SSLC result 2025-ಇಂದು ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟ,ಫಲಿತಾಂಶ ಚೆಕ್ ಮಾಡುವ ಡೈರೆಕ್ಟ್ ಲಿಂಕ್

ವಿದ್ಯಾರ್ಥಿಗಳು ಕಾತುರಲಿಂದ ಕಾಯುತ್ತಿರುವಂತ ಎಸ್ ಎಸ್ ಎಲ್ ಸಿ ಪರೀಕ್ಷೆ( Karnataka SSLC result ) ಫಲಿತಾಂಶದ ಬಗ್ಗೆ ಅಥಿಕೃತ ಮಾಹಿತಿ ಹೊರ ಬಿದ್ದಿದೆ.

SSLC result 2025-ಇಂದು ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟ,ಫಲಿತಾಂಶ ಚೆಕ್ ಮಾಡುವ ಡೈರೆಕ್ಟ್ ಲಿಂಕ್

SSLC result 2025-ಇಂದು ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟ,ಫಲಿತಾಂಶ ಚೆಕ್ ಮಾಡುವ ಡೈರೆಕ್ಟ್ ಲಿಂಕ್

ವಿದ್ಯಾರ್ಥಿಗಳು ಕಾತುರಲಿಂದ ಕಾಯುತ್ತಿರುವಂತ ಎಸ್ ಎಸ್ ಎಲ್ ಸಿ ಪರೀಕ್ಷೆ( Karnataka SSLC result ) ಫಲಿತಾಂಶದ ಬಗ್ಗೆ ಅಥಿಕೃತ ಮಾಹಿತಿ ಹೊರ ಬಿದ್ದಿದೆ. ಇಂದು ಬೆಳಗ್ಗೆ 12.30ಕ್ಕೆ ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶ ಘೋಷಣೆಯಾಗಲಿದೆ.


ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರಾದಂತ ಹೆಚ್.ಬಸವರಾಜೇಂದ್ರ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2025ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಪರೀಕ್ಷೆಗಳು ದಿನಾಂಕ: 21-03-2025 ರಿಂದ 04-04-2025ರವರೆವಿಗೆ ನಡೆಸಲಾಯಿತು ಎಂದಿದ್ದಾರೆ.

ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿರುತ್ತದೆ. ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಫಲಿತಾಂಶ ( Karnataka SSLC Exam-1 Results ) ಪ್ರಕಟಿಸುವ ಸಂಬಂಧ ದಿನಾಂಕ 02-05-2025 ರಂದು ಬೆಳಿಗ್ಗೆ 11-30 ಗಂಟೆಗೆ ಕರ್ನಾಟಕ ಶಾಲಾ ವರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಲ್ಲಿ ಮಾನ್ಯ ಸಚಿವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಇವರ ಅಧ್ಯಕ್ಷತೆಯಲ್ಲಿ ಸುದ್ದಿಗೋಷ್ಠಿಯನ್ನು ಕರೆಯಲಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕ SSLC ಪರೀಕ್ಷೆ-1ರ ಫಲಿತಾಂಶ ಈ ರೀತಿ ಚೆಕ್ ಮಾಡಿ

ವಿದ್ಯಾರ್ಥಿಗಳು ತಮ್ಮ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು https://karresults.nic.in  ಜಾಲತಾಣಕ್ಕೆ ಭೇಟಿ ನೀಡಿ, ತಮ್ಮ ನೋಂದಣಿ ಸಂಖ್ಯೆ ಸೇರಿದಂತೆ ಇತರೆ ಮಾಹಿತಿಯನ್ನು ನಮೂದಿಸಿ ಪಡೆಯಬಹುದಾಗಿದೆ.

ಈ ಫಲಿತಾಂಶವನ್ನು https://karresults.nic.in  ಜಾಲತಾಣದಲ್ಲಿ ದಿನಾಂಕ 02-05-2025ರ ಮಧ್ಯಾಹ್ನ 12-30 ಗಂಟೆಯ ನಂತರ ವೀಕ್ಷಿಸಬಹುದಾಗಿದೆ ಅಂತ ಮಾಹಿತಿ ನೀಡಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ವೆಬ್‌ಸೈಟ್‌ ಲಿಂಕ್ https://karresults.nic.in/  ಗೆ ಭೇಟಿ ನೀಡಿ. 


ತಮ್ಮ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಡ್ಮಿಷನ್‌ ಟಿಕೆಟ್‌ನಲ್ಲಿರುವ ರಿಜಿಸ್ಟರ್‌ ನಂಬರ್ ಟೈಪಿಸಿ.
ನಂತರ 'Submit' ಎಂಬಲ್ಲಿ ಕ್ಲಿಕ್ ಮಾಡಿ.


ಫಲಿತಾಂಶ ಪ್ರದರ್ಶಿತವಾಗುತ್ತದೆ. ಡೌನ್‌ಲೋಡ್‌ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.