲವನ್ನು ಮತ್ತು ರೂ.2 ಲಕ್ಷದವರೆಗೆ ಪಶುಸಂಗೋಪನೆ, ಮೀನುಗಾರಿಕೆ ಉದ್ದೇಶಗಳಿಗೆ ದುಡಿಯುವ ಬಂಡವಾಳದ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ವಿತರಿಸುವ ಯೋಜನೆಯ ಜಾರಿಯಲ್ಲಿದೆ.
ರೂ.15 ಲಕ್ಷದವರೆಗೆ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲವನ್ನು ಶೇ.3ರ ಬಡ್ಡಿದರದಲ್ಲಿ ವಿತರಣೆ.
ಸಹಕಾರಿ ಸಂಘಗಳು ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಗೋದಾಮುಗಳಲ್ಲಿ ಶೇಖರಣೆ ಮಾಡಿ, ವಿತರಿಸುವ ಅಡಮಾನ ಸಾಲವನ್ನು ಶೇ.7ರ ಬಡ್ಡಿದರದಲ್ಲಿ ನೀಡಲಾಗುತ್ತದೆ.
ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳ ರೈತರ ಕೃಷಿ ಉತ್ಪನ್ನ ಮತ್ತು ಪರಿಕರಗಳ ಸಾಗಾಣಿಕೆಗೆ ನಾಲ್ಕು ಚಕ್ರದ ಪಿಕಪ್ ವ್ಯಾನ್ ಖರೀದಿಸಲು ಸಹಕಾರ ಸಂಘಗಳು 7 ಲಕ್ಷದವರೆಗೆ ಸಾಲವನ್ನು ಶೇ.4ರ ಬಡ್ಡಿದರಲ್ಲಿ ವಿತರಣೆ ಮಾಡಲಾಗುತ್ತದೆ.
ರೈತರು ತಮ್ಮ ಹಾಗೂ ತಮ್ಮ ನೆರೆಹೊರೆಯ ರೈತರ ಉತ್ಪನ್ನಗಳನ್ನು ಸಂಗ್ರಹಿಸಲು ಅನುವಾಗುವಂತೆ ಗೋದಾಮು ನಿರ್ಮಿಸಲು ಬ್ಯಾಂಕುಗಳು ನೀಡುವ 20 ಲಕ್ಷದವರೆಗಿನ ಸಾಲಕ್ಕೆ ಸರ್ಕಾರ ಶೇ.7ರಷ್ಟು ಬಡ್ಡಿ ಸಹಾಯಧನ ನೀಡಲಿದೆ.
ಸಹಕಾರಿ ಸಂಘಗಳು ತಮ್ಮ ಬಂಡವಾಳ ಮತ್ತು ಮೇಲಿನ ಹಂತದ ಸಂಸ್ಥೆಗಳು ನೀಡುವ ಪುನರ್ಧನವನ್ನು ಉಪಯೋಗಿಸಿಕೊಂಡು ಸರ್ಕಾರ ನಿಗದಿಪಡಿಸಿದ ಬಡ್ಡಿದರದಲ್ಲಿ ರೈತರಿಗೆ ಸಾಲ ವಿತರಿಸಿ ಸಕಾಲದಲ್ಲಿ ವಸೂಲಾದಲ್ಲಿ ಸರ್ಕಾರದಿಂದ ನಿಯಮಿತ ಪ್ರಮಾಣದ ಬಡ್ಡಿ ಸಹಾಯಧನವನ್ನು ಒದಗಿಸಲಾಗುತ್ತಿದೆ.
ಈ ಸಾಲ ಸೌಲಭ್ಯಗಳಿಗೆ ಇರುವಂತ ನಿಬಂಧನೆಗಳು ಏನು? ಪಡೆಯುವುದು ಹೇಗೆ ಗೊತ್ತಾ?
5.00 ಲಕಗಳವರೆಗಿನ ಅಲ್ಪಾವಧಿ ಬೆಳೆ ಸಾಲವನ್ನು ಮತ್ತು 2.00 ಲಕ್ಷಗಳವರೆಗೆ ಪಶುಸಂಗೋಪನೆ/ಮೀನುಗಾರಿಕೆ ಉದ್ದೇಶಗಳಿಗೆ ದುಡಿಯುವ ಬಂಡವಾಳದ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ವಿತರಿಸುವ ಯೋಜನೆ
1. ಈ ಯೋಜನೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್, ಪಿಕಾರ್ಡ್ ಬ್ಯಾಂಕುಗಳು ಹಾಗೂ ಡಿಸಿಸಿ ಬ್ಯಾಂಕುಗಳು ರೂ. 5.00 ಲಕ್ಷಗಳವರೆಗಿನ ಅಲ್ಪಾವಧಿ ಬೆಳೆ ಸಾಲವನ್ನು ಮತ್ತು ರೂ.2.00 ಲಕ್ಷಗಳವರೆಗೆ ಪಶುಸಂಗೋಪನೆ/ಮೀನುಗಾರಿಕೆ ಉದ್ದೇಶಗಳಿಗೆ ದುಡಿಯುವ ಬಂಡವಾಳದ ಸಾಲವನ್ನು `ಶೂನ್ಯ ಬಡ್ಡಿದರ ಅನ್ವಯವಾಗುವಂತೆ ರೈತರಿಗೆ ವಿತರಿಸಬೇಕಿರುತ್ತದೆ.
2. ರೈತನ ಭೂಮಿ ಅಥವಾ ವಾಸ ಸ್ಥಳ ಇರುವ ಪ್ರಾಥಮಿಕ ಸಹಕಾರ ಸಂಘದಲ್ಲಿ ರೈತನು ಸಾಲಕ್ಕಾಗಿ ಅರ್ಜಿ ಸಲ್ಲಿಸಬೇಕು. ಸಂಘ ನಿಷ್ಕ್ರಿಯ ಆಗಿದ್ದಲ್ಲಿ ಸಂಬಂಧಿಸಿದ ಡಿಸಿಸಿ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಬೇಕು.
3. ರೈತನು ಸಾಲ ಪಡೆಯಲು ನೀಡುವ ಭೂ ದಾಖಲೆಗಳಲ್ಲಿ ಇತರೇ ಯಾವುದೇ ಬ್ಯಾಂಕಿನಿಂದ ಸಾಲ ಪಡೆದಿರಬಾರದು.
4. ಅಲ್ಪಾವಧಿ ಕೃಷಿ ಸಾಲ ವಿತರಿಸಲು ರೈತನು ಹೊಂದಿರುವ ಭೂಹಿಡುವಳಿಗೆ ಮತ್ತು ಬೆಳೆಯುವ ಬೆಳೆಗೆ, ರಾಜ್ಯ ತಾಂತ್ರಿಕ ಸಲಹಾ ಸಮಿತಿ ಪ್ರತೀ ಬೆಳೆಗೆ ನಿಗದಿ ಪಡಿಸಿದ ಸ್ಟೇಲ್ ಆಫ್ ಫೈನಾನ್ಸ್ ಪ್ರಕಾರ ಬೆಳೆ ಸಾಲದ ಗರಿಷ್ಟ ಮಿತಿಯಾದ ಕ್ರಮಿಕ ಪತ್ತಿನ ಮಿತಿ (NCL) ಗೆ ಸಂಬಂದಿಸಿದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿಂದ ಅನುಮೋದನೆ ಪಡೆದಿರತಕ್ಕದ್ದು ಹಾಗೂ ಬೆಳೆ ವಿಮೆ ಒಳಗೊಂಡಂತೆ ಸದರಿ ಮಿತಿ ಅಥವಾ ರೂ.5.00 ಲಕ್ಷ ಯಾವುದು ಕಡಿಮೆಯೋ ಆ ಮಿತಿಗೆ ಮಾತ್ರ ಸಾಲ ದೊರೆಯುತ್ತದೆ.
5. ಸಂಘಗಳು ಹೆಚ್ಚಿನ ಪ್ರಮಾಣದ ಸಾಲ ವಿತರಿಸಿದ್ದರೂ ಸಹ ಶೂನ್ಯ ಬಡ್ಡಿ ದರ ರೂ.5 ಲಕ್ಷಗಳ ವರೆಗಿನ ಸಾಲಕ್ಕೆ ಅನ್ವಯವಾಗುತ್ತದೆ.
6. ರೈತನು ಪಡೆದ ಸಾಲವನ್ನು ಸಂಘವು ನಿಗದಿಪಡಿಸಿದ ಗಡುವು ದಿನಾಂಕ ಅಥವಾ ಒಂದು ವರ್ಷ ಇದರಲ್ಲಿ ಯಾವುದು ಕಡಿಮೆಯೋ ಆ ಅವಧಿಯಲ್ಲಿ ಮರುಪಾವತಿಸಿದಲ್ಲಿ ಮಾತ್ರ ಬಡ್ಡಿ ಸಹಾಯಧನ ಲಭ್ಯವಾಗುತ್ತದೆ.
7. ಜಿಲ್ಲಾ ಸಹಕಾರ ಬ್ಯಾಂಕುಗಳು ನಬಾರ್ಡ್ ನಿಂದ ದೊರೆಯುವ ಮುನರ್ಧನ ಮತ್ತು ತಮ್ಮ ಬಂಡವಾಳದ ಲಭ್ಯತೆ ಆಧರಿಸಿ ರೈತರಿಗೆ ಸಾಲ ಮಂಜೂರು ಮಾಡಲಾಗುತ್ತದೆ.
15.00 ಲಕ್ಷಗಳವರೆಗೆ ಮದ್ಯಮಾವದಿ/ದೀರ್ಘಾವಧಿ ಕೃಷಿ ಸಾಲಗಳನ್ನು ಶೇಕಡ 3 ರ ಬಡ್ಡಿ ದರದಲ್ಲಿ ವಿತರಿಸುವ ಯೋಜನೆ.
1. ಈ ಯೋಜನೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್, ಪಿಕಾರ್ಡ್ ಬ್ಯಾಂಕುಗಳು ಹಾಗೂ ಡಿಸಿಸಿ ಬ್ಯಾಂಕುಗಳು ರೂ. 15.00 ಲಕ್ಷಗಳವರೆಗಿನ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲವನ್ನು ಶೇ.3 ರ ಬಡ್ಡಿದರ ಅನ್ವಯವಾಗುವಂತೆ ರೈತರಿಗೆ ವಿತರಿಸಿಬೇಕಿರುತ್ತದೆ.
4. ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ವಿತರಿಸಲು ನಬಾರ್ಡ್ ನಿಗದಿಪಡಿಸಿದ ಯುನಿಟ್ ಕಾಸ್ಟ್ ಅನ್ವಯ ಮತ್ತು ಭದ್ರತೆಯ ಮೌಲ್ಯದನ್ವಯ ಸಾಲದ ಮಿತಿಯನ್ನು ನಿಗದಿಪಡಿಸಲಾಗುತ್ತದೆ ಮತ್ತು ಸಾಲಕ್ಕೆ ಡಿಸಿಸಿ ಬ್ಯಾಂಕುಗಳ ಸಾಲ ನಿಯಮಾವಳಿಗಳನ್ವಯ ಭದ್ರತೆ ಪಡೆಯಲಾಗುತ್ತದೆ.
5. ಸಂಘಗಳು ಹೆಚ್ಚಿನ ಪ್ರಮಾಣದ ಸಾಲ ವಿತಲಿಸಿದ್ದರೂ ಸಹ ಶೇ.3 ರ ಬಡ್ಡಿ ದರ ರೂ.15 ಲಕ್ಷಗಳ ವರೆಗಿನ ಸಾಲಕ್ಕೆ ಅನ್ವಯವಾಗುತ್ತದೆ.
6. ರೈತನು ಪಡೆದ ಸಾಲವನ್ನು ಸಂಘವು ಗರಿಷ್ಟ 10 ವರ್ಷಗಳ ಅವಧಿಗೆ ನಿಗದಿಪಡಿಸಿದ ಗಡುವು ದಿನಾಂಕದೊಳಗೆ ಸಾಲ ಮರುಪಾವತಿಸಿದಲ್ಲಿ ಮಾತ್ರ ಬಡ್ಡಿ ಸಹಾಯಧನ ಲಭ್ಯವಾಗುತ್ತದೆ.
7, ಜಿಲ್ಲಾ ಸಹಕಾರ ಬ್ಯಾಂಕುಗಳು ಹಾಗೂ ಪಿಕಾರ್ಡ್ ಬ್ಯಾಂಕ್ ನಬಾರ್ಡ್ ನಿಂದ ದೊರೆಯುವ ಮನರ್ಧನ ಮತ್ತು ತಮ್ಮ ಬಂಡವಾಳದ ಲಭ್ಯತೆ ಆಧರಿಸಿ ರೈತರಿಗೆ ಸಾಲ ಮಂಜೂರು ಮಾಡಲಾಗುತ್ತದೆ.
ಅಡಮಾನ ಸಾಲ
1. ರೈತನು ಸಂಘದ ಸದಸ್ಯನಾಗಿರತ್ತಕ್ಕದ್ದು.
2. ರೈತನ ಭೂಮಿ ಅಥವಾ ವಾಸ ಸ್ಥಳ ಸಂಘದ ವ್ಯಾಪ್ತಿಯಲ್ಲಿರತಕ್ಕದ್ದು,
3. ರೈತನು ತನ್ನ ಕೃಷಿ ಉತ್ಪನ್ನಗಳನ್ನು ಸಹಕಾರ ಸಂಘಗಳ ಗೋದಾಮಿನಲ್ಲಿ ಶೇಖಲಿಸಿಡತಕ್ಕದ್ದು.
4. ಶೇಖರಣೆ ಮಾಡಿದ ಕೃಷಿ ಉತ್ಪನ್ನದ ಶೇ.70 ರಷ್ಟು ಮೌಲ್ಯ ಅಥವಾ ರೂ.2.೦೦ ಲಕ್ಷ ಇದರಲ್ಲಿ ಯಾವುದು ಕಡಿಮೆಯೋ ಆ ಮೊತ್ತದ ಸಾಲವನ್ನು ಶೇ.7 ರ ಬಡ್ಡಿ ದರದಲ್ಲಿ ಗರಿಷ್ಟ 6 ತಿಂಗಳ ಅವಧಿಗೆ ಪಡೆಯಬಹುದಾಗಿದೆ.
5. ಸರ್ಕಾರದಿಂದ ಶೇ.4.00 ರ ಬಡ್ಡಿ ಸಹಾಯಧನವನ್ನು ರೈತರ ಪರವಾಗಿ ಸಹಕಾರ ಸಂಘಗಳಿಗೆ ನೀಡಲಾಗುವುದು.
ನಾಲ್ಕು ಚಕ್ರದ ಪಿಕ್‌ಅಪ್ ವ್ಯಾನ್ (Pick-up Van) ಖಲೀದಿಸಲು ಏಳು ಲಕ್ಷ ರೂ.ವರೆಗಿನ ಸಾಲವನ್ನು ಶೇ.4 ರ ಬಡ್ಡಿ ದರದಲ್ಲಿ ವಿತರಿಸುವ ಯೋಜನೆ
1. ಈ ಯೋಜನೆಯು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಇರುವ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳು ಅಂದರೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಬೇಜಯನ್ ಸಹಕಾರ ಸಂಸ್ಥೆಗಳು. ಪಿಕಾರ್ಡ್ ಬ್ಯಾಂಕುಗಳು ರೈತರಿಗೆ ನೇರವಾಗಿ ಪಿಕ್ ಅಪ್ ವ್ಯಾನ್ ಖರೀದಿಸಲು ನೀಡುವ ಸಾಲಗಳಿಗೆ ಅನ್ವಯಿಸುತ್ತದೆ.
2. ಈ ಯೋಜನೆಯಲ್ಲಿ ಸಾಲ ಪಡೆಯಲು ರೈತರ ಸಾಗುವ ಭೂಮಿಯು ಗುಡ್ಡಗಾಡು ಪ್ರದೇಶದಲ್ಲಿರಬೇಕು, ಅಂದರೆ ರೈತರ ಹೊಲವು ಶೇ.15 ಕ್ಕಿಂತ ಹೆಚ್ಚಿನ ಸ್ಫೋಸ್ ಹೊಂದಿರಬೇಕು ಅಥವಾ ರೈತನ ಮನೆ, ತಾಲ್ಲೂಕು ಮಾರುಕಟ್ಟೆ ಮತ್ತು ಹೊಲದ ನಡುವಿನ ರಸ್ತೆಯು ಗುಡ್ಡದ ಪ್ರದೇಶಗಳನ್ನು ಹೊಂದಿರತಕ್ಕದ್ದು ಮತ್ತು ರೈತನ ಹೊಲದಲ್ಲಿ ಟ್ರಾಕ್ಟರ್ ನ್ನು ಬಳಸಿ ಉಳುಮೆ ಮಾಡದೇ ಇರಬೇಕು. ಗುಡ್ಡಗಾಡು ಪ್ರದೇಶಗಳ ಗ್ರಾಮಗಳನ್ನು ಡಿಸಿಸಿ ಬ್ಯಾಂಕುಗಳು ಜಿಲ್ಲಾಧಿಕಾರಿಯವರಿಂದ ಅನುಮೋದನೆ ಪಡೆದು ಸಂಬಂಧಿಸಿದ ಎಲ್ಲಾ ಸಹಕಾರ ಸಂಘಗಳಿಗೆ ಹಾಗೂ ಇಲಾಖಾ ಅಧಿಕಾರಿಗಳಿಗೆ ತಿಳಿಸತಕ್ಕದ್ದು. ಹಾಗೂ ಈ ಪ್ರದೇಶದಲ್ಲಿನ ಭೂಮಿ ಹೊಂದಿರುವ ರೈತರಿಗೆ ಮಾತ್ರ ಯೋಜನೆಯಲ್ಲಿ ಸಾಲ ವಿತರಿಸತಕ್ಕದ್ದು.,
3. ಈ ಯೋಜನೆಯಲ್ಲಿನ ಜಿಲ್ಲೆಗಳಲ್ಲಿ ಭೂಮಿ ಹೊಂದಿರುವ ರೈತರಿಗೆ ಗಲಿಷ್ಠ 1.75 ಟನ್ ಸಾಗಾಣಿಕೆ ಸಾಮರ್ಥ್ಯದ, ಗಲಷ್ಟ 3 ಸೀಟರ್ ಹೊಂದಿರುವ ನಾಲ್ಕು ಚಕ್ರದ ಪಿಕ್ ವ್ಯಾನ್ ಖಲೀದಿಸಲು ಈ ಜಿಲ್ಲೆಗಳ ಸಹಕಾರ ಸಂಘಗಳು ಗರಿಷ್ಟ ರೂ.7.00 ಲಕ್ಷಗಳ ವರೆಗೆ ನೀಡುವ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ.
ಪ್ಯಾಕ್ಸ್ ಮತ್ತು ಪಿಕಾರ್ಡ್ ಬ್ಯಾಂಕುಗಳು ಗರಿಷ್ಟ ಶೇ.11 ರ ಬಡ್ಡಿ ದರ ಮತ್ತು ಡಿಸಿಸಿ ಬ್ಯಾಂಕುಗಳು ಗರಿಷ್ಟ 10 ರ ಬಡ್ಡಿ ದರದಲ್ಲಿ ಸಾಲ ವಿತರಿಸಬೇಕು.
5. ಪ್ರತೀ ಜಿಲ್ಲೆಯಲ್ಲಿ 100 ಫಲಾನುಭವಿಗಳಗೆ ಈ ಸೌಲಭ್ಯ ದೊರೆಯಲಿದೆ. 6. ರೈತರು ಪ್ರತೀ ಆರು ತಿಂಗಳಿಗೊಮ್ಮೆ ಗರಿಷ್ಟ 7 ವರ್ಷಗಳ ಅವಧಿಗೆ ಸಹಕಾರ ಸಂಘಗಳು ನಿಗಣಪಡಿಸಿದ ಗಡುವಿನ ದಿನಾಂಕದೊಳಗೆ ಸಾಲದ ಕಂತನ್ನು ಮರುಪಾವತಿಸಿದಲ್ಲಿ ಪ್ಯಾಕ್ಸ್ ಮತ್ತು ಪಿಕಾರ್ಡ್ ಬ್ಯಾಂಕುಗಳಿಗೆ ಶೇ.7 ಮತ್ತು ಡಿಸಿಸಿ ಬ್ಯಾಂಕುಗಳಿಗೆ ರೈತರ ಪರವಾಗಿ ಶೇ.6 ರ ಬಡ್ಡಿ ಸಹಾಯಧನ ದೊರೆಯುತ್ತದೆ. ಇದರಿಂದ ರೈತರಿಗೆ ಶೇ.4 ರ ಬಡ್ಡಿ ದರದಲ್ಲಿ ಸಾಲ ದೊರೆತಂತಾಗುತ್ತದೆ.
ರೈತರು ಗೊದಾಮು ನಿರ್ಮಿಸಲು ರೂ.20 ಲಕ್ಷಗಳ ವರೆಗೆ ಪಡೆದ ಸಾಲಗಳಿಗೆ ಶೇ.7 ರ ಬಡ್ಡಿ ಸಹಾಯಧನ ನೀಡುವುದು.
1.ಈ ಯೋಜನೆಯು ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳು ಅಂದರೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಪಿಕಾರ್ಡ್ ಬ್ಯಾಂಕುಗಳು ರೈತರಿಗೆ ನೇರವಾಗಿ ಕೃಷಿ ಉತ್ಯನ್ನಗಳನ್ನು ಸಂಗ್ರಹಿಸುವ ಸಲುವಾಗಿ ಗೋದಾಮುಗಳನ್ನು ನಿರ್ಮಿಸಲು ನೀಡುವ ಸಾಲಗಳಿಗೆ ಅನ್ವಯಿಸುತ್ತದೆ.
2. ಈ ಯೋಜನೆಯಲ್ಲಿ ಪಡೆಯುವ ಸಾಲದಲ್ಲಿ ರೈತರು ಗ್ರಾಮೀಣ ಪ್ರದೇಶಗಳಲ್ಲಿರುವ ತಮ್ಮ ಗ್ರಾಮ ಪಂಚಾಯತಿ/ಪಟ್ಟಣ ಪಂಚಾಯತಿ ವ್ಯಾಪ್ತಿಯ ನಿವೇಶನಗಳಲ್ಲಿ ಅಥವಾ ಕೃಷಿ ಜಮೀನುಗಳಲ್ಲಿ Warehousing Development and Regulatory Authority / ನಬಾರ್ಡ್ ನಿಗದಿಪಡಿಸಿದ ವಿನ್ಯಾಸದನ್ವಯ ಗೋದಾಮು ನಿರ್ಮಿಸತಕ್ಕದ್ದು.
3. ಈ ಯೋಜನೆಯಲ್ಲಿ ಸಹಕಾರ ಸಂಘಗಳು ಗರಿಷ್ಟ ರೂ.20.00 ಲಕ್ಷಗಳ ವರೆಗ ನೀಡಿದ ಸಾಲಗಳಿಗೆ ಬಡ್ಡಿ ಸಹಾಯಧನ ದೊರೆಯುತ್ತದೆ. ಸಹಕಾರ ಸಂಘಗಳು ರೂ.20.00 ಲಕ್ಷಕ್ಕಿಂತ ಹೆಚ್ಚಿನ ಸಾಲ ವಿತರಿಸಿದರೂ ಸಹ ಮೊದಲ ರೂ.20.00 ಲಕ್ಷಗಳ ವರೆಗಿನ ಸಾಲದ ಹೊರಬಾಕಿಗೆ ಬಡ್ಡಿ ಸಹಾಯಧನ ದೊರೆಯುತ್ತದೆ.
4. ಸಹಕಾರ ಸಂಘಗಳು ಗರಿಷ್ಟ ಶೇ.20 ರಷ್ಟು ವಂತಿಕೆಯನ್ನು ಮಾತ್ರ ಪಡೆದು ಉಳಿದ ಮೊತ್ತವನ್ನು ಸಾಲದ ರೂಪದಲ್ಲಿ ವಿತರಿಸತಕ್ಕದ್ದು. ಸಾಲದ ಮೊತ್ತಕ್ಕೆ ಗೋದಾಮು ಮತ್ತು ಭೂಮಿಯ ಮೌಲ್ಯ ಒಳಗೊಂಡಂತೆ 1.50 ರಷ್ಟು ಮಾತ್ರ ಭದ್ರತೆ ಪಡೆಯತಕ್ಕದ್ದು.
5. ಪ್ಯಾಕ್ಸ್ ಮತ್ತು ಪಿಕಾರ್ಡ್ ಬ್ಯಾಂಕುಗಳು ಗರಿಷ್ಟ ಶೇ.11 ರ ಬಡ್ಡಿ ದರ ಮತ್ತು ಡಿಸಿಸಿ ಬ್ಯಾಂಕುಗಳು ಗರಿಷ್ಟ 10 ರ ಬಡ್ಡಿ ದರದಲ್ಲಿ ಸಾಲ ವಿತಲಿಸಿಬೇಕು.
6. ರೈತರು ಪ್ರತಿ ಆರು ತಿಂಗಳಿಗೊಮ್ಮೆ ಗರಿಷ್ಟ 7 ವರ್ಷಗಳ ಅವಧಿಗೆ ಸಹಕಾರ ಸಂಘಗಳು ನಿಗದಿಪಡಿಸಿದ ಗಡುವಿನ ದಿನಾಂಕದೊಳಗೆ ಸಾಲದ ಕಂತನ್ನು ಮರುಪಾವತಿಸಿದಲ್ಲಿ ಪ್ಯಾಕ್ಸ್ ಮತ್ತು ಪಿಕಾರ್ಡ್ ಬ್ಯಾಂಕುಗಳಿಗೆ ಶೇ.7 ಮತ್ತು ಡಿಸಿಸಿ ಬ್ಯಾಂಕುಗಳಿಗೆ ರೈತರ ಪರವಾಗಿ ಶೇ.6 ರ ಬಡ್ಡಿ ಸಹಾಯಧನ ದೊರೆಯುತ್ತದೆ. ಇದರಿಂದ ರೈತರಿಗೆ ಶೇ.4 ರ ಬಡ್ಡಿ ದರದಲ್ಲಿ ಸಾಲ ದೊರೆತಂತಾಗುತ್ತದೆ ಎಂಬುದಾಗಿ ಸಹಕಾರ ಸಂಘಗಳ ಅಪರ ನಿಬಂಧಕರು ತಿಳಿಸಿದ್ದಾರೆ.
Bele sala-37 ಲಕ್ಷ ರೈತರಿಗೆ 28 ಸಾವಿರ ಕೋಟಿ ಬೆಳೆಸಾಲ ವಿತರಣೆ,ನಿಮಗೇಷ್ಟು ಬೆಳೆಸಾಲ ವಿತರಣೆಯಾಗಿದೆ ಚೆಕ್ ಮಾಡಿ
ಸಿಎಂ ಸಿದ್ದರಾಮಯ್ಯ(Siddaramaiah) ಅಧ್ಯಕ್ಷತೆಯಲ್ಲಿ ಇಂದು ಗೃಹಕಚೇರಿ ಕೃಷ್ಣಾದಲ್ಲಿ ಸಹಕಾರ ಇಲಾಖೆ ಪ್ರಗತಿ ಪರಿಶೀಲನೆ ಸಭೆ ಮಾಡಲಾಗಿದೆ. ಕರ್ನಾಟಕದಲ್ಲಿ ಪ್ರಸ್ತುತ ಸಾಲಿನಲ್ಲಿ 37ಲಕ್ಷ ರೈತರಿಗೆ (farmers) ರೂ. 28 ಸಾವಿರ ಕೋಟಿ ಸಾಲ ವಿತರಣೆಯ ಗುರಿ ಹೊಂದಲಾಗಿದ್ದು, ಜುಲೈ ಅಂತ್ಯದವರೆಗೆ 8,69,284 ರೈತರಿಗೆ ರೂ.8,362.68 ಕೋಟಿ ಸಾಲ ವಿತರಣೆ ಮಾಡಲಾಗಿದೆ.
ರೈತರಿಗೆ ಸಕಾಲದಲ್ಲಿ ಕೃಷಿ ಸಾಲ ಸಿಗುವುದನ್ನು ಪ್ರತಿ ಜಿಲ್ಲೆಯಲ್ಲೂ ಖಾತ್ರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣ ವಜಾಗೊಂಡ ನಂತರ ಮೊದಲ ಪ್ರಗತಿ ಪರಿಶೀಲನಾ ಸಭೆ ಇದಾಗಿದೆ. ರಾಜಣ್ಣ ವಜಾ ನಂತರ ಸಿಎಂ ಬಳಿಯೇ ಸಹಕಾರ ಖಾತೆ ಇದೆ. ಹೀಗಾಗಿ ಪ್ರಗತಿ ಪರಿಶೀಲನಾ ಸಭೆ ಮಾಡಿದರು.
ಸಭೆಯ ಮುಖ್ಯಾಂಶಗಳು ಹೀಗಿವೆ
ನಬಾರ್ಡ್ ರಿಯಾಯಿತಿ ಬಡ್ಡಿ ದರದ ಸಾಲದ ಮಿತಿಯನ್ನು ಹಿಂದಿನ ಸಾಲಿನಲ್ಲಿದ್ದ ರೂ.5,600 ಕೋಟಿಗಳಿಂದ ರೂ.3,236.11 ಕೋಟಿಗೆ ಅಂದರೆ ಶೇ.42.21ರಷ್ಟು ಕಡಿಮೆ ಮಾಡಿದೆ. ಆದರೂ ಸಾಲ ವಿತರಣೆಯಲ್ಲಿ ಶೇ.96.07 ರಷ್ಟು ಪ್ರಗತಿ ಸಾಧಿಸಲಾಗಿದೆ. 2024-25ನೇ ಸಾಲಿನಲ್ಲಿ 29,75,598 ರೈತರಿಗೆ 25,939.09 ಕೋಟಿ ಕೃಷಿ ಸಾಲ ವಿತರಣೆ ಮಾಡಲಾಗಿದೆ.
ಅನ್ನಭಾಗ್ಯ ಅಕ್ಕಿ ಕೊಪ್ಪಳದಿಂದ ದುಬೈಗೆ ಕಳ್ಳ ಸಾಗಾಟ? 'ಟಿವಿ9' ವರದಿ ಬೆನ್ನಲ್ಲೇ ನಾಲ್ವರ ವಿರುದ್ಧ ಎಫ್ಐಆರ್
ರಾಜ್ಯದಲ್ಲಿ 28,516 ಸಹಕಾರ ಸಂಘಗಳು ಲಾಭದಲ್ಲಿದ್ದು, 14,670 ಸಂಘಗಳು ನಷ್ಟದಲ್ಲಿವೆ. ಸಾಲ ವಸೂಲಾತಿ ಸರಿಯಾಗಿ ಆಗದ ಕಾರಣ ಬಹುತೇಕ ಸಂಘಗಳು ನಷ್ಟದಲ್ಲಿದ್ದು, ಅಂತಹ ಸಂಘಗಳು ಸಾಲ ವಸೂಲಾತಿಗೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಇದರಲ್ಲಿ 2,200 ಹಾಲು ಉತ್ಪಾದಕ ಸಂಘಗಳು ನಷ್ಟದಲ್ಲಿವೆ. ಹಾಲು ಉತ್ಪಾದಕ ಸಹಕಾರ ಸಂಘಗಳ ವೆಚ್ಚದ ಮೇಲೆ ನಿಗಾ ಇರಿಸಬೇಕು. ಹಾಲು ಉತ್ಪಾದನೆಯನ್ನು ಹೆಚ್ಚಿಸುವುದು ಸಂಘಗಳ ಕಾರ್ಯದರ್ಶಿಗಳ ಜವಾಬ್ದಾರಿ. ಹಾಲು ಉತ್ಪಾದಕ ಸಹಕಾರ ಸಂಘಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್‌ನ ಅವ್ಯವಹಾರಗಳ ಕುರಿತು ಡಿಆರ್‌ಸಿಎಸ್ ತನಿಖೆ ನಡೆಸುತ್ತಿದೆ. ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಕೆಲವು ಸದಸ್ಯರ ಸದಸ್ಯತ್ವವನ್ನು ಪರಿಷತ್ ರದ್ದುಪಡಿಸುತ್ತಿರುವ ಕುರಿತು ದೂರುಗಳು ಬಂದಿದ್ದು, ಈ ಕುರಿತು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಸೂಚನೆ.
ಸಹಕಾರ ಸಂಘಗಳ ಹಿರಿಯ ನಿರೀಕ್ಷಕರ 126 ಹುದ್ದೆಗಳು ಹಾಗೂ ಸಹಕಾರ ಸಂಘಗಳ ನಿರೀಕ್ಷಕರ 403 ಹುದ್ದೆಗಳು ಖಾಲಿಯಿವೆ. ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಸಲ್ಲಿಸಬೇಕು.
ಸಹಕಾರ ಸಂಘಗಳ ನಿಬಂಧಕರ ಕಚೇರಿಯ ವ್ಯಾಪ್ತಿಯ ಸೇವೆಗಳನ್ನು ಗಣಕೀಕರಿಸುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.
ರಾಜ್ಯದಲ್ಲಿ 7,074 ಗಿರವಿದಾರ ಸಂಸ್ಥೆಗಳು ಹಾಗೂ 1,468 ಚೀಟಿ ಸಂಸ್ಥೆಗಳು ಕರ್ನಾಟಕ ಲೇವಾದೇವಿಗಾರರ ಅಧಿನಿಯಮ 1961, ಕರ್ನಾಟಕ ಗಿರವಿದಾರರ ಅಧಿನಿಯಮ 1961 ಮತ್ತು ಚೀಟಿನಿಧಿಗಳ ಅಧಿನಿಯಮ 1982ರಡಿ ನೋಂದಣಿಯಾಗಿವೆ. ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಗಿರವಿದಾರ ಸಂಸ್ಥೆಗಳು ಹಾಗೂ ಚೀಟಿ ಸಂಸ್ಥೆಗಳ ಮೇಲೆ ನಿಗಾ ಇರಿಸಬೇಕು.
ರಾಜ್ಯದಲ್ಲಿ ಸಹಕಾರಿ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಹಕಾರ ಇಲಾಖೆ ಅಧಿಕಾರಿಗಳು ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸಿಎಂ ಸೂಚಿಸಿದ್ದಾರೆ.
Sala manna-ರೈತರ ಸಾಲಮನ್ನಾದ 300 ಕೋಟಿ ಬಾಕಿ ತಿರಿಸುತ್ತೇವೆ-ಸಿಎಂ ಸಿದ್ದರಾಮಯ್ಯ
ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ರೈತರ ಸಾಲ ಮನ್ನಾ (Loan Waiver) ಮಾಡಿ ಬಾಕಿ ಉಳಿಸಿದ್ದ 300 ಕೋಟಿ ಹಣವನ್ನು ಕಾಂಗ್ರೆಸ್ ಸರ್ಕಾರ ಮುಂದಿನ ದಿನದಲ್ಲಿ ತೀರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.
ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಹಕಾರ ಸಚಿವ ಕೆಎನ್ ರಾಜಣ್ಣ ಅವರ 75ನೇ ವರ್ಷದ ‘ಅಮೃತ ಮಹೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ಕುಮಾರಸ್ವಾಮಿ ಹೆಸರು ಪಡೆದುಕೊಂಡರು. ಆದರೆ ಬಾಕಿಯನ್ನು ನಮ್ಮ ಸರ್ಕಾರ ತೀರಿಸಬೇಕಾಗಿದೆ. ಹೆಸರು ಅವರಿಗೆ, ಹೊರೆ ಹೊತ್ತುಕೊಂಡಿದ್ದು ನಮ್ಮ ಸರ್ಕಾರ ಎಂದರು.
2018 ರಿಂದ ಇಲ್ಲಿಯವರೆಗೂ ಕರ್ನಾಟಕದಲ್ಲಿ ಯಾರಿಗೆಲ್ಲಾ ಎಷ್ಟು ಸಾಲ ಮನ್ನಾ ಆಗಿದೆ? ಹಾಗಾದರೆ ಯಾವ ಬಾಕಿ ರೈತರ ಸಾಲಮನ್ನಾ ಆಗಲಿದೆ,ಸಾಲಮನ್ನಾ ಆಗಲು ಬೇಕಾದ ದಾಖಲೆ ಹಾಗೂ ಅರ್ಹತೆಗಳೇನು? ಹೀಗೆ ಚೆಕ್ ಮಾಡಿ-Bele sala manna status
2018 ರಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಇದ್ದಾಗ ರಾಜ್ಯದ ರೈತರ ಸಾಲಮನ್ನಾ(Bele sala manna) ಮಾಡಿದ್ದರು.ಆದರೆ ಅದರಲ್ಲಿ ಕೇಲವು ರೈತರ ದಾಖಲೆಗಳ ಕೊರತೆಯಿಂದಾಗಿ ಬಾಕಿ ಉಳಿದ ಪ್ರಕರಣಗಳಲ್ಲಿ ದಾಖಲಾತಿಗಳನ್ನು ಸಲ್ಲಿಸಿದ ನಂತರ ಸಾಲಮನ್ನಾ ಆಗುತ್ತಿದೆ.ಹಾಗಾದರೆ ಈ ಲೇಖನದಲ್ಲಿ ಯಾವೆಲ್ಲಾ ದಾಖಲಾತಿಗಳು ಬೇಕಾಗಬಹುದು ಎಂದು ಚೆಕ್ ಮಾಡಬಹುದು.
ಹಾಗಾದರೆ ಕರ್ನಾಟಕದಲ್ಲಿ ಇಲ್ಲಿಯವರೆಗೂ ಎಷ್ಟು ಬೆಳೆಸಾಲಮನ್ನಾ ಆಗಿದೆ ಹೀಗೆ ಚೆಕ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://mahitikanaja.karnataka.gov.in/department
ನಂತರ "Revenue department/ಕಂದಾಯ ಇಲಾಖೆ" ಮೇಲೆ ಕ್ಲಿಕ್ ಮಾಡಿ
ನಂತರ "ಕಂದಾಯ ಇಲಾಖೆ ಸೇವೆಗಳು"(Revenue department services)ಮೇಲೆ ಕ್ಲಿಕ್ ಮಾಡಿ
ನಂತರ ವಾಣಿಜ್ಯ ಬ್ಯಾಂಕ್ ನ ಸಾಲಮನ್ನಾ ಚೆಕ್ ಮಾಡಲು "Loan waiver report for commercial bank" ಮೇಲೆ ಕ್ಲಿಕ್ ಮಾಡಿ. ಸೊಸೈಟಿಯಲ್ಲಿನ ಸಾಲಮನ್ನಾ ಚೆಕ್ ಮಾಡಲು "Loan waiver report for primary agricultural cooperative societies" ಮೇಲೆ ಕ್ಲಿಕ್ ಮಾಡಿ
ನಂತರ ಮಾದರಿ "ರೈತ"(farmer) ಎಂದು Select ಮಾಡಿ
ನಂತರ ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ ಮತ್ತು ಗ್ರಾಮವನ್ನು Select ಮಾಡಿ "ಸಲ್ಲಿಸು"(Submit)ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ನಿಮ್ಮ ಊರಿನಲ್ಲಿ ಯಾರಿಗೆಲ್ಲಾ ಸಾಲಮನ್ನಾ(Crop loan wavier) ಆಗಿದೆ ಎಂದು ಚೆಕ್ ಮಾಡಬಹುದು.Search button ಅಲ್ಲಿ ನಿಮ್ಮ ಹೆಸರು ಹಾಕಿದರೆ ನಿಮ್ಮ ಹೆಸರು ಸಿಗುತ್ತದೆ.
ಹಸಿರು ಪಟ್ಟಿಯಲ್ಲಿ(Bele sala manna list) ನಿಮ್ಮ ಅರ್ಹತೆ ಹೀಗೆ ಚೆಕ್ ಮಾಡಿ
https://mahitikanaja.karnataka.gov.in/department
ನಂತರ "ಕಂದಾಯ ಇಲಾಖೆ/Revenue department" ಮೇಲೆ ಕ್ಲಿಕ್ ಮಾಡಿ
ನಂತರ "ಕಂದಾಯ ಇಲಾಖೆ ಸೇವೆಗಳು/Revenue department services" ಮೇಲೆ ಕ್ಲಿಕ್ ಮಾಡಿ
ನಂತರ "CLWS ರೈತನ ಅರ್ಹತೆ" ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಜಿಲ್ಲೆ ಮತ್ತು ಬ್ಯಾಂಕ್(bank) select ಮಾಡಿ,ಸಲ್ಲಿಸು/Submit ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ರೈತನ ಹೆಸರು,ಸಾಲ ಮನ್ನಾಗೆ(crop loan wavier) ಬೇಕಾದ ಅರ್ಹತೆ ಹಾಗೂ ಸ್ಥಿತಿಗತಿ ಚೆಕ್ ಮಾಡಬಹುದು
ಈ ಕೆಳಗಿನಂತೆ ಹಸಿರು ಪಟ್ಟಿಯಲ್ಲಿ "Yes" ಎಂದು ಇದ್ದರೆ ನೀವು ಸಾಲಮನ್ನಾಗೆ ಅರ್ಹ ಎಂದು ಅರ್ಥ,"No" ಎಂದು ಇದ್ದರೆ ನೀವು ಸಾಲಮನ್ನಾಗೆ ಅರ್ಹರಲ್ಲ ಎಂದು ಅರ್ಥ