ಇನ್ನು ಮುಂದೆ ಪ್ರತಿ ತಿಂಗಳು ರೇಷನ್ ಪಡೆಯಲು ಅಗಸ್ಟ್ 31ರೊಳಗೆ ಇಕೆವೈಸಿ ಕಡ್ಡಾಯ, ನಿಮ್ಮ ಇಕೆವೈಸಿ ಸ್ಟೇಟಸ್ ಹೀಗೆ ಚೆಕ್ ಮಾಡಿ-Ration card ekyc status
<Krushirushi> <ರೇಷನ್ ಕಾರ್ಡ್ ಇಕೆವೈಸಿ> <Ration Card ekyc> <ಅಗಸ್ಟ್ ಅನ್ನಭಾಗ್ಯ ಹಣ> <August month Annabhagya amount> <ಆಧಾರ್ ಬ್ಯಾಂಕ್ ಲಿಂಕ್> <ಅನ್ನಭಾಗ್ಯ> <ಅನ್ನ ಭಾಗ್ಯ> <Annabhagya> <Anna bhagya> <ಆಧಾರ್ ರೇಷನ್ ಕಾರ್ಡ್ ಲಿಂಕ್> <Aadhaarrationlink> <Rationcard> <BPLcard> <APLcard> <BPL Card> <APL Card> <ರೇಷನ್ ಕಾರ್ಡ್> <How to download ration card> <ಪಡೀತರಚೀಟಿ> <ಗೃಹಲಕ್ಷ್ಮಿ> <ಅನ್ನಭಾಗ್ಯ> <ration card ekyc status>
ಇನ್ನು ಮುಂದೆ ಪ್ರತಿ ತಿಂಗಳು ರೇಷನ್ ಪಡೆಯಲು ಅಗಸ್ಟ್ 31ರೊಳಗೆ ಇಕೆವೈಸಿ ಕಡ್ಡಾಯ, ನಿಮ್ಮ ಇಕೆವೈಸಿ ಸ್ಟೇಟಸ್ ಹೀಗೆ ಚೆಕ್ ಮಾಡಿ-Ration card ekyc status
ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಬದಲಾಗಿ ನೀಡುತ್ತಿರುವ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗದಿದ್ದರೆ ತಪ್ಪದೇ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯಲ್ಲಿ ಇಕೆವೈಸಿ(Ration card Ekyc) ಕಡ್ಡಾಯವಾಗಿ ಪೂರ್ಣಗೊಳಿಸಿಕೊಳ್ಳಬೇಕು ಎಂದು ಆಹಾರ ಇಲಾಖೆ ಸೂಚನೆ ನೀಡಿದೆ.
ಈವರೆಗೂ ಇ-ಕೆವೈಸಿ ಮಾಡಿಸಿಕೊಳ್ಳದೇ ಇರುವ ರಾಜ್ಯದ ಯಾವುದೇ ಪಡಿತರ ಚೀಟಿದಾರರು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯಲ್ಲಿ ಇಕೆವೈಸಿ ಕಡ್ಡಾಯವಾಗಿ ಪೂರ್ಣಗೊಳಿಸಿಕೊಳ್ಳಬೇಕು.
ಪಡಿತರ ಚೀಟಿದಾರರ ಖಾತೆಗೆ ನೇರವಾಗಿ ಹಣ ವರ್ಗಾವಣೆಗೆ ಸಂಬಂಧಿಸಿದಂತೆ, ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್‍ನೊಂದಿಗೆ ಬ್ಯಾಂಕಿನಲ್ಲಿ ಇಕೆವೈಸಿ ಮತ್ತು ಎನ್.ಪಿ.ಸಿ.ಐ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು, ಹಾಗೆಯೇ ಖಾತೆ ಹೊಂದಿರದ ಕಾರ್ಡುದಾರರು ರಾಷ್ಟ್ರೀಕೃತ ಬ್ಯಾಕ್‍ನಲ್ಲಿ ಹೊಸ ಖಾತೆ ಅಥವಾ ಅಂಚೆ ಇಲಾಖೆಯಲ್ಲಿ ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಖಾತೆಯನ್ನು ಮಾಡಿಸಿಕೊಳ್ಳಬೇಕು.
Ration card ekyc status-ನಿಮ್ಮ ರೇಷನ್ ಕಾರ್ಡ್ ಇಕೆವೈಸಿ ಸ್ಟೇಟಸ್ ಹೀಗೆ ಚೆಕ್ ಮಾಡಿ
ಮೊದಲು ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
https://ahara.kar.nic.in/Home/EServices
ನಂತರ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ
ನಂತರ e-status ಮೇಲೆ ಕ್ಲಿಕ್ ಮಾಡಿ
ನಂತರ DBT Status ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಜಿಲ್ಲೆ select ಮಾಡಿ
ನಂತರ "Status of Ration Card/ಪಡಿತರ ಚೀಟಿ ವಿವರ"ಮೇಲೆ ಕ್ಲಿಕ್ ಮಾಡಿ
ನಂತರ without OTP Select ಮಾಡಿ
ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ Go ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ನಿಮ್ಮ ರೇಷನ್ ಕಾರ್ಡ್ ನ ಸಂಪೂರ್ಣ ವಿವರ,ನಿಮ್ಮ ಕುಟುಂಬದಲ್ಲಿ ಎಷ್ಟು ಜನರ ಇಕೆವೈಸಿ ಆಗಿದೆ,ಎಷ್ಟು ಜನರ ಇಕೆವೈಸಿ ಬಾಕಿ ಇದೆ ಎಂಬ ವಿವರ ಹಾಗೂ ಇಲ್ಲಿಯವರೆಗೂ ಎಷ್ಟು ಅಕ್ಕಿ ಪಡೆದಿದ್ದಿರಿ ಎಂಬ ಮಾಹಿತಿ ಸಿಗಲಿದೆ
ಇಕೆವೈಸಿ ಆಗಿರದಿದ್ದರೆ,ಹತ್ತಿರದ ಪಡಿತರ ವಿತರಿಸುವ ಕೇಂದ್ರಕ್ಕೆ ಹೋಗಿ ಬಯೊಮೆಟ್ರಿಕ್ ನಲ್ಲಿ ನಿಮ್ಮ ಹೆಬ್ಬೆಟ್ಟು ಒತ್ತಿ ,ಇಕೆವೈಸಿ ಮಾಡಿಸಿ