Bele vime- ಈ ಜಿಲ್ಲೆಯ 2.49 ಲಕ್ಷ ರೈತರಿಗೆ 559 ಕೋಟಿ ಬೆಳೆವಿಮೆ ಪರಿಹಾರ, ನಿಮ್ಮ ಸ್ಟೇಟಸ್ ಹೀಗೆ ಚೆಕ್ ಮಾಡಿ

<Bele vime> <Bele> <vime> <crop> <crop insurance> <pradan mantri fasal bheema yojana> <PMFBY> <ಬೆಳೆ> <ಬೆಳೆ ವಿಮೆ> <ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ>

Bele vime- ಈ ಜಿಲ್ಲೆಯ 2.49 ಲಕ್ಷ ರೈತರಿಗೆ 559 ಕೋಟಿ ಬೆಳೆವಿಮೆ ಪರಿಹಾರ, ನಿಮ್ಮ ಸ್ಟೇಟಸ್ ಹೀಗೆ ಚೆಕ್ ಮಾಡಿ

Bele vime- ಈ ಜಿಲ್ಲೆಯ 2.49 ಲಕ್ಷ ರೈತರಿಗೆ 559 ಕೋಟಿ ಬೆಳೆವಿಮೆ ಪರಿಹಾರ, ನಿಮ್ಮ ಸ್ಟೇಟಸ್ ಹೀಗೆ ಚೆಕ್ ಮಾಡಿ 


ರಾಜ್ಯದಲ್ಲಿ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಇತಿಹಾಸದಲ್ಲೇ ನೀಡದಂತಹ ಪರಿಹಾರವನ್ನು ರೈತರಿಗೆ ನೀಡಲಾಗಿದೆ. ಸುಮಾರು ೪೩ ಲಕ್ಷ ರೈತರಿಗೆ ವಿಮಾ ಮೂಲಕ ಪರಿಹಾರ ನೀಡಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಿಧಾನಸಭೆಯಲ್ಲಿಂದು ಹೇಳಿದರು.


ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಅಲ್ಲಮಪ್ರಭು ಪಾಟೀಲ್ ರವರ ಪ್ರಶ್ನೆಗೆ ಉತ್ತರಿಸಿದ ಅವರು, ರೈತ ಸುರಕ್ಷತಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ೨೮ ಲಕ್ಷ ರೈತರನ್ನು ನೋಂದಾವಣೆ ಮಾಡಲಾಗಿದೆ. ರಾಜ್ಯದಲ್ಲಿ ಬೆಳೆ ನಷ್ಟವಾದ ೪೩ ಲಕ್ಷ ರೈತರಿಗೆ ಸುಮಾರು ೫ ಸಾವಿರ ಕೋಟಿಗೂ ಹೆಚ್ಚು ಪರಿಹಾರ ನೀಡಲಾಗಿದೆ. ಇತಿಹಾಸದಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಪರಿಹಾರ ಕೊಟ್ಟಿರಲಿಲ್ಲ ಎಂದರು.


ಅತಿವೃಷ್ಠಿ ಪರಿಹಾರ ಬೇರೆ, ಬೆಳೆ ಹಾನಿ ಪರಿಹಾರ ಬೇರೆ ಎಂದು ಹೇಳಿದ ಅವರು, ಫಸಲ್ ಭೀಮಾ ಯೋಜನೆಯಡಿ ರೈತರು ವಿಮಾ ಹಣದ ಶೇ. ೨ ರಷ್ಟನ್ನು ಮಾತ್ರ ಕಟ್ಟಬೇಕು. ಉಳಿದ ಶೇ. ೯೮ ರಷ್ಟು ಹಣವನ್ನು ರಾಜ್ಯ ಸರ್ಕಾರ ಭರಿಸುತ್ತದೆ ಎಂದು ಹೇಳಿದರು.


ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಕಲ್ಬುರ್ಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ೨೦೨೨-೨೩ನೇ ಸಾಲಿನಿಂದ ೨೦೨೫-೨೬ನೇ ಸಾಲಿನ ಮುಂಗಾರು ಹಂಗಾಮಿನವರೆಗೂ ಒಟ್ಟು ೨೩,೭೮೨ ರೈತರು ೩೧,೩೩೮.೧೩ ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆ ವಿಮೆಯಡಿ ನೋಂದಾಯಿಸಿಕೊಂಡಿದ್ದಾರೆ ಎಂದರು.


ಇದುವರೆಗೂ ಈ ಕ್ಷೇತ್ರ ವ್ಯಾಪ್ತಿಯಲ್ಲಿ ೧೩,೭೨೮ ರೈತರಿಗೆ ಬೆಳೆ ವಿಮೆ ಪರಿಹಾರ ನೀಡಲಾಗಿದೆ. ೯೪೫ ಪ್ರಕರಣಗಳು ಬಾಕಿಯಿದ್ದು, ಅವುಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಲಾಗುವುದು. ವಿಮೆಯಡಿ ರೈತರಿಗೆ ಯಾವುದೇ ಬಾಕಿ ಇಲ್ಲದಂತೆ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುತ್ತದೆ ಎಂದು ಅವರು ಹೇಳಿದರು.

Parliament session 

ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಗೆ ಸಂಬಂಧಿಸಿದಂತೆ 2024-25ನೇ ಸಾಲಿಗೆ ಬೆಳೆ ವಿಮೆ ದಾವೆಗಳ ಕುರಿತು ರೈತರಿಂದ ಯಾವುದೇ ದೂರುಗಳನ್ನು ಸರ್ಕಾರ ಸ್ವೀಕರಿಸಿದೆಯೇ? ಬೆಳೆ ಹಾನಿಯನ್ನು ನಿಖರವಾಗಿ ಅಂದಾಜು ಮಾಡಲು ಸರ್ಕಾರ ಯಾವ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದೆ? ಕಳೆದ ಐದು ವರ್ಷಗಳಲ್ಲಿ ಕರ್ನಾಟಕದ ರೈತರಿಗೆ ಜಿಲ್ಲಾವಾರು ನೀಡಲಾದ ಬೆಳೆ ವಿಮೆಯ ವಿವರಗಳೇನು? ರೈತರಿಗೆ ಬೆಳೆ ವಿಮಾ ದಾವೆಗಳನ್ನು ಸಮಯಕ್ಕೆ ಸರಿಯಾಗಿ ಹಾಗೂ ಶೀಘ್ರವಾಗಿ ಪಾವತಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ವಿವರಗಳೇನು? ಎಂದು ಸಂಸದ ಗೊವಿಂದ ಕಾರಜೋಳ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಕೃಷಿ ಸಚಿವರಿಗೆ ಪ್ರಶ್ನೆ ಕೇಳಿದರು.

ಸಂಸದರ ಪ್ರಶ್ನೆಗೆ ಉತ್ತರ ನೀಡಿದ ರಾಮನಾಥ್ ಠಾಕೂರ್, ಚಿತ್ರದುರ್ಗ ಜಿಲ್ಲೆಯಲ್ಲಿ 2,48,212 ಲಕ್ಷ ರೈತರಿಗೆ 559.91 ಕೋಟಿ ರೂ. ವಿಮಾ ಹಣ ದೊರಕಿದೆ. ಅದೇ ರೀತಿ ರಾಜ್ಯದಲ್ಲಿ 1,29,95,086 ಕೋಟಿ ರೈತರು ವಿಮೆಗೆ ನೊಂದಣಿ ಮಾಡಿಸಿಕೊಂಡಿದ್ದು, 1,584 ಕೋಟಿ ವಿಮೆ ಪ್ರೀಮಿಯಮ್ ಪಾವತಿಸಿರುತ್ತಾರೆ. ರಾಜ್ಯದ ರೈತರಿಗೆ 10,000 ಕೋಟಿಯಷ್ಟು ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯ ವಿಮೆ ಪರಿಹಾರ ಸಿಕ್ಕಿದೆ ಎಂದು ತಿಳಿಸಿದ್ದಾರೆ.

 ನಿಮ್ಮ ಜಮಾ (Belevime hana jama)ಸ್ಟೇಟಸ್ ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

 https://samrakshane.karnataka.gov.in/ 

ನಂತರ ವರ್ಷದ ಆಯ್ಕೆ "2023-24" ಮತ್ತು ಋುತು "Kharif

" ಎಂದು select ಮಾಡಿ, "ಮುಂದೆ/Go" ಮೇಲೆ click ಮಾಡಿ

Farmer ಕಾಲಂನಲ್ಲಿ "Check status." ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಆಧಾರ್ ನಂಬರ್(Aadhaar number) ಅಥವಾ Proposal number ಅಥವಾ Mobile number ಮೇಲೆ ಕ್ಲಿಕ್ ಮಾಡಿ, ನೀವು ಬೆಳೆವಿಮೆ(Cropinsurance) ಕಟ್ಟಿದ Acknowledgment number ಅಥವಾ Mobile number ಹಾಕಿ,Captcha type ಮಾಡಿ,Search ಮೇಲೆ ಕ್ಲಿಕ್ ಮಾಡಿ

(ಸೂಚನೆ-ಬೆಳೆವಿಮೆ/cropinsurance ಕಟ್ಟಿದ ರಶೀದಿ ಕಳೆದಿದ್ದರೆ ಅಥವಾ Acknowledgment number ಗೊತ್ತಿಲ್ಲದಿದ್ದರೆ,ಮೊಬೈಲ್ ನಂಬರ್ select ಮಾಡಿ,ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಬಹುದು)

ಈ ಕೆಳಗಿನಂತೆ ಬೆಳೆವಿಮೆ(crop insurance) ಜಮಾ ಮಾಹಿತಿ ದೊರೆಯಲಿದೆ.