Bembala bele-ಬೆಂಬಲ ಬೆಲೆಯಡಿ ಈ ಬೆಳೆ ಕ್ವಿಂಟಲ್ ಗೆ 8000 ರೂಪಾಯಿಗೆ ಖರೀದಿ,ಮಾರ್ಚ್ 31ರವರೆಗೆ ನೆೊಂದಣೆಗೆ ಅವಕಾಶ

<Krushirushi> <Msp> <MSP for tur> <MSP for safflower> <MSP for lentil> <MSP for wheat> <MSP for barley> <ಭತ್ತದ ಕನಿಷ್ಟ ಬೆಂಬಲ ಬೆಲೆ> <ಸೋಯಾಬೀನ್> <ಉದ್ದು> <Msp for soyabean urd dal> <soyabean> <Urs dal> <MSP> <Minimum support price> <Bembala bele> <Bembala bele Yojane> <msp for green gram> <msp for sunflower> <ರೈತ> <ಹಣ> <ಸಂದಾಯ> <ಸಹಾಯಧನ> <ಬೆಂಬಲಬೆಲೆ> <ಹೆಸರುಕಾಳು> <ಸೂರ್ಯಕಾಂತಿ> <ಬೆಳೆ> <ಬೆಳೆಸುದ್ದಿ>

Bembala bele-ಬೆಂಬಲ ಬೆಲೆಯಡಿ ಈ ಬೆಳೆ ಕ್ವಿಂಟಲ್ ಗೆ 8000 ರೂಪಾಯಿಗೆ ಖರೀದಿ,ಮಾರ್ಚ್ 31ರವರೆಗೆ ನೆೊಂದಣೆಗೆ ಅವಕಾಶ

Bembala bele-ಬೆಂಬಲ ಬೆಲೆಯಡಿ ಈ ಬೆಳೆ ಕ್ವಿಂಟಲ್ ಗೆ 8000 ರೂಪಾಯಿಗೆ ಖರೀದಿ,ಮಾರ್ಚ್ 31ರವರೆಗೆ ನೆೊಂದಣೆಗೆ ಅವಕಾಶ


ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್‌ಗೆ 8 ಸಾವಿರ ರೂ.ವಿನಂತೆ ತೊಗರಿ ಖರೀದಿಸಲು ರಾಜ್ಯದಲ್ಲಿ 330 ತೊಗರಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. 

ರೈತ ಬಾಂಧವರೇ, 
2024-25ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ. ಗುಣಮಟ್ಟದ ತೊಗರಿ ಖರೀದಿ ಪ್ರಕ್ರಿಯೆಗೆ ಸರ್ಕಾರ ಆದೇಶಿಸಿದ್ದು ರಾಜ್ಯದ ಪ್ರಮುಖ ಜಿಲ್ಲೆಗಳಾದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ವಿಜಯನಗರ, ಕೊಪ್ಪಳ, ಬೆಳಗಾವಿ, ಚಿತ್ರದುರ್ಗ, ಚಿಕ್ಕಬಳ್ಳಾಪೂರ ಹಾಗೂ ಕೋಲಾರ ಜಿಲ್ಲೆಗಳ ವ್ಯಾಪ್ತಿಯಲ್ಲಿ ತೆರೆದಿರುವ ಖರೀದಿ ಕೇಂದ್ರಗಳಲ್ಲಿ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ ರೂ. 7,550/- ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ರೂ. 450/- ಸೇರಿ ಒಟ್ಟು ರೂ. 8,000/-ನಿಗದಿಪಡಿಸಲಾಗಿರುತ್ತದೆ. ರೈತರು ಎಫ್.ಎ.ಕ್ಯೂ. ಗುಣಮಟ್ಟದ ತೊಗರಿ ಮಾರಾಟ ಮಾಡಿ ಬೆಂಬಲ ಬೆಲೆ ಯೋಜನೆಯ ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹ ಧನದ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ. 


ಸೂಚನೆ: 
+ ಪ್ರತಿ ಎಕರೆಗೆ 04 ಕ್ವಿಂಟಲ್‌ರಂತೆ - ಗರಿಷ್ಠ 40 ಕ್ವಿಂಟಲ್‌ವರೆಗೆ ಪ್ರತಿ ರೈತರಿಂದ ಖರೀದಿಸಲಾಗುವುದು. 
+ ರೈತ ಬಾಂಧವರು ತಮ್ಮ ಹತ್ತಿರದ PACS/FPO/TAPCMS ಗಳಲ್ಲಿ ತಮ್ಮ ಫೂಟ್ಸ್‌ನ ಎಫ್.ಐ.ಡಿ. ಸಂಖ್ಯೆ ನೀಡಿ ನೋಂದಣಿ ಮಾಡಿಕೊಂಡು ಎಫ್.ಎ.ಕ್ಯೂ, ಗುಣಮಟ್ಟದ ತೊಗರಿ ಮಾರಾಟ ಮಾಡಬಹುದಾಗಿದೆ. 
+ ಹೆಚ್ಚಿನ ಮಾಹಿತಿಗಾಗಿ ಉಚಿತ ದೂರವಾಣಿ ಸಂಖ್ಯೆ: 1800 425 1552 ಯನ್ನು ಕಛೇರಿಯ ಸಮಯದಲ್ಲಿ ಸಂಪರ್ಕಿಸಿರಿ. 


ಪ್ರಕಟಣೆ: ಕೃಷಿ ಮಾರಾಟ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ. 


ರಾಜ್ಯದ ಪ್ರಮುಖ ತೊಗರಿ ಬೆಳೆಯುವ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ವಿಜಯಪುರ, ಕೊಪ್ಪಳ, ಬಳ್ಳಾರಿ, ವಿಜಯನಗರ, ಬಾಗಲಕೋಟೆ, ಬೆಳಗಾವಿ, ಚಿತ್ರದುರ್ಗ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಅಂದಾಜು 330 ಖರೀದಿ ಕೇಂದ್ರಗಳು ಪ್ರಾರಂಭಿಸಲಾಗಿದೆ. 


ರೈತರು ತಮ ಹತ್ತಿರದ ಪಿಎಸಿಎಸ್/ಎಫ್‌ಪಿಒ/ಟಿಅಪಿಸಿಎಂಎಸ್ ಗಳಿಗೆ ಭೇಟಿ ನೀಡಿ ನೊಂದಣಿ ಮಾಡಿಕೊಂಡು ಬೆಂಬಲ ಬೆಲೆ ಯೋಜನೆಯ ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹ ಧನದ ಸುದುಪಯೋಗ ಪಡೆದುಕೊಳ್ಳುವಂತೆ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2024-25ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಖರೀದಿಗೆ ಸಂಭಂಧಿಸಿದಂತೆ, ಕೇಂದ್ರ ಸರ್ಕಾರದ ಬೆಂಬಲ ಬೆಲೆ 7,550 ರೂ. ಜೊತೆಗೆ ರಾಜ್ಯ ಸರ್ಕಾರದ ಪ್ರೋತಾಹಧನ 450 ರೂ. ಪ್ರತಿ ಕ್ವಿಂಟಾಲಗೆ, ಸೇರಿ ಒಟ್ಟು 8,000 ರೂ. ಪ್ರತಿ ಕ್ವಿಂಟಾಲ ರಂತೆ ತೊಗರಿ ಖರೀದಿಸಲು ಅವರು ಭರವಸೆ ನೀಡಿದ್ದರು. 

ತೊಗರಿ ಖರೀದಿಯ ನೊಂದಣಿ ಅವಧಿ ಮಾರ್ಚ್ ತಿಂಗಳಾಂತ್ಯದವರೆಗೆ ವಿಸ್ತರಣೆ 
''ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ತೊಗರಿ ಖರೀದಿಯ ನೋಂದಣಿ ಅವಧಿಯನ್ನು ಮಾರ್ಚ್ 31ರ ವರೆಗೆ ವಿಸ್ತರಣೆ ಮಾಡಲಾಗಿದೆ. ಇದುವರೆಗೆ ನೋಂದಣಿ ಮಾಡಿಕೊಳ್ಳದ ರೈತರು ತಕ್ಷಣ ಸಮೀಪದ ಪ್ರಾಥಮಿಕ ಪತ್ತಿನ ಸಹಕಾರ ಸಂಘ, ರೈತ ಉತ್ಪಾದಕರ ಕಂಪನಿ, ತಾಲೂಕು ಹುಟ್ಟುವಳಿ ಸಹಕಾರ ಸಂಘಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು!" 


ಶಿವಾನಂದ ಪಾಟೀಲ್, ಕೃಷಿ ಮಾರುಕಟ್ಟೆ ಸಚಿವರು