Saffron farming in Davanagere-ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಶ್ಮೀರದ ಕೇಸರಿ ಬೆಳೆದ ಯುವ ಕೃಷಿಕ

<Krushirushi> <ಕೇಸರಿಬೆಳೆ> <ಕೇಸರಿ> <ಕಾಶ್ಮಿರ ಕೇಸರಿ> <Saffronfarming> <Saffron> <kashmirsaffron>

Saffron farming in Davanagere-ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಶ್ಮೀರದ ಕೇಸರಿ ಬೆಳೆದ ಯುವ ಕೃಷಿಕ

Saffron farming in Davanagere-ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಶ್ಮೀರದ ಕೇಸರಿ ಬೆಳೆದ ಯುವ ಕೃಷಿಕ

ದಾವಣಗೆರೆ ಅಂದ್ರೆ ಸಾಮಾನ್ಯವಾಗಿ ಭತ್ತ, ಅಡಿಕೆ, ತೆಂಗು ಅಥವಾ ತರಕಾರಿಯನ್ನು ಬೆಳೆಯುವುದನ್ನು ನೋಡಿ ಇರ್ತೇವೆ. ಆದ್ರೆ ಇಲ್ಲೊಬ್ಬ ಯುವಕ ಕಾಶ್ಮೀರದಲ್ಲಿ ಬೆಳೆಯೋ ಕೇಸರಿ ಬೆಳೆದು ಅಚ್ಚರಿ ಮೂಡಿಸಿದ್ದಾರೆ.

ದಾವಣಗೆರೆ ಜಾಕೋಬ್ ಸತ್ಯರಾಜ್ ಎಂಬ ಯುವಕ ಕೇಸರಿ ಬೆಳೆ ಬೆಳೆದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಕಾಶ್ಮೀರದ ಬೆಳೆಯನ್ನು ದಾವಣಗೆರೆಯಲ್ಲೂ ಬೆಳೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲೇ ಪ್ರಥಮ ಬಾರಿಗೆ ಕೇಸರಿ ಬೆಳೆದವರು ಇವರಾಗಿದ್ದಾರೆ.

ಜಾಕೋಬ್ ಹರಿಹರದ ಮುನ್ಸಿಪಾಲಿಟಿಯಲ್ಲಿ ಹೊರಗುತ್ತಿಗೆ ನೌಕರಾಗಿ ವಾಟರ್ ಸಪ್ಲೇಯರ್ ಕೆಲಸ ಮಾಡ್ತಿದ್ದಾರೆ. ಇದರ ಜೊತೆ ಕೇಸರಿ ಬೆಳೆಯುತ್ತಿದ್ದಾರೆ.

ಭಾರತದಲ್ಲಿ ಕೇಸರಿ ಅತಿ ಹೆಚ್ಚಾಗಿ ಉತ್ಪಾದನೆ ಮಾಡುವ ಏಕೈಕ ರಾಜ್ಯ ಜಮ್ಮು ಮತ್ತು ಕಾಶ್ಮೀರ. ಆದ್ರೆ ರಾಜ್ಯದಲ್ಲಿ ಕೇಸರಿ ಬೆಳೆದು ತೋರಿಸಬೇಕೆಂಬ ಹಠದಿಂದ ಕೇಸರಿ ಬೆಳೆದಿದ್ದಾರೆ ಜಾಕೋಬ್.

ಬಾಡಿಗೆ ಮನೆಯಲ್ಲೇ ಇರುವ ಯುವಕ ಜಾಕೋಬ್, ಒಂದು ರೂಮ್ ಕೇಸರಿ ಬೆಳೆಯಲು ಮೀಸಲಿಟ್ಟಿದ್ದಾರೆ. 6×10 ಅಳತೆಯ ರೂಮ್ ನಲ್ಲಿ ರ್ಯಾಕ್‍ನಲ್ಲಿ ಕೇಸರಿ ಬೆಳೆ ಬೆಳೆದಿದ್ದಾರೆ.

ರೂಮ್‍ಗೆ ಥರ್ಮಾಕೋಲ್ ,AC, ಟೆಂಪರೇಚರ್ ಮಾಪನ ಅಳವಡಿಕೆ ಮಾಡಿದ್ದಾರೆ. ಬಿಸಿಗಾಳಿ ರೂಮ್ ಒಳಗಡೆ ಹೋಗದಂತೆ ರಕ್ಷಣೆ ಮಾಡ್ತಾ ಇದ್ದಾರೆ.

ಜಮ್ಮು ಕಾಶ್ಮೀರಕ್ಕೆ ತೆರಳಿ ಕೇಸರಿ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ್ದಾರೆ. ಅಲ್ಲದೇ ಒಂದು ಕೆಜಿ ಕೇಸರಿಗೆ 600 ರೂಪಾಯಿ ಹಣ ನೀಡಿ, ಜಮ್ಮು ಕಾಶ್ಮೀರದ ಪ್ಯಾಮ್ಪುರ್‍ದಿಂದ 60 ಕೆಜಿ ಕೇಸರಿ ಬೀಜ ತಂದಿದ್ದಾರೆ.

ಆದರೆ ಹವಾಮಾನ ಬದಲಾಣೆಯಿಂದ ಮನೆಗೆ ಬರುವಷ್ಟರಲ್ಲಿ 60 ಕೆಜಿ ಇದ್ದ ಕೇಸರಿ ಬೀಜ 45 ಕೆಜಿ ಆಗಿದ್ದವು. ಯಾವುದೇ ಔಷಧಿ ಸಿಂಪಡಣೆ ಮಾಡದೇ ಸಾವಯವ ಗೊಬ್ಬರ ಹಾಕಿ ಕೇಸರಿ ಬೆಳೆಯುತ್ತಿದ್ದಾರೆ ಕಾಕೋಬ್.

ಮೊದಲ ಬಾರಿಗೆ 12 ಗ್ರಾಂ ಕೇಸರಿ ಬೆಳೆ ತೆಗೆದ ಖುಷಿ ಪಟ್ಟಿದ್ದಾರೆ. ಇನ್ನೂ 10 ಗ್ರಾಂ ಬರುವ ನೀರಿಕ್ಷೆಯಲ್ಲಿದ್ದಾರೆ. ಪ್ರತಿ ಗ್ರಾಂ ಗೆ 800 ರಿಂದ 1,000ದ ವರೆಗೆ ಮಾರಾಟವಾಗುತ್ತೆ.

ಒಂದು ಕೇಸರಿ ಹೂವುವಿನಲ್ಲಿ ಮೂರು ರೀತಿಯ ಉಪಯೋಗ ಇದೆ. 1. ಕೇಸರಿ ಹೂವು ಕಾಸ್ಮೋಟಿಕ್ ಬಳಕೆಗೆ ಉಪಯೋಗ. 2. ಸ್ಟೆಮನ್ಸ್ ಔಷಧಿ ಉಪಯೋಗಕ್ಕಗಿ ಬಳಕೆ, 3.ಕೇಸರಿ. ಗರ್ಭಿಣಿ ಹೆಣ್ಣುಮಕ್ಕಳ ಉಪಯೋಗಕ್ಕೆ. ಇಂತಹ ವಿಶೇಷ ಬೆಳೆ ಬೆಳೆಯುವವರಿಗೆ ಸರ್ಕಾರದಿಂದ ಪ್ರೋತ್ಸಾಹ ನೀಡಬೇಕು. ಅಲ್ಲದೇ ಸರ್ಕಾರದಿಂದ ಸಬ್ಸಿಡಿ ನೀಡುವಂತ ಕೆಲಸ ಆಗಬೇಕು ಎಂದು ಜಾಕೋಬ್ ಸತ್ಯರಾಜ್ ಹೇಳಿದ್ದಾರೆ.


ನೀವೂ ಕೇಸರಿ ಬೆಳೆಯ ವಿಡಿಯೊ ನೋಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://youtu.be/_cvZDLiCvh8?si=73BbhbAHIqct7YPP